ಯುವ ದಲಿತ ಸಂಘರ್ಷ ಸಮಿತಿಯಿಂದ  ಪೂರ್ವಭಾವಿ ಸಭೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಡಿ.8: ಯುವ ದಲಿತ ಸಂಘರ್ಷ ಸಮಿತಿ ರಚಿಸಲಾಗಿದ್ದು, ಸಮಿತಿಯ ಉದ್ಘಾಟನಾ ಸಮಾರಂಭದ ನಿಮಿತ್ತ ಡಿ.೧೫ ರಂದು ಬೆಳಿಗ್ಗೆ ೧೧ ಗಂಟೆಗೆ ದಾವಣಗೆರೆಯ ರಾಮನಗರದ ಹೈಟೆಕ್. ಆಸ್ಪತ್ರೆಯ ಹಿಂಭಾಗದಲ್ಲಿರುವ ಗಾಂಧಿಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಿ.ಎನ್. ಮಲ್ಲಿಕಾರ್ಜುನ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಘಟನೆಯು ನೊಂದವರ ನೆರವಿಗೆ ಧಾವಿಸಿ ಸೋತವರಿಗೆ ಧ್ವನಿಯಾಗಿ ನಿಲ್ಲುವ ಹಾಗೂ ಸಮಾಜದಲ್ಲಿನ ಮೌಢ್ಯಗಳನ್ನು ದೂರ ಮಾಡಿ ಶಿಕ್ಷಣ, ಆರೋಗ್ಯದ ಕಡೆಗೆ ಗಮನ ಹರಿಸಲು. ಅಂಗವಿಕಲರ ಹಾಗೂ ವೃದ್ಧರ ಬಗ್ಗೆ ಕಾಳಜಿ, ಜಾತಿಯ ತಾರತಮ್ಯವಿಲ್ಲದೇ ಸರ್ವ ಜನಾಂಗದ ತುಳಿತಕ್ಕೆ ಒಳಗಾದವರಿಗೆ, ಸವಲತ್ತುಗಳಿಂದ ವಂಚಿತರಾದವರಿಗೆ ವಿಶೇಷವಾಗಿ ಯುವ ಸಮುದಾಯಕ್ಕೆ ಸದಾ ಜೊತೆಯಾಗಿ ನಿಂತು ಕಾರ್ಯನಿರ್ವಹಿಸಲು ಸದಾ ಸಿದ್ಧವಾಗಿದೆ ಎಂದರು.ಈಗಾಗಲೇ ದಾವಣಗೆರೆ ಜಿಲ್ಲಾಧ್ಯಕ್ಷರನ್ನಾಗಿ  ರಮೇಶ್, ಜಗಳೂರು ತಾಲ್ಲೂಕು ಅಧ್ಯಕ್ಷರಾಗಿ ಹೆಚ್. ಹನುಮಂತಪ್ಪ ಹಾಗೂ ಜಿಲ್ಲಾ ಉಪಾಧ್ಯಕ್ಷರಾಗಿ ಎ.ಕೆ. ಶ್ಯಾಮ್  ಅವರನ್ನು ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಸಂಘಟನೆಯು ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನೊಳಗೊಂಡು ಒಂದು ಹೊಸ ರೂಪದೊಂದಿಗೆ ಕಾರ್ಯನಿರ್ವಹಿಸಲು ಮುಂದಾಗಿದ್ದು, ಈ ಪೂರ್ವಭಾವಿ ಸಭೆಗೆ ಆಸಕ್ತ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಸಲಹೆ-ಸೂಚನೆಗಳನ್ನು ನೀಡಲು ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ್ ಜಯ ಕೋರಿದ್ದಾರೆ.ಸುದ್ದಿಗೋಷ್ಠಿಯಲ್ಲಿ ರಮೇಶ್, ಹೆಚ್.ಹೆಚ್. ಹನುಮಂತಪ್ಪ, ಎ.ಕೆ. ಶಾಮ್, ಪ್ರಕಾಶ್ ಉಪಸ್ಥಿತರಿದ್ದರು.