ಯುವ ಕಾಂಗ್ರೆಸ್ ವತಿಯಿಂದ ಪತ್ರ ಚಳುವಳಿ

ಜಗಳೂರು.ಸೆ.೧೭; ತಾಲೂಕು ಯುವಕಾಂಗ್ರೆಸ್ ವತಿಯಿಂದ ಪ್ರದಾನಿಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ  ನಿರುದ್ಯೋಗಿ ದಿನಾಚರಣೆ ಆಚರಿಸುವ ಮೂಲಕ ಪತ್ರ ಚಳುವಳಿ ನಡೆಸಲಾಯಿತು.ಕೆ.ಪಿ.ಸಿ.ಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ,ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲು ಮೋದಿ ಅವರು ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಠಿಸು ಭರವಸೆ ನೀಡಿತ್ತು ಆದರೆ ಇಂದಿಗೂ ಈಡೇರಿಸದೆ ಯುವಸಮೂಹವನ್ನು ವಂಚಿಸಿದೆ.ಮೋದಿಯನ್ನು ಹೊಗಳುವ ಯುವಕರು ಜಾಗೃತರಾಗಬೇಕಿದೆ.18 ವರ್ಷದ ಯುವಕರಿಗೆ ಮತದಾನದ ಹಕ್ಕು ಕಲ್ಪಿಸಿರುವ ರಾಜೀವ್ ಗಾಂಧಿಯವರನ್ನು ಸ್ಮರಿಸಿ.ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಬೇಕು ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್ ಎಸ್ಟಿ. ಘಟಕದ ಬಿ. ಲೊಕೇಶ್ ,ಕಾರ್ಮಿಕ ಘಟಕದ ರೇವಣ್ಣ,ಯುವ ಕಾಂಗ್ರೆಸ್ ಅಧ್ಯಕ್ಷ  ,ತಿಪ್ಪೇಸ್ವಾಮಿ,ಸಾಮಾಜಿಕ ಜಾಲತಾಣದ ರಮೇಶ್ ಗೋಲ್ಲರಹಟ್ಟಿ,ಎಸ್.‌ಸಿ ಘಟಕದ ಸಿ.ತಿಪ್ಪೇಸ್ವಾಮಿ ಸೇವಾದಳ ಘಟಕದ ಅಧ್ಯಕ್ಷ ಬೊಮ್ಮಲಿಂಗಪ್ಪ ಪಂಚಾಯತ್ ರಾಜ್ ಘಟಕ ಅಧ್ಯಕ್ಷ ಗೋಣೆಪ್ಪ, ಮುಖಂಡರಾದ ಸುರೇಶ್ ನಾಯ್ಕ, ಬೂದಿಹಾಳ್ ಶಿವಕುಮಾರ್ ,ತಿಪ್ಪೇಸ್ವಾಮಿ,ಸೇರಿದಂತೆ ಇದ್ದರು.