ಯುವ ಕಾಂಗ್ರೆಸ್ಸ್ ಕಾರ್ಯಕ್ಕೆ ಡಿ.ಕೆ ಶಿ ಮೆಚ್ಚುಗೆ


ಹುಬ್ಬಳ್ಳಿ,ಜೂ.1: ಕೋವಿಡ್ ನಿಂದ ಸಂಕಷ್ಟವನ್ನು ಅನುಭವಿಸುತ್ತಿರುವ ಜನರಿಗೆ ಹಾಗೂ ರೋಗಿಗಳಿಗೆ ಅನುಕೂಲಕರವಾಗಲೆಂದು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಯುವ ಕಾಂಗ್ರೇಸ್ ವತಿಯಿಂದ ಹುಬ್ಬಳ್ಳಿಯ ಆನಂದನಗರ ರಸ್ತೆಯಲ್ಲಿ ಆರಂಭಿಸಲಾದ ಸಹಾಯವಾಣಿ ಕೇಂದ್ರವನ್ನು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರವರು ಉದ್ಘಾಟಿಸಿದರು ಹಾಗೂ ಪೌರ ಕಾರ್ಮಿಕರಿಗೆ ಆಹಾರ ಕಿಟ್ಟಗಳನ್ನು ವಿತರಿಸಿದರು.
4 ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಿ ಮಾತುನಾಡಿದ ಡಿಕೆಶಿ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರ ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿದ್ದು, ದೇಶ್ಯಾದಂತ ಕಾಂಗ್ರೆಸ್ಸ್ ಕಾರ್ಯಕರ್ತರು ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಹಸ್ತಚಾಚುತ್ತಿರುವದು ಹೆಮ್ಮೆಯ ವಿಷಯ. ಧಾರವಾಡ ಜಿಲ್ಲೆ ಯಲ್ಲಿ ಯುವ ಕಾಂಗ್ರೆಸ್ಸ್ ಕಾರ್ಯಕರ್ತರ ಕಾರ್ಯಕ್ಕೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು.
ಯುವ ಕಾಂಗ್ರೆಸನ ಈ ಸಮಾಜಮುಖಿ ಕಾರ್ಯಕ್ಕೆ ಸಂಪೂರ್ಣ ಬೆಂಬಲ ನೀಡುವದಾಗಿ ಘೋಷಿಸಿದರು. ಈ ಸಂದರ್ಭದಲ್ಲಿ ರಾಜ್ಯ ಯುವ ಕಾಂಗ್ರೆಸ್ ಮುಖಂಡರಾದ ಮಹ್ಮದ್ ಹ್ಯಾರಿಸ್ಸ್ ನಲಪಾಡ, ಮಾಜಿ ಸಂಸದರಾದ ಐ. ಜಿ ಸನದಿ, ವಿ
ಪ ಸದಸ್ಯ ಶ್ರೀನಿವಾಸ ಮಾನೆ, ಶಾಸಕ ಪ್ರಸಾದ್ ಅಬ್ಬಯ್ಯ, ಜಿಲ್ಲಾ ಕಾಂಗ್ರೆಸ್ಸ್ ಸಮಿತಿ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಯುವ ಕಾಂಗ್ರೆಸ್ ಅಧ್ಯಕ್ಷ ಇಮ್ರಾನ್ ಯಲಿಗಾರ, ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷರಾದ ಅನಿಲಕುಮಾರ್ ಪಾಟೀಲ್, ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ, ವಿನೋದ್ ಅಸೂಟಿ, ಶಾಕಿರ ಸನದಿ, ಮಾಜಿ ರಾಜ್ಯ ಯುವ ಕಾಂಗ್ರೆಸ್ಸ್ ಅಧ್ಯಕ್ಷ ಸದಾನಂದ ಡಂಗನವರ, ಸ್ವಾತಿ ಮಾಳಗಿ, ರ ಅಬ್ದುಲ್ ದೇಸಾಯಿ, ಪ್ರವೀಣ ಶಲವಡಿ, ಅರಭಾಜ್ ಮನಿಯಾರ್, ಅಬು ಬಿಜಾಪುರ, ಮೈಲಾರಿ ಹೊಸಮನಿ, ಅತೀತ ಕಮ್ಮಾರ, ಶಿವು ಗೂಕಾವಿ, ವಿನಯ ನಾವಳ್ಲಿ, ಪುಷ್ಪರಾಜ ಹಳ್ಳಿ ಸಂತೋಷ್ ನಾಯಕ್, ಸಲ್ಮಾನ್ ಹಳ್ಳುರ, ಮಣಿಕಂಠ ಗುಡಿಹಾಳ, ಹಾಗೂ ಅನೇಕರು ಉಪಸ್ಥಿತರಿದ್ದರು.