ಯುವ ಜನತೆ ಬಾಬು ಜಗಜೀವನರಾಂರ ತತ್ವ ಸಿದ್ದಾಂತ ಅರಿಯಬೇಕಿದೆ : ನಾಟೇಕರ್

ಶಹಾಪುರ:ಎ.6:ಹೋತಪೇಟ ಗ್ರಾಮದಲ್ಲಿ ಹಸಿರು ಕ್ರಾಂತಿಯ ಹರಿಕಾರ ನಾಡು ಕಂಡ ಅಪ್ರತಿಮ ನಾಯಕ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ರವರ 114ನೇ ಜಯಂತಿವನ್ನು ತಾಲೂಕಿನ ಹೋತಪೇಠ ಗ್ರಾಮದಲ್ಲಿ ಸರಳ ರೀತಿಯಲ್ಲಿ ಆಚರಣೆ ಮಾಡಲಾಯಿತು.

ನಂತರ ಗ್ರಾಮದ ಮಾದಿಗ ಸಮುದಾಯದ ಯುವ ಮುಖಂಡರಾದ ಹೊನ್ನಪ್ಪ ನಾಟೇಕಾರ ಮಾತನಾಡಿ, ಶೋಷಿತರ ಜೀವನಾಡಿಯಾಗಿ ಮತ್ತು ಅವರ ಏಳಿಗೆಗಾಗಿ ದುಡಿದ ಅಪ್ರತಿಮ ನಾಯಕ ಡಾ.ಬಾಬು ಜಗಜೀವನರಾಂರವರ ತತ್ವ ಸಿದ್ದಾಂತಗಳು ಇಂದಿನ ಯುವ ಪಿಳಿಗೆ ಅರಿತು ಸಮಾಜಕ್ಕೆ ಮಾದರಿ ವ್ಯಕ್ತಿಗಳಾಗಬೇಕಿದೆ. ಜೊತೆಗೆ ಹಿರಿಯರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಒಳ್ಳೆಯ ಜೀವನ ರೂಪಿಸಬೇಕು ಎಂದು ನುಡಿದರು.

ಇದೇ ಸಂಧರ್ಭದಲ್ಲಿ ಕನಕ ಯುವ ಸೇನೆ ಉತ್ತಮ ಹೋತಪೇಠ ಗ್ರಾಮ ಘಟಕ ಅಧ್ಯಕ್ಷರು ಶರಣು ಯಾದಗಿರಿ ಹೋತಪೇಟ, ಮಾದಿಗ ಮೀಸಲಾತಿ ಹೋರಾಟ ಸಮಿತಿ ಗ್ರಾಮ ಘಟಕ ಅಧ್ಯಕ್ಷರಾದ ಭೀಮರಾಯ ಶೇಖಸಿಂಧಿ, ಧರ್ಮಣ್ಣ ಗೌಂಡಿ, ನಾನಸಾಬ ನಾಟೇಕಾರ, ಹಣಮಂತ ಶೇಖಸಿಂಧಿ, ಭೀಮರಾಯ ನಾಟೇಕಾರ, ಧರ್ಮಣ್ಣ ತಳಿಗೇರಿ, ಮಾರುತಿ ನಾಟೇಕಾರ, ಭೀಮು ತಳಿಗೇರಿ, ಜಟೇಪ್ಪ ನಾಟೇಕಾರ,ಅಂಬ್ರೇಶ ಟೋಕಾಪೂರ, ದೇವೀಂದ್ರ ಶೇಖಸಿಂಧಿ ಸೇರಿದಂತೆ ಗ್ರಾಮದ ಮುಖಂಡರು, ಮಹಿಳೆಯರು ಮಕ್ಕಳು ಸೇರಿದಂತೆ ಇತರರು ಇದ್ದರು.