ಯುವ ಕಲಾವಿದರ ಕೈನಲ್ಲಿ ಅರಳಿದ ಕಿನ್ನಾಳ ಕಲೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.18: ಐದು ಶತಮಾನಗಳ ಇತಿಹಾಸವನ್ನು ಹೊಂದಿರುವ ಕಿನ್ನಾಳ ಕಲೆಯನ್ನು ಯುವ ಜನತೆಗೆ ಕಲಿಸುವ ಕಾರ್ಯಾಗಾರ ಗಣಿ ನಾಡು ಬಳ್ಳಾರಿಯಲ್ಲಿ ಯಶ್ವಿಯಾಗಿ £ನಡೆಯಿತು. ಯುವ ಕಲಾವಿದರ ಕೈನಲ್ಲಿ ಕಿನ್ನಾಳೆ ಕಲೆ ಅರಳಿತು.
ಕರ್ನಾಟಕ ಲಲಿತ ಕಲಾ ಅಕಾಡೆಮಿಯು. ಸ್ಥಳೀಯ ರಂಗತೋರಣ ಸಂಸ್ಥೆಯ ಸಹಕಾರದಿಂದ ವಿಶೇಷ ಘಟಕ ಯೋಜನೆಯಡಿ ಆರು ದಿನಗಳ ಕಾಲ ರಾಜ್ಯದ ವಿವಿಧಡೆಯಿಂದ ಬಂದಿದ್ದ 20 ಜನ ಯುವ ಕಲಾವಿದರಿಗೆ ಕಿನ್ನಾಳ ಕಲೆಯನ್ನು ಕಲಿಸುವ ಕಾರ್ಯ ಬಳ್ಳಾರಿ ನಗರದ ಸಾಂಸ್ಕೃತಿಕ ಸಮುಚ್ಚಯದ ಆವರಣದಲ್ಲಿ ನಡೆಯಿತು. ನಿನ್ನೆ ಶಿಬಿರ ಮುಕ್ತಾಯವಾಯ್ತು.
ಮೈಸೂರು ಮತ್ತು ತಂಜಾವೂರು ಕಲೆಯ ಶೈಲಿಗೆ ಜೀವಾಳಎನ್ನಲಾಗುವ ಕಿನ್ನಾಳ ಕಲೆಯು ವಿಜಯನಗರ ಅರಸರಆಳ್ವಿಕೆ ಸಂದರ್ಭದಲ್ಲಿ ಪ್ರೌಡಿಮೆಯನ್ನು ಮೆರೆದಿತ್ತು.
ಈಗ ಕೇವಲ ಕಿನ್ನಾಳದಲ್ಲಿ 60 ಕುಟುಂಬಗಳು ಮಾತ್ರ ಈ ಕಲೆಯನ್ನು ತೊಡಗಿಸಿಕೊಂಡು ಜೀವನ ಮಾಡುತ್ತಿದ್ದಾರೆ. ಇದು ರಾಜ್ಯದೆಲ್ಲಡೆ ವಿಸ್ತರಿಸಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯಾಗಾರವನ್ನು ಅಕಾಡೆಮಿ ಹಮ್ಮಿಕೊಂಡಿತ್ತು.
ಕಾರ್ಯಾಗಾರದ ನಿರ್ದೇಶಕರಾಗಿ ಕಿನ್ನಾಳದವರೇ ಆದ ಕಿಶೋರ್ ಚಿತ್ರಗಾರ ಅವರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಸುಚಿತ್ರ ಲಿಂಗದಳ್ಳಿ, ಮುತ್ತಮ್ಮ ಅವರು ಶಿಬಿರಾರ್ಥಿಗಳಿಗೆ ಕಿನ್ನಾಳ ಕಲೆಯನ್ನು ಹೇಗೆ ಕಲಿತು ಅನಾವರಣ ಮಾಡಬೇಕೆಂಬುದನ್ನು ತಿಳಿಸಿಕೊಟ್ಟರು.
ಕಾರ್ಯಾಗಾರದಲ್ಲಿ ಯುವ ಕಲಾವಿದರ ಕೈಚಳಕದ ಕುಂಚದಿಂದ ಅರಳಿದ ವಿವಿಧ ದೇವರುಗಳು. ಪ್ರಾಣಿ ಪಕ್ಷಿಗಳ, ವ್ಯಕ್ತಿ ಚಿತ್ರಗಳಿಂದ ಕೂಡಿದ ಚಿತ್ರಗಳನ್ನು ಬಿಡಿಸಿ ಯುವ ಕಲಾವಿದರು ಪ್ರದರ್ಶಿಸಿದರು.
ಕಿನ್ನಾಳ ಕಲೆಯನ್ನು ಕಲಿಯಬೇಕೆಂಬ ಆಸಕ್ತಿ ಇತ್ತು ಈ ಕಾರ್ಯಾಗಾರದಲ್ಲಿ ಈಡೇರಿತು. ಕಾರ್ಯಾಗಾರ ಖಷಿತಂದುಕೊಟ್ಟಿತು ಎಂದು ಸಂಜೆವಾಣಿಯೊಂದಿಗೆ ಮಾತನಾಡಿದ ವಿಜಯನಗರ ಜಿಲ್ಲೆ ಹೂವಿನಡಗಲಿಯ ಶಿಬಿರಾರ್ಥಿ ನಾಗರಾಜ ಎಂ.ಹೊಳಗುಂದಿ ಹೇಳಿದರೆ.
ಮೈಸೂರಿನ ಸೌಮ್ಯ ಸಾಂಪ್ರದಾಯಿಕ ಕಲೆಗಳನ್ನು ಬೇರೆಯವರಿಗೆ ಕಲಿಸುವುದಿಲ್ಲ ಆದರೆ ಈ ಕಾರ್ಯಾಗಾರದಿಂದ ನಮಗೆ ಅದನ್ನು ಕಲಿಯಲು ಸಾಧ್ಯವಾಯ್ತು ಎಂದು. ತುಮಕೂರಿನ ರಮೇಶ್ ಸ್ಥಳದಲ್ಲೇ ಬಣ್ಣ ರಚನೆ. ಲೇಪನ ಸೇರಿಂದತೆ ಎಲ್ಲವುದನ್ನು ಕಲಿಸಿದ್ದು ಸಹಕಾರಿಯಾಗಿದೆಂದರು.
ಶಿಬಿರದ ನಿರ್ದೇಶಕ ಕಿಶೋರ್ ಚಿತ್ರಗಾರ ಮಾತನಾಡಿ ಕುರಿ ಕೆಲಸ ಹೆಚ್ಚಿರುವ ಈ ಚಿತ್ರ ಕಲೆಯನ್ನು ಕಲಿಯುವುದು ಒಂದಿಷ್ಟು ಕಷ್ಟ ಆದರೂ ಶಿಬಿರಾರ್ಥಿಗಳು ಕಲಿಸು ಯಶ್ವಿಯಾಗಿದ್ದಾರೆ. ಇದನ್ನು ಇತರರಿಗೂ ಕಲಿಸಬೇಕು ಎಂದರು.

Attachments area