ಯುವ ಜೋಡಿಗಳ `ಪ್ರಣಯಂ’ ಲಿರಿಕಲ್  ಹಾಡು ಅನಾವರಣ

ಯುವ ಜೋಡಿಗಳ ಪ್ರಣಯದ ಕಥಾಹಂದರ ಒಳಗೊಂಡ “ಪ್ರಣಯಂ” ಚಿತ್ರದ ‘ಮಳೆಗಾಲ ಬಂತು ಸನಿಹ’ ಎಂಬ  ಹಾಡಿನ ಲಿರಿಕಲ್ ವೀಡಿಯೋವನ್ನು ಅಶ್ವಿನಿ ಪುನೀತ್ ರಾಜ್‍ಕುಮಾರ್ ಬಿಡುಗಡೆ ಹಾರೈಸಿದ್ದಾರೆ.

ನಿರ್ಮಾಪಕ ಪರಮೇಶ್ ಪ್ರೇಮಕಥೆಗೆ ಬಂಡವಾಳ ಹೂಡಿದ್ದು  ಎಸ್. ದತ್ತಾತ್ರೇಯ ಆಕ್ಷನ್ ಕಟ್ ಹೇಳಿದ್ದಾರೆ. ನಿಶ್ಚಿತಾರ್ಥ ಮಾಡಿಕೊಂಡ ಜೋಡಿಗಳ ಪ್ರೀತಿ ಪ್ರೇಮದ ಕಥೆ ಹೇಳಿದ್ದಾರೆ ನಿರ್ದೇಶಕರು. ಭರವಸೆ ನಟ ರಾಜವರ್ಧನ್, ನೈನಾ ಗಂಗೂಲಿ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಈ ವೇಳೆ ಮಾತಿಗಿಳಿದ ಸಾಹಿತಿ ಜಯಂತ್ ಕಾಯ್ಕಿಣಿ ,ಮಳೆಗಾಲದಲ್ಲಿ ಪ್ರೇಮಿಗಳಿಬ್ಬರು ತಮ್ಮ ಭಾವನೆಗಳನ್ನು ಹಾಡಿನ ಮೂಲಕ ವ್ಯಕ್ತಪಡಿಸುತ್ತಾರೆ. ಸಮಾಜವನ್ನು ಬೆಸೆಯುವ ಒಂದೇ ಮಾಧ್ಯಮ ಎಂದರೆ ಅದು ಸಿನಿಮಾ.ಚಿತ್ರಕ್ಕೆ ಒಳಿತಾಗಲಿ ಎಂದರು.

ನಿರ್ಮಾಪಕ ಪರಮೇಶ್ ,ಈಗ ಬಿಡುಗಡೆಯಾಗಿರುವ ಹಾಡು ಬೇರೆ ಮಟ್ಟಕ್ಕೆ ರೀಚ್ ಆಗುತ್ತೆ.ಪ್ರಯಣಂ ನಿಶ್ಚಿತಾರ್ಥದಿಂದ ಮದುವೆ ಆಗುವವರೆಗೆ ನಡೆಯುವ ಕಥೆ.ಮುಂದಿನ ತಿಂಗಳು  ಚಿತ್ರ ತೆರೆಗೆ ತರುವ ಉದ್ದೇಶವಿದೆ ಎಂದರೆ ನಿರ್ದೇಶಕ ದತ್ತಾತ್ರೇಯ ತಂಡ ಸೇರಿ ಒಳ್ಳೆಯ ಸಿನಿಮಾ ಕೊಟ್ಟಿದ್ದೇವೆ. ಜನ ಇಷ್ಟಪಡುತ್ತಾರೆ ಚಿಕ್ಕಮಗಳೂರು, ಮಡಿಕೇರಿಯ ಸುಂದರ ಲೊಕೇಶನ್‍ಗಳಲ್ಲಿ  ಚಿತ್ರದ ಚಿತ್ರೀಕರಣ ನಡೆಸಲಾಗಿದೆ ಎಂದರು.

ನಾಯಕ ರಾಜವರ್ಧನ್ ಲವರ್ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗೋವಿಂದೇಗೌಡ,  ಮಂಥನ, ಪ್ರಶಾಂತ್, ಸಮೀಕ್ಷಾ, ಪ್ರಿಯಾ ತರುಣ್ ಮುಂತಾದವರು ನಟಿಸಿದ್ದಾರೆ.

ಝಂಕಾರ್ ಮ್ಯೂಸಿಕ್ ನ ಭರತ್ ಜೈನ್ ಮಾತನಾಡಿ ಮನೋಮೂರ್ತಿ ಆರು ಮೆಲೋಡಿ ಹಾಡು ಮಾಡಿಕೊಟ್ಟಿದ್ದಾರೆ. ಒಳ್ಳೆಯದಾಗಲಿ ಎಂದರು. ವಿ. ನಾಗೇಶ್ ಆಚಾರ್ಯ ಛಾಯಾಗ್ರಹಣ. ಮದನ್ ಹರಿಣಿ ನೃತ್ಯ ನಿರ್ದೇಶನವಿದೆ.