ಯುವ ಕಲಾವಿದರಿಗೂ ಸಹಾಯಧನಕ್ಕೆ ರಾಘವೇಂದ್ರ ಮನವಿ

ಮೈಸೂರು: ಜೂ.03: ಪ್ರಸಾದ್ ಸ್ಕೂಲ್ ಆಫ್ ರಿದಮ್ಸ್ ಸಂಗೀತ ಶಾಲೆ ವತಿಯಿಂದ ಹಿರಿಯ ಕಲಾವಿದರಾದ ಗೌರಮ್ಮ ರಾಮರಾವ್ ಸ್ಮರಣಾರ್ಥ ರಾಮಾನುಜ ರಸ್ತೆಯಲ್ಲಿರುವ ಅವರ ಕಚೇರಿಯ ಮುಂಭಾಗ ಕಲಾವಿದರಿಗೆ ಆಹಾರ ಕಿಟ್ ವಿತರಿಸಲಾಯಿತು.
ಕೂರೂನಾ ಲಾಕ್ ಡೌನ್ ಹಿನ್ನಲೆಯಲ್ಲಿ ಕನ್ನಡ ವೃತ್ತಿ ರಂಗಭೂಮಿಯಲ್ಲಿ ಅನೇಕ ವಿವಿಧ ವಯಸ್ಸಿನ ಕಲಾವಿದರು ರಾಷ್ಟ್ರ ರಾಜ್ಯ ಪ್ರಶಸ್ತಿಗಳನ್ನು ಪಡೆದು ಕಲಾವಿದರು ಇಂದು ಬೀದಿಗೆ ಬಂದಿದ್ದಾರೆ .ಸರ್ಕಾರ ವಿವಿಧ ಕ್ಷೇತ್ರಗಳ ಕಾರ್ಮಿಕ ಕಾರ್ಮಿಕರಿಂದ ಹಿಡಿದು ಕಲಾವಿದರವರೆಗೂ 3ಸಾವಿರ ರೂ ಸಹಾಯಧನ ಘೋಷಣೆ ಮಾಡಿದ್ದನ್ನು ಸ್ವಾಗತಿಸುತ್ತೇವೆ .ಆದರೆ ಕಲಾವಿದರಿಗೆ 35 ವರ್ಷ ಆಗಿರಬೇಕು ಎಂದು ಘೋಷಿಸಿದೆ .ದಯಮಾಡಿ ಮೂವತ್ತೈದು ವರ್ಷ ನಿಗದಿ ಮಾಡಿರುವುದನ್ನು ತೆಗೆದು ಕನಿಷ್ಠ 25 ವರ್ಷ ಎಂದು ತೀರ್ಮಾನ ಮಾಡಿ ಅವರಿಗೂ ಕೂಡಾ ಸಹಾಯಧನ ತಲುಪಿಸುವಂತೆ ಮಾಡಬೇಕೆಂದು ಅವರು ಮನವಿ ಮಾಡಿಕೊಂಡರು .ಜೂನ್ 5ರೊಳಗೆ ಅರ್ಜಿ ಸಲ್ಲಿಸಲು ಗಡುವು ನೀಡಿದ್ದು .ಜೂನ್ 7ರ ವರೆಗೂ ಲಾಕ್ ಡೌನ್ ಇರುವುದರಿಂದ ಎಲ್ಲಿಯೂ ಸೇವಾ ಸಿಂಧು ಅಂಗಡಿಗಳು
ತೆರೆದಿರುವುದಿಲ್ಲ .ಆದ್ದರಿಂದ ಅರ್ಜಿ ಸಲ್ಲಿಕೆ ಅವಧಿ ಮುಂದುವರಿಸಿ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡಬೇಕೆಂದು ಮಾಧ್ಯಮ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡರು
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜ ಸೇವಕರಾದ ಡಾ. ವರ್ಷ ನೋಂದಣಿಯಾಗಿರುವವರ ಖಾತೆಗೆ ಹಣ ಜಮಾವಣೆಯಾಗಲಿದೆ. ಮತ್ತೆ ಮತ್ತೆ ಹೋಗಿ ನೋಂದಣಿ ಮಾಡುವ ಅಗತ್ಯವಿಲ್ಲ, ಆದರೆ ಎಷ್ಟು ಜನ ನೋಂದಣಿಯಾಗಿದ್ದಾರೆ ಗೊತ್ತಿಲ್ಲ. ಅದಲ್ಲದೆ ಬೇಕಾದಷ್ಟು ಜನ ಕಲಾವಿದರಿದ್ದೀರಿ. ಈಗಾಗಲೇ ಹತ್ತು ದಿನದೊಳಗಡೆ ಈ ರೀತಿ ಯೋಜನೆ ರೂಪಿಸುತ್ತೇವೆ. ನಾಮಕಾವಸ್ತೆಗೆ ಕೊಡುವುದಕ್ಕಿಂತ ಕೊಟ್ಟರೆ ಒಂದು ತಿಂಗಳಿಗಾಗುವಷ್ಟು, ನಾಲ್ಕರಿಂದ ಐದು ಜನ ಇದ್ದಲ್ಲಿ ಒಂದು ತಿಂಗಳು ಕಳೆಯುವಂತಿರಬೇಕು ಆ ತರದ ಯೋಜನೆ ರೂಪಿಸುತ್ತಿದ್ದರಿಂದ ಸ್ವಲ್ಪ ತಡವಾಯಿತು. ಬಂದರೆ ಕಲಾವಿದರಿಗೆ ಮೊದಲ ಅವಕಾಶ. ನಿಮಗೆಲ್ಲರಿಗೂ ಒಳ್ಳೆಯದಾಗಲಿ ಎಂದರು.
ಕೊರೋನಾ ಸಂಕಷ್ಟ ಬಾಧಿಸದಿರಲಿ. ಮಾಸ್ಕ್ ನ್ನು ಕೇವಲ ಬಾಯಿಗಲ್ಲ, ಮೂಗನ್ನು ಸೇರಿಸಿ ಹಾಕಿಕೊಳ್ಳಬೇಕು. ತುಂಬಾ ಕ್ರಿಟಿಕಲ್ ಪರಿಸ್ಥಿತಿ ಇದೆ. ಸಾಯ್ತಾ ಇರೋರು 27ರಿಂದ 40ರ ವಯಸ್ಸಿನವರು ತುಂಬಾ ಸಾಯುತ್ತಿದ್ದಾರೆ. ತುಂಬಾ ಆಶ್ಚರ್ಯಆಗತ್ತೆ. ಈ ಕುರಿತು ಯೋಚಿಸಿದಾಗ ನನಗಿನ್ನು ವಯಸ್ಸಿದೆ, ನನಗೇನಾಗಿ ಬಿಡತ್ತೆ ಎಂಬ ನಿರ್ಲಕ್ಷ್ಯ ಧೋರಣೆ ತಾಳುತ್ತಿದ್ದಾರೆ ಎಂಬುದು ಕಂಡು ಬರುತ್ತಿದೆ. ಲಕ್ಷಣಗಳಿದ್ದಾಗ ಮಾಮೂಲಿ ಅಂತ ತಿಳಿದು ಬಿಡುತ್ತಾರೆ. ಆದರೆ ಅದು ಮಾಮೂಲಿ ಅಲ್ಲ. ಬಂದ ತಕ್ಷಣ ವೈದ್ಯಕೀಯ ಕಿಟ್ ಆದರೂ ತಗೊಳ್ಳಿ, ಅಥವಾ ವೈದ್ಯರಿಗಾದರೂ ತೋರಿಸಿ , ಹೆಚ್ಚಾಗುತ್ತಿದ್ದಂತೆ ಭಯ ಆವರಿಸಿಬಿಡತ್ತೆ. ಆಸ್ಪತ್ರೆಗೆ ಸೇರಿಸಿದರೂ ಕೂಡ ಭಯದಲ್ಲಿ ಜನ ಸಾಯುತ್ತಿದ್ದಾರೆ. ನಿರ್ಲಕ್ಷ್ಯ ಮತ್ತು ಭಯ ಜೊತೆಗೂಡಿದಾಗ ಬದುಕುಳಿಯುವ ಸಾಧ್ಯತೆ ಕಡಿಮೆ ಎಂದರು.
ಈ ಸಂದರ್ಭ ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಮಾ ವಿ ರಾಮ್ ಪ್ರಸಾದ್, ಪ್ರಸಾದ್ ಸ್ಕೂಲ್ ಆಫ್ ರಿದಮ್ಸ್ ಸಂಸ್ಥಾಪಕರಾದ ರಾಘವೇಂದ್ರ ಪ್ರಸಾದ್, ರಾಜಾ ವಾಸುದೇವನ್, ಮಂಜುನಾಥ್, ಕಡಕೊಳ ಜಗದೀಶ್, ಅಜಯ್ ಶಾಸ್ತ್ರಿ ಇನ್ನಿತರರು ಹಾಜರಿದ್ದರು.