ಯುವ ಕಾಂಗ್ರೆಸ್ ವತಿಯಿಂದ ಪ್ರಿಯಾಂಕ್ ಖರ್ಗೆ ಜನ್ಮ ದಿನಾಚರಣೆಪತ್ರಿಕಾ ವಿತರಕರಿಗೆ ಸ್ವೆಟರ್-ಜಾಕೆಟ್ ವಿತರಣೆ

ಕಲಬುರಗಿ:ನ.23: ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆಯವರ 44ನೇ ಜನ್ಮದಿನದ ಪ್ರಯುಕ್ತ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ವತಿಯಿಂದ ಪತ್ರಿಕಾ ವಿತರಣಾ ಸಿಬ್ಬಂದಿಗೆ ಸ್ವೆಟರ್ ಹಾಗೂ ಜಾಕೆಟ್‍ಗಳನ್ನು ವಿತರಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪ್ರಿಯಾಂಕ್ ಖರ್ಗೆ ಹುಟ್ಟು ಹಬ್ಬ ಆಚರಣೆ ಸಮಾರಂಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವಾನಂದ ಹೊನಗುಂಟಿ ಹಾಗೂ ಇತರ ಯುವ ಕಾಂಗೈ ಮುಖಂಡರು ಕೇಕ್ ಕತ್ತರಿಸಿ ಪರಸ್ಪರ ತಿನ್ನಿಸಿ ಸಂಭ್ರಮಿಸಿದರು. ಬಳಿಕ ನಗರದಾದ್ಯಂತ ನಸುಕಿನ ಚಳಿಯಲ್ಲಿ ಪತ್ರಿಕೆಗಳನ್ನು ಮನೆಮನೆಗೆ ತಲುಪಿಸುವ ಪತ್ರಿಕಾ ವಿತರಕರಿಗೆ ಉಲನ್ ಸ್ವೆಟರ್ ಮತ್ತು ಜಾಕೆಟ್‍ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಕಿರಣ್ ದೇಶಮುಖ, ಮಜರ್ ಆಲಂಖಾನ್, ರಾಜೀವ್ ಜಾನೆ, ಸಿದ್ದಾರ್ಥ ಕೋರವಾರ, ಓವೈಸ್, ಈರಣ್ಣ ಝಳಕಿ, ರಾಜು ಇನಾಂದಾರ್, ಪ್ರಕಾಶ್ ಕಪನೂರ, ಪರಶುರಾಮ
ನಾಟೇಕಾರ, ಧರ್ಮರಾಜ ಹೇರೂರ, ಶ್ವೇತಾ ಬಳಿಚಕ್ರ, ಮಂಜುಳಾ ಪಾಟೀಲ, ಅಮರ
ಶಿರವಾಳ, ಅಶ್ವಿನ್ ಸಂಕಾ, ಅಶೋಕ ವಿನಾಯಕ, ಅರ್ಷದ್ ಖಾನ್, ಅಕ್ಷಯ ದರ್ಗಿ, ಸತೀಶ್ ಹೊಸಗೇರಿ, ಅಭಿಜಿತ್ ಕಿವಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.