ಯುವ ಕಾಂಗ್ರೆಸ್ ನಿಂದ ಪೌರ ಕಾರ್ಮಿಕರಿಗೆ ಸನ್ಮಾನ

ದಾವಣಗೆರೆ.ಜೂ.೪: ಸಾಂಕ್ರಾಮಿಕ ಮಹಾಮಾರಿಯಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಹಗಲಿರುಳು ದುಡಿಯುತ್ತಿರುವ ಕೊವಿಡ್ ಫ್ರಂಟ್ ಲೈನ್  ವಾರಿಯರ್ಸ್ಪೌರಕಾರ್ಮಿಕರಿಗೆ ರಾಷ್ಟ್ರೀಯ ಯುವ ಕಾಂಗ್ರೆಸ್ಸಿನ ವತಿಯಿಂದ ಸನ್ಮಾನ ಹಾಗೂ ಸೇಫ್ಟಿ ಮೆಡಿಕಲ್ ಕಿಟ್ ಮಾಸ್ಕ್ ಸ್ಯಾನಿಟೈಸರ್, ಹ್ಯಾಂಡ್ ಗ್ಲೌಸ್ ಹಾಗೂ ಊಟದ ವ್ಯವಸ್ಥೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ವಕ್ತಾರರಾದ ಮೈನುದ್ದಿನ್ ಎಚ್ ಜೆ  ಮಾತನಾಡಿ ಕೊವಿಡ್ ನ ಈ ಸಂದರ್ಭದಲ್ಲಿ ತಮ್ಮ ಪ್ರಾಣವನ್ನೇ ಲೆಕ್ಕಿಸದೆ ಸ್ವಚ್ಛತೆ ಕಾಪಾಡುವಲ್ಲಿ ಸೇವೆಸಲ್ಲಿಸುತ್ತಿರುವ  ಪ್ರತಿಯೊಬ್ಬ ಪೌರಕಾರ್ಮಿಕರ ಮಕ್ಕಳಿಗೆ  ಪ್ರಾಥಮಿಕ ಶಿಕ್ಷಣದಿಂದ  ಉನ್ನತ ಶಿಕ್ಷಣದವರೆಗೆ ಉಚಿತವಾಗಿ  ಶಿಕ್ಷಣ ನೀಡಬೇಕು.ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ಕೂಡಲೇ ಇದನ್ನುಘೋಷಿಸಬೇಕು ಎಂದು ಆಗ್ರಹಿಸಿದರು , ಮಹಾಮಾರಿ ಯಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿರುವ ಪ್ರತಿಯೊಬ್ಬ ನಾಗರಿಕರಿಗೆ 4 ಲಕ್ಷ ರೂಪಾಯಿ ಕೇಂದ್ರ ಸರ್ಕಾರ ಪರಿಹಾರ ಘೋಷಿಸಬೇಕು ಎಂದರು.ಈ  ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಮೊಹಮ್ಮದ್ ಸಾಧಿಕ್, ಸದ್ದಾಮ್ ,ಮೊಹಮ್ಮದ್ ವಾಜಿದ್,  ಸೈಯದ್ ರಫೀಕ್, ಮಹಮ್ಮದ್ ರಫೀಕ್,  ಅಲ್ಲಾ ವಲಿ ಸಮೀರ್ಹಾ, ಸಲ್ಮಾನ್ ಇತರರಿದ್ದರು.