ಯುವರತ್ನ ಆಗಮನ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕುಮಾರ್ ಅವರ ಬಹು ನಿರೀಕ್ಷಿತ ಚಿತ್ರ “ಯುವ ರತ್ನ” ತೆರೆಗೆ ಬಂದಿದೆ.

ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕಕ್ಕೆ ತೆರಗೆ ಬಂದಿದೆ.

“ರಾಜಕುಮಾರ” ಚಿತ್ರದ ಯಶಸ್ಸಿನ ನಂತರ ಪುನೀತ್ ರಾಜ್ ಕುಮಾರ್ ,ನಿರ್ದೇಶಕ ಸಂತೋಷ್ ಆನಂದ ರಾಮ್ ಮತ್ತು ನಿರ್ಮಾಪಕ ವಿಜಯ್ ಕಿರಗದಂದೂರು ಮತ್ತೊಮ್ಮೆ ಜತೆಯಾಗಿ ಕೆಲಸ ಮಾಡಿರುವ ಚಿತ್ರ ಇದು.

ಸಾಮಾಜಿಕ ಕಳಕಳಿ ಮತ್ತು ಶಿಕ್ಷಣ ವ್ಯವಸ್ತೆಯ ಹುಳುಕನ್ನು ತೆರೆಯ ಮೇಲೆ ತರಲಾಗಿದೆ‌. ಈಗಾಗಲೇ ಚಿತ್ರದ ಪಾಠಶಾಲಾ ಹಾಡು ಯಶಸ್ವಿಯಾಗಿದ್ದು ಅಭಿಮಾನಿಗಿಳಿಗೆ ಇಷ್ಟವಾಗಿದೆ.

ಪುನೀತ್ ಅಭಿಮಾನಿಗಳಿಗೆ ಹಬ್ಬದೂಟ‌ ಬಡಿಸಿದೆ.ನಾಲ್ಕು ವರ್ಷದ ನಂತರ ಈ ಜೋಡೊಯ ಚಿತ್ರ ತೆರೆಗೆ ಬಂದಿದ್ದು ಅಭಿಮಾನಿಗಳನ್ನು ಕುಣಿದು ಕುಪ್ಪಳಿಸುವಂತೆ ಮಾಡಿದೆ.

ಚಿತ್ರದಲ್ಲಿ ಹಿರಿ-ಕಿರಿಯ ಕಲಾವಿದರ ದೊಡ್ಡ ದಂಡೇ ಇದೆ 140ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರವನ್ನು ಚಿತ್ರೀಕರಣ ಮಾಡಿರುವುದು ಹೆಗ್ಗಳಿಕೆಯ ವಿಷಯ.

ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ರಾಜಕುಮಾರ ಚಿತ್ರಗಳು ಬಾರೀ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರಿಗೆ ಅದು ಮೂರನೇ ಬಾರಿಗೆ ಯಶಸ್ಸು ತಂದು ಕೊಡುವ ಚಿತ್ರ ಎಂದು ಈಗಾಗಲೇ ಗಾಂಧಿನಗರದಲ್ಲಿ ಮಾತುಗಳು ಆರಂಭವಾಗಿರುತ್ತದೆ.

ಈ ಚಿತ್ರದ ಮೂಲಕ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಹ್ಯಾಟ್ರಿಕ್ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.