ಯುವ ಕಾಂಗ್ರೆಸ್ ನಿಂದ ಸೇಫ್ಟಿ ಮೆಡಿಕಲ್ ಕಿಟ್ ವಿತರಣೆ

ದಾವಣಗೆರೆ. ಜೂ.೨;   ನಗರದ ವಿವಿಧ ಕಡೆ ಟ್ರಾಫಿಕ್ ಪೊಲೀಸ್ , ಸಿವಿಲ್ ಪೊಲೀಸರು ಕೊರೊನಾ ಸಮಯದಲ್ಲಿ  ತಮ್ಮ ಪ್ರಾಣವನ್ನು ಲೆಕ್ಕಿಸದೆ, ಕರ್ತವ್ಯವನ್ನು ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಂತಹ ದಕ್ಷ ಅಧಿಕಾರಿಗಳಿಗೆ ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ವತಿಯಿಂದ ಸೇಫ್ಟಿ ಮೆಡಿಕಲ್ ಕಿಟ್, ಸ್ಯಾನಿಟೈಸರ್, ಮಾಸ್ಕ್ ಫೇಸ್ ಶೀಲ್ಡ್ ಸೇಫ್ಟಿ ಗ್ಲಾಸ್ ಹಂಚಲಾಯಿತು ಕಾರ್ಯಕ್ರಮದಲ್ಲಿ ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರರಾದ ಮೈನುದ್ದೀನ್ ಎಚ್ ಜೆ , ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು ಮಹಮ್ಮದ್ ಸಾಧಿಕ್ ಸದ್ದಾಮ್, ಮೊಹಮ್ಮದ್ ವಾಜಿದ್, ದಕ್ಷಿಣ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸೈಯದ್ ಇರ್ಫಾನ್ ಹಾಗೂ ಯುವ ಕಾಂಗ್ರೆಸ್ಸಿನ ಕಾರ್ಯಕರ್ತರು ಭಾಗವಹಿಸಿದರು.