ಯುವಾ ಬ್ರಿಗೇಡ್ ನಿಂದ ಕಣಕಣದಲ್ಲಿ ಶಿವ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ

ಯಾದಗಿರಿ:ಎ.4: ಯುವಾ ಬ್ರಿಗೇಡ್ ವತಿಯಿಂದ ರಾಜ್ಯಾದ್ಯಂತ ಏಕಕಾಲಕ್ಕೆ ಜರುಗಿದ ‘ಕಣಕಣದಲ್ಲಿ ಶಿವ’ನಿದ್ದಾನೆ ಎಂದು ಸಾರುವ ಕಾರ್ಯಕ್ರಮ ಇಲ್ಲಿನ ಲಕ್ಷ್ಮೀ ನಗರದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಹಳೆಯ ಮತ್ತು ನಿರ್ಲಕ್ಷ್ಯಕ್ಕೀಡಾಗಿ ಎಲ್ಲೆಂದರಲ್ಲಿ ಬಿದ್ದದ್ದ ದೇವರ ಫೋಟೊಗಳು ಮತ್ತು ಚಿತ್ರಗಳನ್ನು ಸಂಗ್ರಹಿಸಿ ಅವುಗಳ ಕಟ್ಟು (ಫ್ರೇಮ್) ಗಳನ್ನು ತೆರವು ಮಾಡಿ ಚಿತ್ರಗಳನ್ನು ದೇವಸ್ಥಾನ ಆವರಣದಲ್ಲಿಯೇ ಭೂತಾಯಿಯ ಮಡಿಲಲ್ಲಿ ವಿಲೇವಾರಿ ಮಾಡಿ ಮೇಲೆ ತುಳಸಿ ಇಲ್ಲವೇ ಇನ್ನಿತರ ಧಾರ್ಮಿಕ ಸಸಿಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಯುವಾ ಬ್ರಿಗೇಡ್ ಜಿಲ್ಲಾ ಸಂಚಾಲಕ ವಿಶ್ವನಾಥ ಯಾದವ ದೇವಸ್ಥಾನದ ಕಟ್ಟೆ ಸೇರಿದಂತೆ ಹಳೆಯ ಬದಿಗಿಟ್ಟ ಬೀದಿಯಲ್ಲಿ ಬಿದ್ದಿದ್ದ ದೇವರ ಫೋಟೋಗಳನ್ನು ಶಿಸ್ತುಬದ್ಧವಾಗಿ ವಿಲೇವಾರಿ ಮಾಡುವ ಮೂಲಕ ಆ ಫೋಟೋಗಳ ಮೇಲೆ ಧಾರ್ಮಿಕ ಸಸಿಗಳನ್ನು ನೆಡುವ ಮೂಲಕ ಕಣಕಣದಲ್ಲಿಯೂ ಶಿವನಿದ್ದಾನೆ ಎಂಬುದನ್ನು ಸಾರುವ ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮ ಯುವಾ ಬ್ರಿಗೇಡ್ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಿಸ್ತಾರಕ ನಿಖಿಲ್ ಪಾಟೀಲ್, ನಗರಸಂಪರ್ಕ ವಿಠಲ್ ಕುಲಕರ್ಣಿ, ರಾಘು, ಶ್ರೀಕಾಂತ ಹಾಗೂ ಲಕ್ಷ್ಮೀಪುತ್ರ ಮಾಲಿ ಪಾಟೀಲ್, ಮಂಜುನಾಥ ಕೆಸರಟಗಿ, ಹರಿಶ ಪೂಜಾರಿ, ಕೃಷ್ಣ ಪಂಚಾಳ, ಶಂಕರಗೌಡ, ಬಸವರಾಜ, ಶರಣಗೌಡ ಯಲ್ಹೇರಿ ಇನ್ನಿತರರು ಪಾಲ್ಗೊಂಡಿದ್ದರು.