ಯುವಶಕ್ತಿ ಸೇವಾ ಸಮಿತಿಯಿಂದ ಶ್ರೀರಾಮನವಮಿ ಆಚರಣೆ

ಕೋಲಾರ.ಏ.೨೨:ಜನಸೇವೆ ಮಾಡುವುದರ ಮೂಲಕ ನಮ್ಮ ಜೀವನವನ್ನು ಪಾವನಗೊಳಿಸಿಕೊಳ್ಳಬೇಕು ಎಂದು ಯುವ ಶಕ್ತಿ ಸೇವಾ ಸಮಿತಿಯ ರಾಜ್ಯಾಧ್ಯಕ್ಷ ಯುವಶಕ್ತಿ ಸುಬ್ಬು ಅಭಿಪ್ರಾಯ ಪಟ್ಟರು.
ನಗರದ ಪೇಟೆಚಾಮನಹಳ್ಳಿಯಲ್ಲಿ ಯುವಶಕ್ತಿ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ರಾಮನವಮಿ ಹಬ್ಬದಲ್ಲಿ ಮಾತಾನಾಡುತ್ತಿದ್ದರು. ಮನಸ್ಸು ಮತ್ತು ಆತ್ಮವನ್ನು ಸಮನ್ವಯಗೊಳಿಸಲು ಧ್ಯಾನ ಅತ್ಯಂತ ಅತ್ಯವಶ್ಯಕ. ಧ್ಯಾನದ ಮೂಲಕ ನಮ್ಮನ್ನು ನಾವು
ಶುದ್ಧಗೊಳಿಸಿಕೊಳ್ಳಬೇಕು. ಕಷ್ಟದಲ್ಲಿ ಇರುವವರಿಗೆ ಸಹಾಯ ಹಸ್ತ ಮಾಡುವುದೇ ಮಾನವ ಧರ್ಮ ಎಂದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ್ ಬಾಬು ಮಾತಾನಾಡಿ ಹಬ್ಬದ ದಿನದಂದು ಪ್ರತಿಯೊಬ್ಬರೂ ಜಾತಿ ಧರ್ಮವೆಂಬ ಕಟ್ಟಳೆಗಳನ್ನು ಬದಿಗೊತ್ತಿ ಈ ದಿನದಲ್ಲಿ ಮಜ್ಜಿಗೆ ಪಾನಕಗಳನ್ನು ಹಂಚುವ ಮೂಲಕ ಈ ನಾಡಿನ ಸೌಹಾರ್ದತೆಯನ್ನು ಮೆರೆಯಬೇಕು ಇಡೀ ವಿಶ್ವವೇ ಒಂದು ಕುಟುಂಬದಂತೇ ಭಾವಿಸಬೇಕು ಎಂದರು.
ಸಿನಿಮಾ ನಟ ಶ್ರೀನಿವಾಸ ಮಾತಾನಾಡಿ ಧಾರ್ಮಿಕ ನಂಬಿಕೆಗಳ ಪ್ರಕಾರ ದೇವತೆಗಳು ಹಾಗೂ ದೇವರುಗಳು ಅವತಾರ ತಾಳಿದ ದಿನದಂದು ಭೂಮಿಯ ಮೇಲೆ ಅವರ ದೈವೀ ತತ್ವಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಈ ದಿನ ರಾಮಜಪ ಉಪಾಸನೆಗಳನ್ನು ಮಾಡುವುದರಿಂದ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದೆಂದು ತಿಳಿಸಿದರು.
ಅಂಬೇಡ್ಕರ್ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ವಕೀಲ ಮಂಜುನಾಥ ಮಾತಾನಾಡಿ ಈ ಕೊರೋನ ಸಂದರ್ಭದಲ್ಲಿ ಬಹಳಷ್ಟು ಜಾಗರೂಕತೆಯಿಂದ ಹಬ್ಬವನ್ನು ಮಾಡಬೇಕು. ಪ್ರತಿಯೊಬ್ಬ ವ್ಯಕ್ತಿ
ಸತ್ಯ ನ್ಯಾಯ ಧರ್ಮದ ಮೂಲಕ ನಾವು ಮನುಷ್ಯರಾಗಬೇಕು. ಪ್ರತಿಯೊಬ್ಬರೂ ಸಹಕಾರ ಮನೋಭಾವನೆಯ ಹೃದಯವಂತಿಕೆಯನ್ನು ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಯುವಶಕ್ತಿ ಸೇವಾ ಸಮಿತಿಯ ಸದಸ್ಯರುಗಳಾದ ಹಾರೋಹಳ್ಳಿ ಕಲ್ಯಾಣ್,ಹಾರೋಹಳ್ಳಿ ಕೇಶವ, ಅಮ್ಮೇರಹಳ್ಳಿ ಮುರಳಿ, ಹೆಮೇಶ್, ರಂಜಿತ್, ಸಂದೀಪ್, ದರ್ಶನ್ ಮತ್ತು ಸುತ್ತಮುತ್ತಲಿನ ಜನರು ಪಾಲ್ಗೊಂಡಿದ್ದರು