ಯುವರತ್ನನಿಗೆ ಪೇಕ್ಷಕರು ಫೀದಾ

ಕೋಲಾರ,ಏ.೨:ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾಗೆ ಕೋಲಾರದಲ್ಲಿ ಭರ್ಜರಿ ರಿಸ್ಪಾನ್ಸ್ ಸಿಕ್ಕಿದೆ.
ಕೋಲಾರದ ನಾರಾಯಣಿ ಚಿತ್ರಮಂದಿರ ಸೇರಿದಂತೆ ಕೋಲಾರದಲ್ಲಿ ನಾಲ್ಕು ಚಿತ್ರಮಂದಿರಗಳಲ್ಲಿ ಯುವರತ್ನ ಸಿನಿಮಾ ಬಿಡುಗಡೆಯಾಗಿದೆ. ಇನ್ನು ಕಳೆದ ಒಂದು ವಾರದಿಂದ ಕೋಲಾರದಲ್ಲಿ ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗದ ವತಿಯಿಂದ ಸಿನಿಮಾ ಬಿಡುಗಡೆಗೆ ತಯಾರು ಮಾಡಿಕೊಂಡಿದ್ದು, ಚಿತ್ರಮಂದಿರಗಳ ಬಳಿ ಬ್ಯಾನರ್ ಫ್ಲೆಕ್ಸ್ ಗಳನ್ನ ಹಾಕಿ ಅಭಿಮಾನ ಮೆರೆದಿದ್ದಾರೆ. ಅಲ್ಲದೆ ಇಂದು ಬಿಡುಗಡೆಗೊಂಡ ಸಿನಿಮಾ ನೋಡಲು ಪುನಿತ್ ಅಭಿಮಾನಿಗಳು ಥಿಯೇಟರ್ ಮುಂದೆ ಜಮಾಯಿಸಿದ್ದು, ಅಭಿಮಾನಿಗಳಿಗೆ ಎಲ್ಲಿಲ್ಲದ ಸಂತಸವಾಗಿದೆ. ಇನ್ನು ಪುನೀತ್ ಅಭಮಾನಿಗಳು ಯುವರತ್ನ ಹೆಸರಿನ ಟಿ.ಶರ್ಟ್ಸ್ ಧರಿಸಿ, ಥಿಯೇಟರ್ ಗಳ ಮುಂದೆ ಕುಣಿದು ಕುಪ್ಪಳಿಸುವ ಮೂಲಕ, ಪುನೀತ್ ಗೆ ಜೈಕಾರಗಳನ್ನ ಕೂಗಿದ್ದಾರೆ. ಅಲ್ಲದೆ ಪುನೀತ್ ಅಭಿನಯದ ಚಿತ್ರ ಯುವರತ್ನ, ಶತದಿನೋತ್ಸವ ಆಚರಣೆ ಮಾಡಬೇಕೆಂದು ಶುಭ ಕೋರಿದ್ದಾರೆ. ಅಲ್ಲದೆ ಕೊರೊನಾ ಎರಡನೇ ಅಲೆಯ ಮಧ್ಯೆಯೂ ತಮ್ಮನೆಚ್ಚಿನ ನಟನ ಸಿನಿಮಾ ನೊಡಲು ಕೋಲಾರದಲ್ಲಿ ಅಭಿಮಾನಿಗಳು ಮುಗಿಬಿದ್ದಿದ್ದಾರೆ.