ಯುವ ಕಲಾವಿದರಿಗೂ ನೆರವು ನೀಡಲು ಆಗ್ರಹ

ಕಲಬುರಗಿ,ಜೂ.7-ಕೊರೊನಾ ಸಂಕಷ್ಟದ ದಿನಗಳಲ್ಲಿ ಕಷ್ಟದಲ್ಲಿರುವ ಯುವ ಕಲಾವಿದರಿಗೂ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಕಲಬುರಗಿ ಯೂತ್ ಆರ್ಟಿಸ್ಟ್ ಗಿಲ್ಡ್ ಮನವಿ ಮಾಡಿದೆ.
ಈ ಸಂಬಂಧ ರಂಗ ನಿರ್ದೇಶಕ ವಿಶ್ವರಾಜ ಪಾಟೀಲ, ಎಸ್.ಬಿ.ಹರಿಕೃಷ್ಣ, ರಾಜಕುಮಾರ ಎಸ್.ಕೆ, ರಾಹುಲ್ ಕಟ್ಟಿ, ಸೋಮಶಂಕರ್ ಬಿರಾದಾರ, ಲಕ್ಷ್ಮೀಕಾಂತ ಜೋಶಿ, ಅರವಿಂದ ಕುಲಕರ್ಣಿ, ಸುರೇಶ ಡಿ.ಕೆ, ಗಣೇಶ್ ಚವ್ಹಾಣ ಅವರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದರು.
ಕೊರೊನಾ ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಕಲಾವಿದರಿಗೆ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ. ಮೂವತ್ತೈದು ವರ್ಷ ವಯಸ್ಸು ಮತ್ತು ಹತ್ತು ವರ್ಷಗಳ ಅನುಭ ಇರಬೇಕು ಎಂಬ ಮಾನದಂಡ ಹಾಕುವುದರ ಮೂಲಕ ಯುವ ಕಲಾವಿದರಿಗೆ ನೆರವು ಸಿಗದಂತೆ ಮಾಡಿದೆ. ಆದ್ದರಿಂದ ಸರ್ಕಾರ ಈ ಮಾನದಂಡ ತೆಗೆದು ಹಾಕಿ ಯುವ ಕಲಾವಿದರಿಗೂ ನೆರವು ದೊರೆಯುವಂತೆ ಮಾಡಬೇಕು ಎಂದು ಮನವಿಪತ್ರದಲ್ಲಿ ಒತ್ತಾಯಿಸಲಾಗಿದೆ.