ಯುವ ಜಾಗೃತಿ ವೇದಿಕೆಯಿಂದ ರೆಗೂಲೇಟರ್ ಆಕ್ಸೋ ಮೀಟರ್ ವಿತರಣೆ

ಕಲಬುರಗಿ:ಮೇ.20: ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರ ಸಹಯೋಗದಲ್ಲಿ ಸೂಫಿ ಮಾರ್ಗಾ ಕನ್ನಡ ದಿನ ಪತ್ರಿಕೆ ಮತ್ತು ಯುವ ಜಾಗೃತಿ ವೇದಿಕೆ ರೂಪಾಂತರ ತಂಡದ ನೇತೃತ್ವದಲ್ಲಿ ಇಂದು ನಗರದ ಹಾಗರಗಾ ಪ್ರದೇಶದಲ್ಲಿ ವಾಡಿಯ ಭಾಯಿ ಭಾಯಿ ಸಮೂಹ ಸಂಸ್ಥೆಗೆ ಆಕ್ಸಿಜನ್ ರೆಗೂಲೇಟರ್, ಡಿಜಿಟಲ್ ಆಕ್ಸೋ ಮೀಟರ್ ಹಾಗೂ ಗ್ಲಾಸ್ ಮಾಸ್ಕ್ ನೀಡಲಾಯಿತು.

ಗ್ರಾಮೀಣ ಭಾಗದಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸಾ ಸೌಕರ್ಯ ಇಲ್ಲದ ಪರದಾಡು ಸ್ಥಿತಿ ನಿರ್ಮಾಣವಾಗಿ ಜನರು ಸಹಾಯ ಹಸ್ತದ ನಿರೀಕ್ಷೆಯಲ್ಲಿದ್ದಾರೆ ಅವರ ಸಹಾಯಕ್ಕೆ ನಿಲ್ಲುವ ಅಗತ್ಯ ಪ್ರತಿಯೋಬ್ಬರ ಮೇಲಿದೆ ಎಂದು ಸಂಸ್ಥೆಯ ಜಿಲ್ಲಾ ಅಧ್ಯಕ್ಷರಾದ ಶಮಶೀರ್ ಅಹ್ಮದ್ ಅವರು ತಿಳಿಸಿ, ತಮ್ಮ ಕಾರ್ಯಾವನ್ನು ಗುರುತಿಸಿ ಬೆಂಬಲ ನೀಡಿದ ಯುವ ಜಾಗೃತಿ ವೇದಿಕೆ ಮತ್ತು ಹೆಸರು ಹೇಳಲಿಚ್ಛಿಸದ ಅಧಿಕಾರಿಗೆ ಧನ್ಯವಾದ ಸಲ್ಲಿಸಿದರು.

ಯುವ ಜಾಗೃತಿ ವೇದಿಕೆ ಕಾರ್ಯಾದರ್ಶಿಗಳಾದ ಸಾಜಿದ ಅಲಿ ಮಾತನಾಡಿ, ಕೊರೊನಾ ಮಹಾಮಾರಿ ಸಮುದಾಯದ ಮಟ್ಟದಲ್ಲಿ ಹಬ್ಬಿದ್ದು, ಇದರ ಅಂತ್ಯ ಸಮುದಾಯದಿಂದ ಆಗಬೇಕು ಪ್ರತಿಯೋಬ್ಬರು ಕೊರೊನಾ ನಿಯಂತ್ರಣಕ್ಕೆ ಮತ್ತು ತಡೆಯುವ ನಿಟ್ಟಿನಲ್ಲಿ ಶ್ರಮಿಸಬೇಕು. ಜೊತೆಗೆ ಕಷ್ಟದಲ್ಲಿರುವ ಜನರಿಗೆ ಧೈರ್ಯ ತುಂಬಿ ಅವರ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಕೆಲಸ ಮಾಡಿ ಜಾಗೃತಿ ವಹಿಸುವ ದಿಸೆಯಲ್ಲಿ ಈ ಕೊರೊನಾ ನಿಯಂತ್ರಣವನ್ನು ಮಾಡಬೇಕಾಗಿದೆ ಎಂದು ಕರೆ ನೀಡಿದರು.

ಈ ವೇಳೆಯಲ್ಲಿ ರೂಪಾಂತರ ತಂಡದ ಪೂಜಾ ಸಿಂಗೆ, ಪ್ರಿಯಾಂಕ್ ಮಾನವಿನಕರ್ ಹಾಗೂ ಸರ್ಫರಾಜ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.