ಯುವ ಜನತೆ ಈ ದೇಶದ ಬಹುದೊಡ್ಡ ಸಂಪತ್ತು

ರಾಯಚೂರು,ಜು.೦೪-
ನಗರದ ಪ್ರತಿಷ್ಠಿತ ತಾರಾನಾಥ ಶಿಕ್ಷಣ ಸಂಸ್ಥೆಯ ಸೋಮ ಸುಭದ್ರಮ್ಮ ರಾಮನಗೌಡ ಮಹಿಳಾ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಜಿಲ್ಲಾ ಏಡ್ಸ್ ತಡೆ ಮತ್ತು ನಿಯಂತ್ರಣ ಘಟಕದ ಸಹಯೋಗದೊಂದಿಗೆ ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಮಲ್ಲಯ್ಯ ಎಂ. ಮಠಪತಿ ಜಿಲ್ಲಾ ಮೇಲ್ವಿಚಾರಕರು ಜಿಲ್ಲಾ ಏಡ್ಸ್ ತಡೆ ಮತ್ತು ನಿಯಂತ್ರಣ ಘಟಕ ರಾಯಚೂರು ಇವರು ಮಾತನಾಡಿ ಯುವ ಜನತೆಯ ಆರೋಗ್ಯವೇ ಈ ದೇಶದ ಬಹುದೊಡ್ಡ ಸಂಪತ್ತು. ಇಂದಿನ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮಾರಣಾಂತಿಕ ಏಡ್ಸ್ ರೋಗಕ್ಕೆ ತುತ್ತಾಗುತ್ತಿರುವುದು ಕಳವಳಕಾರಿ ಸಂಗತಿ. ಏಡ್ಸಗೆ ಅತಿದೊಡ್ಡ ಕಾರಣವೆಂದರೆ ಮಾನವನ ರೋಗ ನಿರೋಧಕ ಶಕ್ತಿಯ ಕೊರತೆ. ಊIಗಿ ಒಂದು ರೀತಿಯ ವೈರಸ್ ಆಗಿದ್ದು ಅದು ನಮ್ಮ ರಕ್ತಕ್ಕೆ ಹೋಗುವ ಮೂಲಕ ಬಿಳಿ ರಕ್ತ ಕಣಗಳನ್ನು ನಾಶಪಡಿಸುತ್ತದೆ. ಪ್ರಪಂಚದಾದ್ಯಂತ ಯಾವುದೆ ದೇಶದಲ್ಲಿ ಏಡ್ಸ್‌ಗೆ ಯಾವುದೇ ಚಿಕಿತ್ಸೆ ಇಲ್ಲ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ವ್ಯಕ್ತಿಯು ತನ್ನ ಜೀವನವನ್ನು ಕಳೆದುಕೊಳ್ಳಬಹುದು. ಈ ಭಯಾನಕ ಕಾಯಿಲೆಯ ಸೊಂಕಿಗೆ ಒಳಗಾದ ನಂತರ ವಕ್ತಿಯು ಒಂದರ ನಂತರ ಒಂದರಂತೆ ಇತರ ಕಾಯಿಲೆಗಳಿಗೆ ಗುರಿಯಾಗುತ್ತಾನೆ.
ಇದು ಸಾಮಾಜ್ಯವಾಗಿ ಅಸುರಕ್ಷಿತ ಲೈಂಗಿಕತೆಯ ಮೂಲಕ ಮತ್ತು ಚುಚ್ಚು ಮದ್ದು ಅಥವಾ ಎಚ್.ಐ.ವಿ ಯೊಂದಿಗಿನ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿರುವ ಉಪಕರಣಗಳನ್ನು ಹಂಚಿಕೊಳುವುದರ ಮೂಲಕ ಹರಡುತ್ತದೆ. ರೋಗಗಳಲ್ಲಿ ಪಿತ್ರಾರ್ಜಿತ, ಪತ್ರಾರ್ಜಿತ, ಸ್ವಯಾರ್ಜಿತ ಎಂಬ ರೂಪಗಳಲ್ಲಿ ರೋಗಗಳ ಆಗಮನವಾಗುತ್ತವೆ, ಏಡ್ಸ ಎಂಬುದು ಸ್ವಯಾರ್ಜಿತ ರೋಗವಾಗಿದ್ದು ಪ್ರತಿಯೊಬ್ಬರು ನಡತೆಯನ್ನು ಜಾಗರೂಕರಾಗಿ ಜೀವನವನ್ನು ನಡೆಸುವ ಮೂಲಕ ಪರಿಶುದ್ಧವಾಗಿ ಇಟ್ಟುಕೊಂಡು ಇಂತಹ ರೋಗಗಳನ್ನು ತಡೆಗಟ್ಟಲುಸಾಧ್ಯ. ಏಡ್ಸ್‌ಗೆ ಪ್ರಸ್ತುತ ಯಾವುದೇ ಚಿಕಿತ್ಸೆ ಇಲ್ಲದಿರುವುದರಿಂದ ಈ ಕಾಯಿಲೆ ಬಂದಾಗ ಗುಣಪಡಿಸುವುದಕಿಂತ ತಡೆಗಟ್ಟುವಿಕೆ ಖಂಡಿತವಾಗಿಯೂ ಅತ್ಯಂತ ಮಹತ್ವವಾದದ್ದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಅಮರೇಗೌಡ ಎಸ್. ಮಾತನಾಡಿ ಸ್ವೇಚ್ಚಾಚಾರದ ಬದುಕಿಗೆ ಕಡಿವಾಣ ಹಾಕಿದರೆ ಇಂತಹ ರೋಗಗಳನ್ನು ಬರದಂತೆ ತಡೆಯಲು ಸಾಧ್ಯ. ಯಾವುದೇ ರೋಗ ಬಂದ ನಂತರ ಚಿಕಿತ್ಸೆ ನೀಡುವುದಕಿಂತ ಮುಖ್ಯವಾಗಿ ರೋಗ ಬರದಂತೆ ತಡೆಯುವುದು ಮುಖ್ಯ. ಊIಗಿ ಎಂದರೆ ಹೂಮಾನ್ ಇಮ್ಯೂನೊ ಡಿಫಿಯಸ್ಸಿ ವೈರಸ್. ಇದು ಮಾನವನ ದೇಹದ ಪ್ರತಿ ರಕ್ಷಣಾ ವ್ಯವಸ್ಥೆಯನ್ನು ಆಕ್ರಮಿಸುತ್ತದೆ. ಬಿಳಿ ರಕ್ತಕಣಗಳನ್ನು ನಾಷಪಡಿಸಿ ವ್ಯಕ್ತಿಯ ರೋಗ ನಿರೋಧಕ ಶಕ್ತಿಯನ್ನು ಕಡಿಮೆಗೊಳಿಸುತ್ತದೆ. ಇಂದು ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ನಿರಂತರ ಪ್ರಯತ್ನದಿಂದಾಗಿ ಜನಸಾಮಾನ್ಯರಿಗೆ ಏಡ್ಸ್ ಜಾಗೃತಿ ಮೂಡಿಸುತ್ತದೆ.
ಸಂಘ ಸಂಸ್ಥೆಗಳಲ್ಲದೆ ಸಮಾಜ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯು ಈ ರೋಗವನ್ನು ತಡೆಗಟ್ಟುವಲ್ಲಿ ಮಹತ್ವದ ಪಾತ್ರವಹಿಸಿ ಸಮಾಜದಲ್ಲಿ ಏಡ್ಸ್ ಪಿಡಿತ ರೋಗಿಯನ್ನು ನೋಡುವ ದೃಷ್ಟಿಕೋನ ಬದಲಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಹಿತು. ವೇದಿಕೆಯ ಮೇಲೆ ಐ.ಕ್ಯೂ.ಎ.ಸಿ ಸಂಯೋಜಕರಾದ ಸಂಜಯ ಪವಾರ, ಎನ್.ಎಸ್.ಎಸ್. ಅಧಿಕಾರಿಗಳಾದ ಡಾ. ಹನುಮಂತ ನಾಯ್ಕ್ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಸಣ್ಣವೀರನಗೌಡ ಉಪಸ್ಥಿತರಿದ್ದರು.
ಕಾರ್ಯಕ್ರಮವು ಶ್ರೀಲೇಖಾ ಪ್ರಾರ್ಥನೆ ಗೀತೆಯೊಂದಿಗೆ ಪ್ರಾರಂಭವಾಹಿತು. ಬಿ.ಎ ಅಂತಿಮ ವರ್ಷದ ರಾಜೇಶ್ವರಿ ತಂಡದಿಂದ ಎನ್.ಎಸ್.ಎಸ್ ಗೀತೆ ಹಾಡಲಾಯಿತು, ಅನಿತಾ ಹುಸೇನಪ್ಪ ಸ್ವಾಗತಿಸಿದರೆ, ಅನಿತಾ ಮಲ್ಲೇಶ ವಮದಿಸಿದರು, ಕೆ. ಶ್ವೇತಾ ಹಾಗೂ ರುತು ನಿರುಪಿಸಿದರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.