ಯುವಶಕ್ತಿ ಪ್ರೇರಣೆ ನನಗೆ ಆಶೀರ್ವಾದ : ದಿವಾಕರ


ಸಂಜೆವಾಣಿ ವಾರ್ತೆ
ಸಂಡೂರು : ಎ.13:  ನಾನೇನು ಹೊರಗಿನವನಲ್ಲ. ನಾನು ಪಾಕಿಸ್ಥಾನದವನು ಅಲ್ಲವೇ ಅಲ್ಲ. ನಾನು ಬಳ್ಳಾರಿ ಜಿಲ್ಲೆಯವನು ಭಾರತೀಯ ಜನತಾ ಪಕ್ಷ ನೆಲಕಚ್ಚಿಹೋದ ಸಮಯದಲ್ಲಿ ಪಕ್ಷವನ್ನು ಸಂಘಟನೆಯ ಮೂಲಕ ಬಲ ಪಡಿಸಿದೆ. ನಾನು ಪಕ್ಷದಲ್ಲಿದ್ದುಕೊಂಡು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಪರಿವರ್ತನೆ ಯಾತ್ರೆ ಮಾಡಿದೆ ಪಕ್ಷದ ಸಂಘಟನೆಗಾಗಿ ಹಗಲಿರುಳಿನ್ನದೆ ಶ್ರಮಿಸಿ ದುಡಿದಿದ್ದೇನೆ. ಪಕ್ಷದ ಪ್ರಾಥಮಿಕ ಸದಸ್ಯತ್ವ ಇಲ್ಲದವರಿಗೆ ಇಂದು ಪಕ್ಷ ಮಣೆಹಾಕಿ ಟಿಕೇಟ್ ನೀಡಿರುವುದು ಆಶ್ಚರ್ಯಕರವಾದ ಬೆಳವಣಿಗೆಯಾಗಿದೆ. ಭಾರತೀಯ ಜನತಾ ಪಕ್ಷದ ತತ್ವಸಿದ್ಧಾಂತವನ್ನು ಅನುಸರಿಸಿ ಸಾಮಾನ್ಯ ಕಾರ್ಯಕರ್ತರಿಗೂ ಟಿಕೇಟ್ ನೀಡುತ್ತಾರೆ ಎನ್ನುವ ಮನೋಭಾವನೆ ಇತ್ತು. ಆದರೆ ಪಕ್ಷದ ಸಿದ್ಧಾಂತ ಎಲ್ಲಿ ಹೋಯಿತು?. ಬಳ್ಳಾರಿ ಉಸ್ತುವಾರಿ ಸಚಿವ ಶ್ರೀರಾಮುಲು ಅವರು ಮೊಣಕಾಲ್ಕೂರು ಹಾಗೂ ಬಾದಮಿಯಿಂದಲು ವಿ. ಸೋಮಣ್ಣನವರು ವರುಣ ಮತ್ತು ಚಾಮರಾಜನಗರ, ಆರ್. ಆಶೋಕ್‍ರವರು ಪದ್ಮನಾಭ ನಗರ ಹಾಗೂ ಕನಕಪುರ. ಸಂಡೂರಿನ ದಿ. ಎಂ.ವೈ. ಘೋರ್ಪಡೆಯವರು ರಾಯಚೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಿಲ್ಲವೆನು? ಆನಂದಸಿಂಗ್ ರವರ ಪುತ್ರ ಸಿದ್ಥಾರ್ತ್‍ಸಿಂಗ್, ಬಿ.ಎಸ್. ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜೇಂದ್ರರವರಿಗೆ ಪಕ್ಷ ಟಿಕೇಟ್ ನೀಡಿಲ್ಲವೇನು? ನಾನೇನು ಕುಟುಂಬ ರಾಜಕಾರಣ ಮಾಡಿದ್ದೇನೆಯೇ? ರಾಘವೇಂದ್ರ ಜಿ.ಟಿ. ಪಂಪಾಪತಿ ಯವರನ್ನು ಪಕ್ಷಕ್ಕೆ ಕರೆತಂದೆ ಇಂದು ರಾಘವೇಂದ್ರ ಇದ್ದಿದ್ದರೆ ನಾನು ಭಾರತೀಯ ಜನತಾಪಕ್ಷದ ಸ್ಪರ್ಧೆಗೆ ಆಕಾಂಕ್ಷಿಯಾಗುತ್ತಿರಲಿಲ್ಲ, 2018ರಲ್ಲಿ ಕಾರ್ತಿಕ ಘೋರ್ಪಡೆಯವರು ರಾಘವೇಂದ್ರನಿಗೆ ಟಿಕೇಟ್ ನೀಡಿದರೆ ನಾನು ಸುಮ್ಮನಿದ್ದೇ. ಮಾತೃ ಪಕ್ಷಕ್ಕೆ ದ್ರೋಹ ಬಗೆಯಬರದು ಎನ್ನುವ ಮನೋಭಾವನೆಯಿಂದ ನನಗಾಗುವ ಅನ್ಯಾಯವನ್ನು ಸಹಿಸಿಕೊಂಡು ತಾಳ್ಮೆಯಿಂದ ಪಕ್ಷವನ್ನು ಕಟ್ಟಲು ಶ್ರಮಿಸಿದೆ. ಇಂದು ನನಗೆ ನೋವಾಗಿ ಭಾರತೀಯ ಜನತಾ ಪಕ್ಷದ ಕಾರ್ಯಕರಿಣಿ ಸಮಿತಿಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ನಾನು ಪಕ್ಷೇತರ ಅಭ್ಯಾರ್ಥಿಯಾಗಬೇಕೆ? ಕರ್ನಾಟಕ ಕಲ್ಯಾಣ ಪಕ್ಷದ (ಜನಾರ್ದನರೆಡ್ಡಿ) ಯವರ ಪಕ್ಷಕ್ಕೆ ಸೇರಬೇಕೆ ಎನ್ನುವ ವಿಚಾರ ಕಾರ್ಯಕಾರ್ತರಿಗೆ ಬಿಟ್ಟ ವಿಚಾರ. ಕಾರ್ಯಕರ್ತರು ನನ್ನನ್ನು ಬೆಳೆಸಿದ್ದಾರೆ ಕಾರ್ಯಕರ್ತರಿಂದಲೇ ನಾನು ಉನ್ನತ ಮಟ್ಟಕ್ಕೆ ಬೆಳೆದಿದ್ದೇನೆ ಇನ್ನು ಎರಡು ದಿನದಲ್ಲಿ ಕಾರ್ಯಕರ್ತರ ಅಭಿಲಾಷೆಯಂತೆ ವರ್ತಿಸುತ್ತೇನೆ ಎಂದು ಭಾರತೀಯ ಜನತಾ ಪಕ್ಷದ ಟಿಕೇಟ್ ವಂಚಿತ ಅಭ್ಯರ್ಥಿ ಕೆ.ಎಸ್. ದಿವಾಕರ್ ರವರು ತಮ್ಮ ಮನದಾಳದ ಮಾತುಗಳನ್ನಾಡಿದರು.
ಅವರು ಸಂಡೂರು ಪಟ್ಟಣದ ಕೂಡ್ಲಿಗಿ ರಸ್ತೆಯಲ್ಲಿ ಇರುವ ಎಸ್.ಎಲ್.ವಿ. ಫಂಕ್ಷನ್ ಹಾಲಿನಲ್ಲಿ ಸುದ್ಧಿಗೋಷ್ಠಿ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು ಅವರು ಮುಂದುವರೆದು ನಾನು ಯಾವುದೇ ಕಾರ್ಯಕ್ರಮದಲ್ಲಿ ಮುಂದುವರೆಯಬೇಕಾದರೆ ಕಾರ್ತಿಕ ಘೋರ್ಪಡೆಯವರ, ಶ್ರೀರಾಮುಲು, ಅಮಿತ್‍ಷಾ, ನರೇಂದ್ರ ಮೋದಿಯವರ ಭಾವಚಿತ್ರಗಳನ್ನು ಹಾಕಿಕೊಂಡೆ ಕೆಲಸಮಾಡಿದ್ದೇನೆ ಎಲ್ಲರ ವಿಶ್ವಾಸವನ್ನು ಗಳಿಸಿದ್ದೇನೆ ಎನ್ನುವುದಕ್ಕೆ ಇವುಗಳೇ ಸಾಕ್ಷಿಯಾಗಿವೆ. ನಾನು ನಿಮ್ಮ ಮನೆಯ ಮಗ, ನಿಮ್ಮ ಶಕ್ತಿಯೇ ನನ್ನಗೆ ಪ್ರೇರಣೆ ನನ್ನ ಕೊನೆ ಉಸಿರು ಇರುವವರೆಗೂ ನಿಮ್ಮ ಸೇವೆಯನ್ನು ಪ್ರಮಾಣಿಕವಾಗಿ ಮಾಡುತ್ತೇನೆ ಶಿಸ್ತಿನ ಶಿಪಾಯಿಯಾಗಿ ಪಕ್ಷಕ್ಕೆ ದುಡಿದರು ಏನು ಪ್ರಯೋಜನವಾಗಿಲ್ಲ. ಹಲವಾರು ವರ್ಷಗಳಿಂದ ಪಕ್ಷ ಕಟ್ಟಿ ಬೆಳೆಸಿದ ಜಗದೀಶ್ ಶೆಟ್ಟರಿಗೆ ಲಕ್ಷ್ಮಣ್ ಸವದಿ ಹಲವಾರು ಮಹನೀಯರಿಗೆ ಬಹಳ ಅನ್ಯಾಯವಾಗಿದೆ ನೀವು ಸ್ಪರ್ಧೆಮಾಡುವುದು ಬೇಡ ಎಂದರೆ ನಾನು ಸ್ಪರ್ಧಿಸುವುದಿಲ್ಲ, ಎಂದು ದಿವಾಕರ್ ರವರು ಹೇಳಿದಾಗ ಕಾರ್ಯಕರ್ತರು ನಿಮ್ಮ ಸ್ಪರ್ಧೆ ಅವಶ್ಯ ನಿಮಗೆ ಬೇಕಾದ ಧನ ಸಹಾಯವನ್ನು ನಾವೇ ಮಾಡುತ್ತೇವೆ ನೀವು ಭಯ ಪಡುವ ವಾತವಾರಣ ವಿಲ್ಲ. ನಾವು ನಿಮ್ಮನ್ನು ಖಂಡಿತವಾಗಿ ಗೆಲ್ಲಿಸುತ್ತೇವೆ ಎನ್ನುವ ಸಂಕಲ್ಪವನ್ನು ಕಾರ್ಯಕರ್ತರು ಪ್ರತಿಜ್ಞೆ ಮಾಡುವುದರ ಮೂಲಕ ತಿಳಿಸಿದರು. ಈ ಸಂದರ್ಭದಲ್ಲಿ ಕೊಂಚಿಗೇರಿ ನಾಗರಾಜ, ಕೆ.ಎಸ್. ಕುಮಾರಸ್ವಾಮಿ, ಹಡಪದ ಅಂಬರೀಶ್, ಬೊಪ್ಪಕಾನ್ ಆನಂದ, ಬಾಳೆಕಾಯಿ ಮಂಜುನಾಥ, ನಾವಾಬ್‍ಸಾಬ್, ರಮೇಶ್, ಸುರಾಜ್, ಹನುಮಂತರಾವ್ ಕದಂ ಅಲ್ಲದೇ ಮಹಿಳಾ ಕಾರ್ಯಕರ್ತರನ್ನೊಳಗೊಂಡು ಎರಡು ಸಾವಿರ ಅಭಿಮಾನಿಗಳು ಘಂಟಾಘೋಷವಾಗಿ ದಿವಾಕರ್ ರವರಿಗೆ ಜಯಘೋಷ ಮಾಡುವುದರ ಮೂಲಕ ಬಿಜೆಪಿ ಪಕ್ಷಕ್ಕೆ ಧಿಕ್ಕಾರ ಹಾಕಿರುವುದು ಎಲ್ಲರ ಗಮನ ಸೆಳೆದಂತಾಗಿದೆ.