ಯುವ ಉದ್ಯಮಿ ಸುಷ್ಮಿತಾಗೆ ಸನ್ಮಾನ

ತಾಳಿಕೋಟೆ:ಮಾ.14: ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ)ಯವರ ಸಹೋದರನ ಪುತ್ರಿ ಸುಷ್ಮಿತಾ ಪಾಟೀಲ(ನಡಹಳ್ಳಿ)ಯವರಿಗೆ ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ನಡೆದ ಕಾರ್ಯಕ್ರಮವೊಂದರಲ್ಲಿ ಯುವ ಉದ್ಯಮಿಯಾಗಿ ಉದ್ಯಮ ಲೋಕಕ್ಕೆ ಪಾದಾರ್ಪಣೆ ಮಾಡಿದ್ದನ್ನು ಶ್ಲಾಘಿಸಿ ಚಲನಚಿತ್ರದ ನಾಯಕ ನಟಿ ಪ್ರಿಯಾಂಕಾ ಉಪೇಂದ್ರ ಸೇರಿ ಹಲವು ಗಣ್ಯರು ಸುಷ್ಮಿತಾರಿಗೆ ಪ್ರಶಸ್ತಿ ಸ್ಮರಣಿಕೆ ನೀಡಿ ಸನ್ಮಾನಿಸಿದರು.

    ಸುಷ್ಮಿತಾಳನ್ನು ಶಾಸಕ ನಡಹಳ್ಳಿಯವರು ತಮ್ಮ ಸ್ವಂತ ಮಗಳ ರೀತಿಯಲ್ಲಿ ಪಾಲಿಸಿ, ಪೆÇೀಷಿಸುತ್ತಿದ್ದಾರೆ. ಸುಷ್ಮಿತಾ ಕೂಡ ಎ.ಎಸ್.ಪಾಟೀಲ ನಡಹಳ್ಳಿ ಮತ್ತು ಮಹಾದೇವಿ ಪಾಟೀಲ ನಡಹಳ್ಳಿಯವರನ್ನು ತಮ್ಮ ಹೆತ್ತ ತಂದೆ ತಾಯಿಯಂತೆ ಕಂಡು ಅವರ ಆಶ್ರಯದಲ್ಲೇ ಬೆಳೆದು ಇಂದು ಯುವ ಉದ್ಯಮಿಯಾಗಿ ಹೆಸರು ಗಳಿಸುತ್ತ ಮುನ್ನಡೆದಿರುವುದು ನಡಹಳ್ಳಿ ಕುಟುಂಬ ಮತ್ತು ಬಂಧು ಬಳಗ ಮಾತ್ರವಲ್ಲದೆ ನಡಹಳ್ಳಿಯವರ ಲಕ್ಷಾಂತರ ಅಭಿಮಾನಿಗಳಲ್ಲಿ ಹರ್ಷದ ಹೊನಲು ಹರಿಸಿದೆ.
    ಯುವ ಉದ್ಯಮಿ ಪುರಸ್ಕಾರ ಸ್ವೀಕರಿಸಿದ ಹಿನ್ನೆಲೆ ತನ್ನ ಅನಿಸಿಕೆ ಹಂಚಿಕೊಂಡಿರುವ ಸುಷ್ಮಿತಾ, ನನ್ನ ತಂದೆ ಎ.ಎಸ್.ಪಾಟೀಲ ನಡಹಳ್ಳಿ ನನ್ನ ಸೂಪರ್ ಹೀರೋ, ನನ್ನ ತಾಯಿ ಮಹಾದೇವಿ ಎ ಪಾಟೀಲ ನನ್ನ ವ್ಯಕ್ತಿತ್ವವನ್ನು ರೂಪಿಸಿದ ಮಾದರಿ ತಾಯಿ. ಸಹೋದರರಾದ ಭರತ್, ಶರತ್, ಸುನೀಲ್ ನನ್ನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನನ್ನ ಉತ್ತಮ ಬೆಳವಣಿಗೆಗೆ ನನ್ನನ್ನು ಪೆÇ್ರೀತ್ಸಾಹಿಸುತ್ತಾರೆ. ಉತ್ತರ ಕರ್ನಾಟಕದ ಕುಟುಂಬವೊಂದರಲ್ಲಿ ಹುಟ್ಟಿದ್ದು, ಸಂಕಷ್ಟದ ಸಂದರ್ಭದಲ್ಲಿ ಗಟ್ಟಿಯಾಗಿರುವುದೇ ನನ್ನ ಯಶಸ್ಸಿನ ಮಂತ್ರವಾಗಿದೆ. ಬೆಂಗಳೂರಿನ ಕನಕಪುರದ ಜೈನ್ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್‍ನ ವಿದ್ಯಾರ್ಥಿನಿಯಾಗಿದ್ದೆ. ಕ್ರೀಡೆ ನನ್ನ ಆಸಕ್ತಿಯ ಕ್ಷೇತ್ರವಾಗಿತ್ತು. ಇದು ನನ್ನಲ್ಲಿ ಸ್ವತಂತ್ರ ಚಿಂತನೆ, ನಾಯಕತ್ವ ಕೌಶಲ್ಯಗಳು ಮತ್ತು ತಂಡದ ಕೆಲಸಕ್ಕಾಗಿ ಹೆಚ್ಚಿನ ಗೌರವವನ್ನು ಅಭಿವೃದ್ಧಿಪಡಿಸಿತು. ಬೆಂಗಳೂರಿನ ಸಿಎಂಎಸ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (ಬಿಬಿಎ) ಪದವಿ ಪಡೆದ ಮೇಲೆ ಪೆÇಷಕರು ನನ್ನಲ್ಲಿನ ಸಾಮಥ್ರ್ಯ ನೋಡಿ ವಿದೇಶದಲ್ಲಿ ಓದಲು ಪ್ರೋತ್ಸಾಹಿಸಿದರು. ವಿದೇಶಿ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುವ ಅವಕಾಶ ಇದ್ದರೂ ನನ್ನ ಸಹೋದರನ ಅನುಭವದೊಂದಿಗೆ ನಾನು ಆಹಾರದ ಬಗ್ಗೆ ಉತ್ಸುಕಳಾಗಿದ್ದರಿಂದ ಆಹಾರ ವ್ಯವಹಾರದ ಜಗತ್ತಿಗೆ ಬರಲು ನಿರ್ಧರಿಸಿದೆ. ನಾನು ಎಬಿಡಿವಿ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಅನ್ನು ಪ್ರಾರಂಭಿಸಿದ್ದೇನೆ. ಆಂಜನೇಯ ಧೋತ್ರೆ, ಭರತ್ ಪಾಟೀಲ್, ವಿಶಾಲ್ ನಿರಾಣಿ, ಧನುಷ್ ಶ್ರೀನಿವಾಸ್ ನಿರ್ದೇಶಕರಾಗಿದ್ದು ಪ್ರಭು ಜನರಲ್ ಮ್ಯಾನೇಜರ್ ಆಗಿರುವ ನಂದಿನಿ ಮಸಾಲಾ ಬ್ರ್ಯಾಂಡ್‍ನ್ನು ಪ್ರಾರಂಭಿಸಿದ್ದೇವೆ ಎಂದು ತಮ್ಮ ಯಶೋಗಾಥೆ ವಿವರಿಸಿದರು.