ಯುವ ಜನತೆಯಲ್ಲಿ ದೇಹದ ಅಂಗಾಂಗಗಳನ್ನು ದಾನ ಮಾಡಿ

ಸಂಜೆವಾಣಿ ನ್ಯೂಸ್
ಮೈಸೂರು: ಆ.17:- ದೇಹ ತ್ಯಾಗ ಮಾಡಿದ ನಂತರ ನಮ್ಮ ಕೆಲವೇ ಕೆಲವು ಅಂಗಗಳು ಮಾತ್ರ ಉಪಯೋಗ ಆಗಬಹುದು ಎಂಬ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಿ ನಮ್ಮ ಕೂದಲು, ಚರ್ಮ, ಹೃದಯ, ಕಣ್ಣು ಇತರ ಎಲ್ಲಾ ಭಾಗಗಳನ್ನು ನಾವು ದಾನ ಮಾಡಬಹುದು ಆದರೆ ಅದಕ್ಕೆ ಸಮಯದ ಅವಧಿ ಇದ್ದು ನಿರ್ದಿಷ್ಟ ಸಮಯದ ಒಳಗೆ ಅವುಗಳ ದಾನ ಮಾಡುವುದರಿಂದ ಬೇರೊಬ್ಬರಿಗೆ ಜೀವದಾನ ಮಾಡುವ ಒಳ್ಳೆಯ ಕಾರ್ಯ ನಮ್ಮಿಂದಾಗಬಹುದು ಎಂದು ಶ್ರೀ ದೇಹಾಂಗದಾನಿ ಮಲ್ಲಿಕಾರ್ಜುನ ಸ್ವಾಮಿ ಎಂ ಎಸ್ ರವರು ಹೇಳಿದರು.
ಸರಸ್ವತಿಪುರಂನಲ್ಲಿರುವ ಟಿಟಿಎಲ್ ಕಾಲೇಜ್ ಆವರಣದಲ್ಲಿ, ಟಿಟಿಎಲ್ ಟ್ರಸ್ಟ್ ಮತ್ತು ರಾಷ್ಟ್ರೀಯ ದೇಹಾಂಗ ದಾನ ಜಾಗೃತಿ ಸಮಿತಿ ಹಾಗೂ ಟಿಟಿಎಲ್ ವಾಣಿಜ್ಯ ವ್ಯವಹಾರ ನಿರ್ವಹಣಾ ಕಾಲೇಜು ಮತ್ತು ಟಿಟಿಎಲ್ ಸ್ವತಂತ್ರ ಪದವಿ ಪೂರ್ವ ಕಾಲೇಜು ವತಿಯಿಂದ ದೇಹಾಂಗದಾನದ ಮಹತ್ವ ಮತ್ತು ಜಾಗೃತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಯುವ ಜನತೆಯಲ್ಲಿ ದೇಹಾಂಗದಾನ ಮಾಡಲು ಎರಡು ಗುಂಡಿಗೆ ಧೈರ್ಯ ಬೇಕು ಹಾಗೂ ಬದುಕಿರುವಾಗ ಸಿಗದಿರುವ ಗೌರವ ಸತ್ತ ನಂತರ ದೇಹತ್ಯಾಗ ಮಾಡಿದಾಗ ಗೌರವ ತಂದುಕೊಡುವ ಏಕೈಕ ಕಾರ್ಯವೆಂದರೆ ಅಂಗಾಂಗ ದಾನ ಮಾಡುವುದರಿಂದ ಸಿಗುತ್ತದೆ ಹಾಗೂ ಚಿರಕಾಲ ಭೂಮಿಯ ಮೇಲೆ ಇರುತ್ತೇವೆ ಎಂದು ಸರಳವಾಗಿ ದೇಹಾಂಗದಾನ ಮಾಡುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಬಿ ವಿ ಪ್ರಶಾಂತ್ ರವರು ಅಂಗದಾನ ಒಂದು ನೈಸರ್ಗಿಕ ಮಾರ್ಗ ಎಲ್ಲರೂ ದಾನಿಗಳಾಗಬೇಕು ಇಂದಿನ ಯುವ ಪೀಳಿಗೆ ಅನುಸರಿಸಿದರೆ ಭಾರತ ಮಾದರಿ ರಾಷ್ಟ್ರ ಆಗಬಹುದು.
ಸತ್ತ ಮೇಲೆ ಎಷ್ಟು ಗಂಟೆ ಒಳಗೆ ಒಂದು ದೇಹವನ್ನು ದಾನ ಮಾಡಬೇಕು ಸಂವಿಧಾನ ಪ್ರಕಾರ ಎಲ್ಲರಿಗೂ ಹಕ್ಕಿದೆ ಹೇಗೆ ಮಾಡಬೇಕು ಅನ್ನುವ ಅರಿವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲರಾದ ಡಾಕ್ಟರ್ ಬಿ ವಿ ಪ್ರಶಾಂತ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬ್ರಮರಾಂಭ ಎಸ್, ಕಾಲೇಜಿನ ಹಿರಿಯ ಉಪನ್ಯಾಸಕರಾದ ಎನ್ ಎಂ ರಾಮಚಂದ್ರಯ್ಯ , ಹಾಗೂ ಯುವ ರೆಡ್ ಕ್ರಾಸ್ ಘಟಕದ ಅಧಿಕಾರಿ ಗಿರೀಶ ಹೆಚ್ ಆರ್ ಹಾಗೂ ಇನ್ನಿತರರು ಹಾಜರಿದ್ದರು.