ಯುವ ಜನಾಂಗದ ಪ್ರಗತಿಗೆ ಗ್ರಂಥಾಲಯಗಳು ಪೂರಕವಾಗುತ್ತವೆ ;ಭೀಮನಗೌಡ ಪೂಜಾರ

ಕುಕನೂರು,ನ.19- ಗ್ರಾಮೀಣ ಭಾಗದ ಯುವಜನಾಂಗದ ಪ್ರಗತಿಗೆ ಗ್ರಂಥಾಲಯಗಳು ಪೂರಕವಾಗುತ್ತವೆ ಎಂದು ಪೊಲೀಸ್ ಇಲಾಖೆಯ ಭೀಮನಗೌಡ ಪೂಜಾರ ಹೇಳಿದರು. ಅವರು ಬುಧವಾರ ತಾಲೂಕಿನ ರ್ಯಾವಣಿಕಿ ಗ್ರಾಮದಲ್ಲಿ ಸಾರ್ವಜನಿಕ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು, ಪದವೀಧರ ಯುವಕರು ಊರಿಗೆ ಹೊಂದಿಕೊಂಡಿರುವ ಅಂಬಾದೇವಿಯ ದೇಗುಲದ ಒಂದು ಕೊಠಡಿಯು ಬಹುದಿನಗಳಿಂದ ಖಾಲಿ ಇದ್ದು ಇದನ್ನರಿತು ಆಸಕ್ತ ಯುವಕರು ಸೇರಿ ಊರಿಗೆ ಶೈಕ್ಷಣಿಕ ಪ್ರಗತಿಗೆ ಗ್ರಂಥಾಲಯ ಅವಶ್ಯಕವಾಗಿದೆ ಎಂದು ಈ ಖಾಲಿ ಇರುವ ಕೊಠಡಿಯನ್ನು ಸರಕಾರ ಯಾವ ಸಹಾಯವಿಲ್ಲದೆ ಯುವಕರು ಸ್ಚ ಇಚ್ಛೆಯಿಂದ ಇಂದು ಗ್ರಂಥಾಲಯ ಉದ್ಘಾಟನೆ ಮಾಡಿ ಗ್ರಾಮಕ್ಕೆ ಮಾದರಿಯಾಗಿದ್ದಾರೆ ನಾವೂ ಈ ಸಾರ್ವಜನಿಕ ಗ್ರಂಥಾಲಯಕ್ಕೆ ಅವಶ್ಯಕವಿರುವ ಮೂಲ ಸೌಕರ್ಯವನ್ನು ಒದಗಿಸಲು ಸಿದ್ಧನಿದ್ದೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಕನೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರುದ್ರಪ್ಪ ಭಂಡಾರಿ ಅವರು ಮಾತನಾಡಿ, ಜ್ಞಾನದ ದೇಗುಲ ಈಗ್ರಂಥಾಲಯಗಳು ಗ್ರಾಮೀಣ ಮಟ್ಟದಲ್ಲಿ ಹೊಸ ಕ್ರಾಂತಿಯ ಅಲೆ ಎಬ್ಬಿಸುವ ಮೂಲಕ ಗ್ರಾಮೀಣ ಪ್ರದೇಶದ ಮಾದರಿ ಗ್ರಾಮವಾಗಿ ಹೊರ ಹೊಮ್ಮಲಿ, ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕುಕನೂರು ಠಾಣೆಯ ಎ.ಎಸ್.ಐ ಮಲ್ಲೇಶಪ್ಪ ಅವರು ನಿರುಪಯುಕ್ತವಾಗಿದ್ದ ಕಟ್ಟಡವು ಇಂದು ಜ್ಞಾನದೇಗುಲವಾಗಿ ಮಾರ್ಪಡಿಸಿದ ರ್ಯಾವಣಿಕಿ ಗ್ರಾಮದ ಯುವಕರ ಕ್ರಿಯಾಶೀಲತೆ ತಾಲೂಕಿನಲ್ಲಿ ಮಾದರಿಯಾಗಿದೆ ಈ ರೀತಿಯ ಬೆಳವಣಿಗೆಗಳು ಎಲ್ಲಾ ಗ್ರಾಮಗಳಿಗೆ ಮಾದರಿಯಾಗಲಿ ಎಂದು ಹಾರೈಸಿದರು. ಕನ್ನಡ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಮುರಾರಿ ಭಜಂತ್ರಿ, ಕನ್ನಡ ಪ್ರಭ ವರದಿಗಾರ ಕನಕರಾಯ ಭಜಂತ್ರಿ, ಟಿವಿ ಚಾನೆಲ್ಲಿನ ಈರಯ್ಯ ಕುರ್ತಕೋಟಿ, ಶಿಕ್ಷಕರಾದ ಅಶೋಕ ಮಾದಿನೂರು, ಸಜ್ಜನ್,ಹನುಮಂತಪ್ಪ ಮುತ್ತಾಳ, ಈಶಯ್ಯ ಗುಡಿ, ಗುಡದಪ್ಪ ಕಟ್ಟಿಮನಿ, ಶರಣಪ್ಪ ಬಳುಟಗಿ, ಜೀವನಸಾಬ ಶಿಕ್ಷಕ, ಶರಣಪ್ಪ ಜಕ್ಕಲಿ, ಯೋಧ ವೀರಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಉಪನ್ಯಾಸಕ ಬಸವರಾಜ ಹುಲಿ ಸ್ವಾಗತಿಸಿ ನಿರೂಪಿಸಿದರು.
ಪೋಟೋ:ಕುಕನೂರು ತಾಲೂಕಿನ ರ್ಯಾವಣಿಕಿ ಗ್ರಾಮದಲ್ಲಿ ಸಾರ್ವಜನಿಕ ಗ್ರಂಥಾಲಯ ಉದ್ಘಾಟಿಸಿದ ಗಣ್ಯರು.