ಯುವ ಜನತೆಯಲ್ಲಿ ನೈತಿಕತೆ ಕುಸಿಯುತ್ತಿರುವುದು ಕಳವಳಕಾರಿ: ಅರವಿಂದ ಕುಲಕರ್ಣಿ

ಬೀದರ:ಜ.14:ಇಂದಿನ ಯುವ ಜನತೆಯು ಇಲ್ಲ ಸಲ್ಲದ ದುಶ್ಚಟಗಳಿಗೆ ಬಲಿ ಯಾಗಿ, ತಮ್ಮ ಆರೋಗ್ಯವನ್ನು ಹಾಳುಮಾಡಿ ಕೊಳ್ಳುವುದಲ್ಲದೆ ಅವರ ನೈತಿಕತೆಯೂ ಕುಸಿ ಯುತ್ತಿರುವುದು ಅತ್ಯಂತ ಕಳವಳಕಾರಿಯಾಗಿದೆ ಎಂದು ಬ್ರಿಮ್ಸ ಐಸಿಟಿಸಿ ಯಲ್ಲಿ ಪ್ರ.ಶಾ. ತಂತ್ರಜ್ಞ ಅಧಿಕಾರಿಯಾದ ಅರವಿಂದ ಕುಲಕರ್ಣಿಯವರು ಅಭಿಪ್ರಾಯ ಪಟ್ಟರು.
ಅವರು ಇಂದು “ಬಯಲು ಬಹಿರ್ದೆಸೆ ಮುಕ್ತ “” ವಾದ ಚಿಟ್ಟಾ ಗ್ರಾಮ ದಲ್ಲಿ ಆಯೋಜಿಸಿದ್ದ 161 ನೆ ಸ್ವಾಮಿ ವಿವಕಾನಂದ ರವರ ಜಯಂತ್ಯೋತ್ಸವದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಸ್ವಾಮಿ ವಿವಕಾನಂದರ ಅದರ್ಶಗಳು ಇಂದಿನ ಯುವ ಜನತೆಗೆ ದಾರಿ ದೀಪವಾಗಿದೆ ಎಂದರು. ಯುವಕ-ಯುವತಿಯರು ಉನ್ನತವಾದ ಗುರಿಯನ್ನು ಹೊಂದಿರಬೇಕು. ಗುರಿ ಮುಟ್ಟಲು ಕಠಿಣ ಪರಿಶ್ರಮ ಮಾಡಬೇಕು, ಅದು ಜೀವನ ದಲ್ಲಿ ನಿರಂತರವಾಗಿ ನಡೆಯುತ್ತಿರಬೇಕು ಎಂದು ನಿವೃತ್ತ ಅಧಿಕಾರಿ ಹಾಗೂ ಹಿರಿಯರ ರಾಜ್ಯ ಪ್ರಶಸ್ತಿ ಪುರಸ್ಕøತ ವೀರಭದ್ರಪ್ಪ ಉಪ್ಪಿನರವರು ಕರೆ ನೀಡಿದರು. ಅನಾಯಾಸ ವಾಗಿ, ಅನಿರೀಕ್ಷಿತವಾಗಿ ಹಾಗೂ ಮೂಢ ನಂಬಿಕೆಗಳಿಂದ ಜೀವ ನದಲ್ಲಿ ಯಶಸ್ಸು ಸಾಧಿಸಲಾ ಗದು. ಪ್ರಾಮಾಣಿಕವಾದ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧಿಸಬಹುದು ಎಂದು ಅಭಿಪ್ರಾಯ ಪಟ್ಟರು.