ಯುವ ಕಾಂಗ್ರೆಸ್ ನಿಂದ ಪೊಲೀಸರಿಗೆ ಫೇಸ್ ಶೀಲ್ಡ್

ದಾವಣಗೆರೆ.ಮೇ.೨೭;  ಯುವ ಕಾಂಗ್ರೆಸ್ ವತಿಯಿಂದ ನಮ್ಮ ಪೊಲೀಸ್ ನಮ್ಮ ಹೆಮ್ಮೆ ಕಾರ್ಯಕ್ರಮದ ಪ್ರಯುಕ್ತ ಇಂದು ನಗರದ ಉಪ ಅಧೀಕ್ಷಕರ ಕಚೇರಿಯ ಆರಕ್ಷಕರಿಗೆ ಮಾಸ್ಕ್ ಸ್ಯಾನಿಟಿಸರ್ ಹಾಗೂ ಫೇಸ್ ಶೀಲ್ಡ್ ಅನ್ನು ವಿತರಿಸಲಾಯಿತು.ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಮಾತನಾಡಿ ತಮ್ಮ ಜೀವದ ಹಂಗು ತೊರೆದು ಸಾರ್ವಜನಿಕರ ಜೀವ ರಕ್ಷಣೆಗೆ ಹಗಲಿರುಳು ಶ್ರಮಿಸುತ್ತಿರುವ  ನಮ್ಮ ಹೆಮ್ಮೆಯ ಆರಕ್ಷಕರಿಗೆ   ನಮ್ಮ ಯುವ ಕಾಂಗ್ರೆಸ್ ಕಡೆಯಿಂದ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಿದ್ದೇವೆ ಅದೇ ರೀತಿ ಜನರು ಸಹ ತಮ್ಮ ಜವಾಬ್ದಾರಿ ಅರಿತು ಸಹಕಾರ ನೀಡಿದರೆ ಕೊರೊನ ನಿಯಂತ್ರಿಸಲು ಸಾಧ್ಯವಾಗುತ್ತದೆ ಆದ್ದರಿಂದ ದಯವಿಟ್ಟು ಅತೀ ಅವಶ್ಯವಿದ್ದರೆ ಮಾತ್ರ ಮನೆಯಿಂದ ಹೊರಗಡೆ ಬನ್ನಿ ಹಾಗೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.ಈ ಸಂಧರ್ಭದಲ್ಲಿ ಮುಖಂಡರಾದ ಲಿಯಾಖತ್ ಅಲಿ,ಮೊಹಮ್ಮದ್ ಜಿಕ್ರಿಯಾ,ಮಹಬೂಬ್ ಬಾಷಾ,ನದಿಮ್,ರಾಜಿಕ್ ಉಪಸ್ಥಿತರಿದ್ದರು.