ಯುವರಾಜ್, ಬಿಜೆಪಿಗೆ ಸಂಬಂಧವಿಲ್ಲ : ಬೊಮ್ಮಾಯಿ

ಬೆಂಗಳೂರು, ಜ. ೯- ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಯುವರಾಜ್‌ನ ವಿಚಾರಣೆ ನಡೆದಿದ್ದು, ಈತನಿಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ವಂಚಕನ ಜತೆ ಬಿಜೆಪಿ ನಾಯಕರು ಇರುವ ಭಾವಚಿತ್ರಗಳು ವೈರಲ್ ಆಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಭಾವಚಿತ್ರ ಇದ್ದ ಮಾತ್ರಕ್ಕೆ ಅವರಿಗೂ ವಂಚನಿಗೂ ಸಂಬಂಧ ಇದೆ ಎಂದು ಹೇಳುವುದು ತಪ್ಪಾಗುತ್ತದೆ ಎಂದರು.
ರಾಜಕಾರಣಿಗಳು ಸಾರ್ವಜನಿಕ ಜೀವನದಲ್ಲಿರುವವರ ಜತೆ ಭಾವಚಿತ್ರ ತೆಗೆಸಿಕೊಳ್ಳುತ್ತಾರೆ. ಅದಕ್ಕೂ ಪ್ರಕರಣಕ್ಕೂ ತಳಕು ಹಾಕುವುದು ಸರಿಯಲ್ಲ. ಯುವರಾಜ್ ಬಗ್ಗೆ ಎಲ್ಲ ಆಯಾಮಗಳಲ್ಲೂ ತನಿಖೆ ನಡೆದಿದೆ ಎಂದರು.
ಯುವರಾಜ್‌ಗೂ ಬಿಜೆಪಿ ನಾಯಕರಿಗೂ ನಂಟಿದೆ ಎಂಬ ವರದಿಗಳನ್ನು ಅಲ್ಲಗಳೆದ ಅವರು, ತನಿಖೆ ನಡೆದಿದೆ, ತನಿಖೆ ನಂತರ ಸತ್ಯಾಂಶ ಹೊರ ಬರಲಿದೆ ಎಂದರು.