ಯುವರತ್ನನಿಗೆ ಭಾವಪೂರ್ಣ ವಿದಾಯ

ದಾವಣಗೆರೆ. ಅ.೩೯;   ನಗರದ ಜಯದೇವ ವೃತ್ತದ ಬಳಿ ಇಂದು ಬೆಳಗ್ಗೆದಾವಣಗೆರೆ ಜಿಲ್ಲಾ ವಾದ್ಯ ಗೋಷ್ಠಿ ಕಲಾವಿದರ ಸಂಘದಿಂದ ದಿ. ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ  ನುಡಿ ನಮನ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಂ ಎಸ್ ರಾಮೇಗೌಡ ಮಾತನಾಡಿ ಬದುಕಿದರೆ ಯುವರತ್ನನಂತೆ ಬದುಕಬೇಕು ರಾಜ್ಯಕ್ಕೆ ಮಾದರಿಯಾಗಿ ಮನುಷ್ಯತ್ವದ ಮೌಲ್ಯಗಳನ್ನು ಎತ್ತಿ ಹಿಡಿದ ಸರಳ ಸಜ್ಜನಿಕೆಯ ಯುಗಪುರುಷ. ಬಾಲನಟ ನನ್ನಿಂದ ಇಲ್ಲಿಯವರೆಗೆ ನಗುವಲ್ಲೇ ಹುಟ್ಟಿ ನಗುವಲ್ಲೇ ಕೊನೆಯುಸಿರೆಳೆದ ನಟ ಪುನೀತ್ ರಾಜಕುಮಾರ್  ತನ್ನ ಜೀವನ ಸಾರ್ಥಕತೆ ಪಡಿಸಿಕೊಂಡ ಸರಳ ವ್ಯಕ್ತಿ. ಯುವಕರಿಗೆ ಆದರ್ಶ ಪರವಾಗಿದ್ದ ಯುವರತ್ನ ಇಂದಿನ ಯುವ ಬೆಳಗೆಗೆ ಸಾರ್ಥಕತೆ ಬದುಕನ್ನು ಹೇಗೆ ಸಾಧಿಸಬೇಕೆಂದು ಹೇಳಿಕೊಟ್ಟಿದ್ದಾರೆ ದೇಶದಲ್ಲಿ ಬದುಕಿದರೆ ಈ ರೀತಿ ಬದುಕಬೇಕು ಸ್ನೇಹ ಪ್ರೀತಿ ವಿಶ್ವಾಸ ಸರಳ ನಿಷ್ಠೆ ಪ್ರಾಮಾಣಿಕತೆ ಎಲ್ಲವೂ ಅಡಗಿಸಿಕೊಂಡ ಮಹಾನ್ ಪುರುಷ ನಮ್ಮೊಂದಿಗೆ ಇಲ್ಲ ಎಂಬುದೇ  ಬೇಸರದ ಸಂಗತಿ ಮತ್ತೆ ಕರ್ನಾಟಕದಲ್ಲಿ ಹುಟ್ಟಿ ಬರಲಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಲಾವಿದರ ಸಂಘದ ಅಧ್ಯಕ್ಷರಾದ ಸಹನ ಪರಮೇಶ್. ಧರ್ಮರಾಜ್. ಪರಮೇಶ್. ಚಿಂದೋಡಿ ಶಂಭುಲಿಂಗಪ್ಪ .ಅನಿಲ್. ಸುನಿಲ್  .ಮಂಜು .ವಿಶ್ವ. ಸುನೀತಾ .ಪ್ರೇಮ್. ಹಾಲೇಶ್. ಪ್ರಭುಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು