ಯುವ ಅಭಿಮಾನಿಗಳಿಂದ ಡಾ.ವಿಷ್ಣುವರ್ಧನ್ ಹುಟ್ಟುಹಬ್ಬ ಆಚರಣೆ”


ಸಿರಿಗೇರಿ ಸೆ20. ಗ್ರಾಮದ ಬಸವನಪೇಟೆಯಲ್ಲಿ ಕನ್ನಡದ ಮೇರುನಟ ದಿವಂಗತ ಡಾ.ವಿಷ್ಣುವರ್ಧನ್ ರವರ ಹುಟ್ಟುಹಬ್ಬವನ್ನು ಗ್ರಾಮದ ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿ ಬಳಗದ ಯುವಕರು ಸೆ.18ರಂದು ಸಂಜೆ ಆಚರಿಸಿದರು. ನಟ ವಿಷ್ಣುವರ್ಧನ್ ರವರ ಭಾವಚಿತ್ರವಿಟ್ಟು ಪೂಜೆ ನೆರವೇರಿಸಿ, ಕೇಕ್ ಕತ್ತರಿಸಿ ಪರಸ್ಪರರು ಹಂಚಿಕೊಂಡು, ನೂರಾರು ಮಕ್ಕಳಿಗೆ ಚಾಕ್ಲೆಟ್ ಹಂಚಿ ಸಂಬ್ರಮಿಸಿದರು. ಇದೇವೇಳೆ ಕೆಲ ಯುವಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಕನ್ನಡದಲ್ಲಿ ತಮ್ಮದೇ ಛಾಪು ಮೂಡಿಸಿ ಕನ್ನಡ ಸಿನಿಮಾಗಳನ್ನು ಒಂದು ಹಂತಕ್ಕೆ ಹೆಸರು ಮಾಡಿದವರಲ್ಲಿ ವಿಷ್ಣು ರವರ ಪಾತ್ರ ದೊಡ್ಡದು. ಅವರ ಸಿನಿಮಾಗಳಲ್ಲಿ ಕೌಟುಂಬಿಕ, ಸಾಮಾಜಿಕ, ರಾಜಕೀಯ, ಕಳಕಳಿಯ ಜೊತೆಗೆ ಕೋಟಿ ಕೋಟಿ ಅಭಿಮಾನಿಗಳ ಹೃದಯದಲ್ಲಿ ಪ್ರತಿಭಾವಂತ ನಟರಾಗಿ ಸ್ಥಾನ ಅಲಂಕರಿಸಿದವರು ಎಂದು ತಿಳಿಸಿದರು. ಅಭಿಮಾನಿಗಳಾದ ಕೆ.ತಿಪ್ಪೆಸ್ವಾಮಿ, ಹಾರ್ಡ್‍ವೇರ್‍ಶಾಪ್ ಶಿವಪ್ರಕಾಶ್, ರಮೇಶ್‍ಕಲಾಲ್, ಕೆ.ತಿಪ್ಪಣ್ಣ, ಹುಲೆಪ್ಪ, ಶರಣಬಸವ, ಚಂದ್ರಶೇಕರ, ಸೋಮಶೇಖರ, ವೀರೇಶ್, ವೆಂಕಟೇಶ್, ಕೊಮಾರಿ, ಮೈಮುದ್ದೀನ್, ದಸ್ತಿಗಿರಿ ಮತ್ತು ಬಸವನಪೇಟೆಯ ಯುವ ಬಳಗದವರು ಪಾಲ್ಗೊಂಡಿದ್ದರು.
ಫೋಟೊ: ಸಿರಿಗೇರಿಯ ಬಸವನಪೇಟೆಯಲ್ಲಿ ಯುವಕರು ಡಾ.ವಿಷ್ಣವರ್ಧನ್ ರವರ ಹುಟ್ಟುಹಬ್ಬ ಆಚರಿಸಿದರು.

Attachments area