ಯುವ ಕಲಾವಿದರ ಮೇಲೆ ಕಲಾ ಕ್ಷೇತ್ರ ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ :ಮಂತಟ್ಟಿ

ಕಲಬುರಗಿ ಡಿ: 24: ಕಲಬುರಗಿಯು ದೃಶ್ಯ ಕ್ಷೇತ್ರವನ್ನು ಅನೇಕ ಹಿರಿಯ ಕಲಾವಿದರು ತಮ್ಮ ಶ್ರಮದಿಂದ ಕಟ್ಟಿ ಬೆಳಸಿದ್ದು, ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ಇಂದಿನ ಯುವ ಕಲಾವಿದರ ಮೇಲಿದೆ ಎಂದು ಕರ್ನಾಟಕ ಲಲಿಕಲಾ ಅಕಾಡೆಮಿ ಸದ್ಯಸರಾದ ಡಾ. ಹೆಚ್.ವಿ. ಮಂತಟ್ಟಿಯವರು ನುಡಿದರು. ಅವರ ಯುವ ಕಲಾವಿದ ಅವಿನಾಶ.ಎಸ್. ಮೇತ್ರಿ ಅವರು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಧನಸಹಾಯದೊಂದಿಗೆ ನೆರವೇರಿಸಿದ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಾ ಕಲಾವಿದರ ಕಲಾಕೃತಿಗಳು ಪ್ರದರ್ಶನ ಕಂಡಾಗ ಆ ಕಲಾಕೃತಿ ಮಾಡಿದಕ್ಕೂ ಸಾರ್ಥಕವಾಗುತ್ತದೆ. ಅಲ್ಲದೆ ನೋಡುಗ ಹಾಗೂ ಕಲಾವಿದರ ನಡುವೆ ಸಂಬಂಧ ಏರ್ಪಡುತ್ತವೆ ಎಂದು ಹೇಳಿದರು.
ಕಲಾವಿದರನ್ನು ಬೆಳಸುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ ಧನ ಸಹಾ ಮಾಡುತ್ತಿದೆ ಇದರ ಸದುಪಯೋಗ ಪಡೆಯಬೇಕೆಂದು ಮಂತಟ್ಟಿ ನುಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಗುಲಬರ್ಗಾ ವಿಶ್ವವಿದ್ಯಾಲಯ ದೃಶ್ಯಕಲಾ ವಿಭಾಗ ಉಪನ್ಯಾಸಕ ಡಾ. ಪರಶುರಾಮ. ಪಿ ಅವರು ಮಾತನಾಡಿ ಕಲಾಕ್ಷೇತ್ರ ಇಂದು ತುಂಬಾ ವಿಸ್ತಾರವಾಗಿ ಬೆಳೆದಿದ್ದು ಕಲಾವಿದರಿಗೆ ಹಾಗೂ ಕಲಾವಿದ್ಯಾರ್ಥಿಗಳಿಗೆ ಅನೇಕ ರೀತಿಯ ಸಹಾಯ ಅನೇಕ ಸಂಸ್ಥೆಗಳಿಂದ ದೊರೆಯುತ್ತಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನುಡಿದರು. ಅಲ್ಲದೆ ವಿದ್ಯಾರ್ಥಿಗಳು ಕಲಾ ಪ್ರದರ್ಶನಗಳನ್ನು ವೀಕ್ಷಿಸುವ ಮೂಲಕ ಅನೇಕ ವಿಷಯಗಳನ್ನು ಕಲಿಯಲು ಸಹಾಯಕಾರಿಗುತ್ತವೆ. ಎಂದು ನುಡಿದರು.
ದಿ ಆರ್ಟ ಇಂಟಿಗ್ರೇಷನ್ ಚಿತ್ರಕಲಾ ಮಹಾವಿದ್ಯಾಲಯ ಪ್ರಾಚಾರ್ಯರಾದ ಎಂ. ಎಚ್. ಬೆಳಮಗಿ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ಚಿತ್ರಕಲೆ ಒಂದು ಮಹತ್ತರವಾದ ಮಾಧ್ಯಮವಾಗಿದ್ದು ಈ ಕ್ಷೇತ್ರದಲ್ಲಿ ಅನೇಕ ವಿದ್ಯಾರ್ಥಿಗಳು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಸಾವಿರಾರು ವರ್ಷಗಳ ಹಿಂದೆಯ ಆದಿಮಾನವರು ಚಿತ್ರಗಳನ್ನು ಬಿಡಿಸಲು ಕಲಿತಿದ್ದರು ಅಲ್ಲದೇ ಬಣ್ಣಗಳಬಳಕೆಯನ್ನು ಕಲಿತಿದ್ದರು. ಅಲ್ಲದೆ ನಿಸರ್ಗದಲ್ಲಿ ಸಿಗುವ ಕಲ್ಲಿದ್ದಲು ಕೆಂಪು ಅದಿರು ಅರಿಶಿಣದಂತಹ ಅನೇಕ ವಸ್ತುಗಳಿಂದ ಬಣ್ಣ ಗಳನ್ನು ತಯ್ಯಾರಿ ಬಳಸುತ್ತಿದ್ರು ಎಂದು ಹೇಳಿದರು.
ಮಲ್ಲಿಕಾರ್ಜುನ ಕಾಳಗಿ ಕಾರ್ಯಕ್ರಮ ನಿರೂಪಿಸಿ ಹಾಗೂ ವಂದಿದರು. ಬಿ.ಎನ್. ಪಾಟೀಲ ಸ್ವಾಗತಿಸಿದರು. ಸಿಬ್ಭಂದಿವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸಿತ್ಥಿರಿದ್ದರು.
ನಗರದ ಅಂಕುರ ಆರ್ಟ ಗ್ಯಾಲರಿ, ದಿ ಆರ್ಟ ಇಂಟಿಗ್ರೇಷನ್ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಅವಿನಾಶ.ಎಸ್. ಮೇತ್ರಿ ಅಕ್ರಲಿಕ್ ಮಾಧ್ಯಮದಲ್ಲಿ ರಚಿಸಿದ ಕಲಾಕೃತಿಗಳು ಮೂರು ದಿನ ಡಿಸೆಂಬರ್ 26ರವರೆಗೆ ಪ್ರದರ್ಶನಗೊಳ್ಳಲಿವೆ. ಮುಂಜಾನೆ 10.30 ರಿಂದ ಸಂಜೆ 4 ಗಂಟೆ ರವರೆಗೆ ಸಾರ್ವಜನಿಕರು, ಕಲಾವಿದರು, ಕಲಾಆಸಕ್ತರು ಚಿತ್ರಕಲಾ ಪ್ರದರ್ಶನ ವೀಕ್ಷಿಸಬಹುದು. ಎಂದು ಚಿತ್ರಕಲಾವಿದ ಮತ್ತು ಛಾಯಾಚಿತ್ರಕಾರ ನಾರಾಯಣ ಎಂ ಜೋಶಿ ತಿಳಿಸಿದ್ದಾರೆ.