ಯುವ ಜನರಲ್ಲಿ ಕನ್ನಡ ಪ್ರಜ್ಞೆ ಬೆಳೆಸಿ

(ಸಂಜೆವಾಣಿ ವಾರ್ತೆ)
ಹುಮನಾಬಾದ್ :ಅ.29: ಕನ್ನಡ ಸಾಹಿತ್ಯ ಪರಿಷತ್ತು ಯುವ ಜನರಲ್ಲಿ ಕನ್ನಡ ಪ್ರಜ್ಞೆ ಬೆಳೆಸಬೇಕು ‘ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ದುರ್ಯೋಧನ ಹೂಗಾರ ಅವರು ಹೇಳಿದರು . ಅಧ್ಯಕ್ಷ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಸಮಿತಿಯಿಂದ ನಿರ್ಮಲಾ ರಾಯಚೂರಕರ್ ಅವರ ಮನೆಯಲಿ ನಡೆದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು . ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಅತ್ಯಂತ ಸುಲಭವಾದ ಭಾಷೆ , ನಮ್ಮ ತನವನ್ನು ನಾವು ಉಳಿಸಿ , ಬೆಳೆಸಬೇಕಿದೆ . ಕನ್ನಡ ಭಾಷೆಯನ್ನು ಬೆಳೆಸಿದರೆ ನಮ್ಮ ಸಂಸ್ಕøತಿ ಉಳಿಯುತ್ತದೆ ಎಂದು ಅವರು ಹೇಳಿದರು . ಕನ್ನಡ ಸಾಹಿತ್ಯ ಪರಿಷತ್ತಿನ
ತಾಲ್ಲೂಕು ಸಮಿತಿ ಅಧ್ಯಕ್ಷ ಸಿದ್ಧಲಿಂಗ ನಿರ್ಣಾ ಮಾತನಾಡಿದರು . ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಂಡರಿನಾಥ ಹುಗ್ಗಿ ಹಾಗೂ ಕಸಾಪ ಗೌರವ ಕಾರ್ಯದರ್ಶಿ ಡಾ.ಭುವನೇಶ್ವರಿ ಪ್ರಾಸ್ತಾವಿಕವಾಗಿ ಮಾತನಾಡಿದರು . ಸರಳಾ ತುಪ್ಪದ ಅವರು ನಿರ್ಮಲಾ ರಾಯಚೂರಕರ್ ಅವರೊಂದಿಗೆ ಸಂವಾದ ನಡೆಸಿದರು . ಕಸಾಪ ಜಿಲ್ಲಾ ಸಮಿತಿ ಉಪಾಧ್ಯಕ್ಷ ವೀರಣ್ಣಾಕುಂಬಾರ , ಮಡೆಪ್ಪ ಕುಂಬಾರ , ಶಶಿಧರ ಪಾಟೀಲ , ಶ್ರೀಕಾಂತ ಸೂಗಿ , ವಿಜಯಕುಮಾರ್ ಚಟ್ಟಿ , ಜೈವಂತ ಉಪ್ಪಾರ , ಸಿದ್ದರಾಮ ಇಂಡಿ , ರೇವತಿ , ಅಂಬಿಕಾ , ಸುನೀತಾ ಪಾಟೀಲ ಇದ್ದರು . ಕಲಾವತಿ ಸ್ವಾಗತಿಸಿದರು . ಜೈಶ್ರೀ ಕಾಳಗಿ ನಿರೂಪಿಸಿದರು . ಆರ್.ಎಂ. ಭಂಕಲಗಿ ವಂದಿಸಿದರು .