ಯುವ ಜಾಗೃತಿ ಯಾತ್ರೆ ಉಪನ್ಯಾಸ ಆ.8 ರಂದು

ಶಹಾಬಾದ:ಆ.4:ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಂಸ್ಥೆ ಸೇಡಂ ಸಂಚಾಲಿತ ವಿಕಾಸ ಅಕೆಡೆಮಿ ಶಹಾಬಾದ ತಾಲೂಕ ಘಟಕ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ, ಎಸ್.ಎಸ್.ಮರಗೋಳ ಮಹಾವಿದ್ಯಾಲಯದ ಸಹಯೋಗದೊಂದಿಗೆ ಅಗಷ್ಟ 8 ರಂದು ಪದವಿ ವಿದ್ಯಾರ್ಥಿಗಳಿಗಾಗಿ “ಯುವ ಜಾಗೃತಿ ಯಾತ್ರೆ” ಉಪನ್ಯಾಸ ಹಮ್ಮಿಕೊಳ್ಳಲಾಗಿದೆ ಎಂದು ವಿಕಾಸ ಅಕೆಡೆಮಿ ತಾಲೂಕ ಸಹ ಸಂಚಾಲಕ ಶರಣು ವಸ್ತ್ರದ ತಿಳಿಸಿದ್ದಾರೆ.

ಮಂಗಳವಾರ ಮಧ್ಯಹ್ನ 12 ಗಂಟೆಗೆ ಮರಗೋಳ ಮಹಾವಿದ್ಯಾಲಯದ ಸಭಾಗೃಹದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಖ್ಯಾತ ಚಿಂತಕ, ಲೈಫ್ ಗುರು ಪ್ರೋ. ಸಿದ್ದು ಯಾಪಲಪರವಿ ಉಪಸ್ಥಿತರಿದ್ದು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವರು. ಮುಖ್ಯ ಅತಿಥಿಗಳಾಗಿ, ಜಗದೀಶ ಕಡಬಗಾಂವ, ವಿಕಾಶ ಅಕೆಡೆಮಿ ಜಿಲ್ಲಾ ಸಂಚಾಲಕ ಶಂಕರ ಸುಲೇಗಾಂವ, ಕ.ಕ.ಶಿಕ್ಷಣ ಸಂಸ್ಥೆ ಸದಸ್ಯರಾದ ಅನೀಲ ಮರಗೋಳ, ಅಕೆಡೆಮಿ ತಾಲೂಕ ಸಂಚಾಲಕ ಕನಕಪ್ಪ ದಂಡಗುಲಕರ್, ಕಸಾಪ ತಾಲೂಕ ಅಧ್ಯಕ್ಷ ಶರಣಬಸಪ್ಪ ಕೋಬಾಳ, ಮರಗೋಳ ಕಾಲೇಜಿನ ಪ್ರಾಚಾರ್ಯ ಪ್ರೊ: ಕೆ.ಬಿ.ಬಿಲ್ಲವ, ಜಿ.ಆರ್.ಗೊಳೇದ ಕಾಲೇಜಿನ ಪ್ರಾಚಾರ್ಯ ಚಂದ್ರಶೇಖರ ಮಾದರ, ಕೂಡಲ ಸಂಗಮ ಕಾಲೇಜಿನ ಪ್ರಾಚಾರ್ಯ ನಾನಾಗೌಡ ಹಿಪ್ಪರಗಿ, ಕರ್ನಾಟಕ ಕಾಲೇಜಿನ ಪ್ರಾಚಾರ್ಯ ಬಾಲರಾಜ ಮಾಚನೂರ ಉಪಸ್ಥಿತರಿರುವರು.