ಯುವ ಕಾಂಗ್ರೆಸ್‌ ನಿಂದ ನಿರುದ್ಯೋಗ ದಿನ ಆಚರಣೆ

ದಾವಣಗೆರೆ.ಸೆ.೧೭; ಪ್ರಧಾನಮಂತ್ರಿ ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ಯುವ ಕಾಂಗ್ರೆಸ್ ಕಾರ್ಯಕರ್ತರಿಂದು ಸಂಗೋಳ್ಳಿ ರಾಯಣ್ಣ ವೃತ್ತದಿಂದ ‘ರಾಷ್ಟಿçÃಯ ನಿರುದ್ಯೋಗ ದಿನ’ ಆಚರಣೆ ಹಾಗೂ ಜಾಥಾ ನಡೆಸಿದರು. ಈ ವೇಳೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸೈಯದ್ ಖಾಲಿದ್ ಅಹ್ಮದ್ ಮಾತನಾಡಿ ಜಿಲ್ಲಾ ಯುವ ಕಾಂಗ್ರೆಸ್ ಉದ್ಯೋಗ ನೀಡಿ ಆತ್ಮಹತ್ಯೆ ನಿಲ್ಲಿಸಿ ೭೯೯೮೭೯೯೮೫೪ ನಂಬರ್‌ಗೆ ಮಿಸ್ಡ್ಕಾಲ್‌ನಿಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಾ ಇದ್ದು, ಪ್ರಧಾನಿ ಮೋದಿಯವರು ಉದ್ಯೋಗ ನೀಡುವಲ್ಲಿ ವಿಫಲರಾಗಿದ್ದಾರೆ. ವರ್ಷಕ್ಕೆ ಸುಮಾರು ೨ ಕೋಟಿ ಉದ್ಯೋಗ ಸೃಷ್ಠಿ ಮಾಡುವುದಾಗಿ ಭರವಸೆ ನೀಡಿದ್ದ ಬಿ.ಜೆ.ಪಿ. ನೇತೃತ್ವದ ಸರ್ಕಾರ ಈವರೆಗೂ ೧೨ ಕೋಟಿ ಜನರಿಗೆ ಉದ್ಯೋಗವನ್ನು ಸೃಷ್ಠಿಸಬೇಕಾಗಿತ್ತು. ಆದರೆ, ಈಗ ಇರುವ ಉದ್ಯೋಗವನ್ನೇ ಕಳೆದುಕೊಳ್ಳುವ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ತಂದಿಟ್ಟಿದೆ. ಎಲ್.ಐ.ಸಿ., ರೈಲ್ವೆ, ವಿಮಾನಯಾನ, ಬಿ.ಪಿ.ಸಿ.ಎಲ್. ಸೇರಿದಂತೆ ಮತ್ತಿತರ ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಕಾರ್ಪೋರೇಟ್ ಸಂಸ್ಥೆಗಳಿಗೆ ಮಾರಾಟ ಮಾಡುವ ಮೂಲಕ ಜನರ ಮೇಲೆ ಬರೆ ಎಳೆಯುತ್ತಿದ್ದಾರೆ ಎಂದರು.
ಎಲ್ಲಿಯವರೆಗೆ ಯುವಕರು, ಯುವತಿಯರು ನಿರಯದ್ಯೋಗ ಸಮಸ್ಯೆ ಬಗ್ಗೆ ಮಾತನಾಡುವುದಿಲ್ಲವೋ ಅಲ್ಲಿಯವರೆಗೆ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಮತ್ತು ಬಿ.ಜೆ.ಪಿ. ಸರ್ಕಾರ ಉದ್ಯೋಗ ಸೃಷ್ಠಿ ಮಾಡುವುದಿಲ್ಲ. ಆದ ಕಾರಣ ಇಂದು ಈ ಅಭಿಯಾನವನ್ನು ಆಯೋಜಿಸಲಾಗಿದೆ. ಎಲ್ಲಾ ಸಮಸ್ಯೆಗಳಿಗೆ ಕಾರಣ ಕೇಂದ್ರ ಬಿ.ಜೆ.ಪಿ. ಸರ್ಕಾರದ ಕೆಟ್ಟ ಆಡಳಿತವೇ ಕಾರಣ. ಈ ಅಭಿಯಾನಕ್ಕೆ ಜಿಲ್ಲಾದ್ಯಂತ ನಿರುದ್ಯೋಗಿ ಯುವಕ,ಯುವತಿಯರು ‘೭೯೯೮೭೯೯೮೫೪’ ನಂಬರ್‌ಗೆ ಮಿಸ್ಡ್ಕಾಲ್ ನೀಡುವ ಮುಖಾಂತರ ಕೇಂದ್ರ ಬಿಜೆಪಿ ಸರ್ಕಾರ ದಾವಣಗೆರೆ ಜಿಲ್ಲೆಯಲ್ಲಿ ಹಾಗೆ ರಾಜ್ಯ ಮತ್ತು ರಾಷ್ಟç ವ್ಯಾಪ್ತಿಯಲ್ಲಿ ಎಷ್ಟು ನಿರುದ್ಯೋಗಿಗಳು ಇದ್ದಾರೆ ಎನ್ನುವುದು ತಿಳಿಯಬೇಕಾಗಿದೆ. ಆದ ಕಾರಣ ಪ್ರಜ್ಞಾವಂತರಾದ ತಾವೆಲ್ಲರೂ ಈ ಅಭಿಯಾನಕ್ಕೆ ಬೆಂಬಲಿಸಬೇಕೆAದು ವಿನಂತಿಸಿದರು.
ಈ ವೇಳೆ ಕೆಪಿಸಿಸಿ ಮಾಧ್ಯಮ ವಕ್ತಾರ ಡಿ.ಬಸವರಾಜ್, ಯುವ ಕಾಂಗ್ರೆಸ್ ರಾಷ್ಟಿçÃಯ ವಕ್ತಾರ ಹೆಚ್.ಜೆ. ಮೈನುದ್ದೀನ್, ಮುಖಂಡರಾದ ಹೆಚ್. ಸುಭಾನ್‌ಸಾಬ್, ಸೈಯದ್ ಕಬೀರ್, ಪ್ರವೀಣ್ ಹುಲ್ಲುಮನೆ, ಸಂದೀಪ್‌ಕುಮಾರ್, ಜಮೀರಾ ನವೀದ್, ಎನ್.ಎಸ್.ಯು.ಐ.ನ ಮುಜಾಹಿದ್, ಖಾಲಿದ್ ಪೈಲ್ವಾನ್, ಸದ್ದಾಂ, ಚಂದ್ರು, ಅಜ್ಮತ್‌ವುಲ್ಲಾ, ಸಂತೋಷ್‌ಕುಮಾರ್, ಸೈಯದ್ ಮುಸ್ತಫಾ, ಫಹೀಂ, ಸಾಧಿಕ್‌ಖಾನ್, ಬಾಷಾ, ಮುಸ್ತಾಕ್ ಅಹಮ್ಮದ್ ಮತ್ತಿತರರು ಅಭಿಯಾನದಲ್ಲಿ ಭಾಗವಹಿಸಿದ್ದರು.