ಯುವ ಜನ ಸಬಲೀಕರಣ ನಿಗಮ ಸ್ಥಾಪನೆಗೆ ಮನವಿ


ದಾವಣಗೆರೆ.ನ.೨೦; ಯುವ ಜನ ಸಬಲೀಕರಣ ನಿಗಮ ಸ್ಥಾಪಿಸುವಂತೆ ಒತ್ತಾಯಿಸಿ ಎಐವೈಎಫ್ ಪದಾಧಿಕಾರಿಗಳಿಂದು ಉಪವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರ ಕಳೆದ ೧ ತಿಂಗಳ ಅವಧಿಯಲ್ಲಿ೨ ನಿಗಮ ಸೇರಿದಂತೆ ಒಂದು ಪ್ರಾಧಿಕಾರ ರಚಿಸಲು ಆದೇಶಿಸಿದೆ.ಈಗಾಗಲೇ ರಚನೆ ಮಾಡಲಾಗಿದೆ.ಈ ಹಿನ್ನೆಲೆಯಲ್ಲಿ ಮತ್ತಷ್ಟು ನಿಗಮಗಳನ್ನು ಸ್ಥಾಪಿಸುವಂತೆ ರಾಜ್ಯದ ನಾನಾ ಭಾಗಗಳಿಂದ ಒತ್ತಾಯಗಳು ಕೇಳಿಬರುತ್ತಿವೆ.ಪ್ರತಿಯೊಂದು ಜಾತಿ ಧರ್ಮಗಳಿಗೆ ತೆರೆಯುತ್ತಿರುವ ನಿಗಮ ಮತ್ತು ಪ್ರಾಧಿಕಾರಗಳಿಂದ ರಾಜ್ಯದ ಯುವಜನರಿಗೆ ಯಾವುದೇ ರೀತಿಯ ಉಪಯೋಗವಾಗುವುದಿಲ್ಲ. ರಾಜ್ಯದಲ್ಲಿ ೧.ಕೋಟಿ ೮೦ ಲಕ್ಷ ಯುವಜನರಿದ್ದಾರೆ.ಅವರ ಅಭಿವೃದ್ದಿಯು ರಾಜ್ಯ ಮತ್ತು ದೇಶದ ಅಭಿವೃದ್ದಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ.ಯುವಜನರ ಸಬಲೀಕರಣ ದೃಷ್ಠಿಯನ್ನು ಸರ್ಕಾರ ಹೊಂದಬೇಕು ಅದಕ್ಕಾಗಿ ಯುವಜನ ಸಬಲೀಕರಣ ನಿಗಮ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು. ಈಗಾಗಲೇ ೧೦೧೨ ರಲ್ಲಿ ಅಂದಿನ ರಾಜ್ಯ ಸರ್ಕಾರ ಸ್ವಾಮಿ ವಿವೇಕಾನಂದ ಯುವ ಸಬಲೀಕರಣ ನಿಗಮ ಸ್ಥಾಪನೆಗೆ ಮುಂದಾಗಿತ್ತು ಆದರೆ ನಂತರದ ದಿನಗಳಲ್ಲಿ ನೆನೆಗುದಿಗೆ ಬಿದ್ದಿತು. ಯುವ ಜನರ ಅಭಿವೃದ್ದಿಗಾಗಿ ನಿಗಮ ಸ್ಥಾಪಿಸುವ ಅಗತ್ಯವಿದೆ ಆದ್ದರಿಂದ ಪ್ರಸ್ತುತ ಆಡಳಿತದಲ್ಲಿರುವ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಸರ್ಕಾರವು ಇಂದು ರಚಿಸುತ್ತಿರುವ ಪ್ರಾಧಿಕಾರ ಮತ್ತು ನಿಗಮ ಮಂಡಳಿಗಳು ಕೇವಲ ಒಂದು ಜಾತಿ ಧರ್ಮಕ್ಕೆ ಸೀಮಿತವಾದರೂ ಆ ಸಮುದಾಯದ ಪ್ರಬಲರ ಹಿತಾಸಕ್ತಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ ಇದರಿಂದ ಆ ಸಮುದಾಯದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಪ್ರಯೋಜನವಿಲ್ಲ.ಯುವ ಜನ ಕೇಂದ್ರದಿಂದ ಮಾತ್ರ ಯುವಸಮೂಹಕ್ಕೆ ನೆರವು ಸಿಗಲಿದೆ ಆದ್ದರಿಂದ ಸರ್ಕಾರ ನಿಗಮ ಸ್ಥಾಪಿಸಬೇಕೆಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಆವರಗೆರೆ ವಾಸು,ಕೆರನಹಳ್ಳಿ ರಾಜು,ತಿಪ್ಪೇಶ್,ಫಜುಲಲ್ಲು,ಗದಿಗೇಶ್,ಇರ್ಫಾನ್,ಮಂಜುನಾಥ್ ದೊಡ್ಡಮನೆ,ಪರಶುರಾಮ್ ಸೇರಿದಂತೆ ಅನೇಕರಿದ್ದರು.