ಯುವಮೋರ್ಚಾದ ಸೇವಾಚರಣೆ

ವಿಜಯಪುರ, ಮೇ.31-ಬಿ.ಜೆ.ಪಿ. ಯುವ ಮೋರ್ಚಾ ವಿಜಯಪುರ ನಗರ ಮಂಡಲ ವತಿಯಿಂದ ನಗರದ ಪ್ರತಿಷ್ಟಿತ ಅಂಗಡಿ ಮುಗ್ಗಟ್ಟುಗಳು ಮತ್ತು ಅತೀ ಜನ ಸಂದಣಿ ಸೇರುವ ಪ್ರದೇಶದಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಳ್ಳಲು ಸಾಮಾಜಿಕ ಅಂತರ ಮಾರ್ಕಿಂಗ ಮಾಡಿ ಅಲ್ಲಿರುವ ಜನರಿಗೆ ಮಾಸ್ಕ್ ವಿತರಣೆ ಮಾಡಲಾಯಿತು ಜೊತೆಗೆ ಜನರಿಗೆ ಕೋರೋನಾ ಬಗ್ಗೆ ಭಯಬೇಡಾ ಮುಂಜಾಗ್ರತೆ ಇರಲಿ ಎಂಬ ಸಂದೇಶವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ನಗರ ಯುವ ಮೋರ್ಚಾ ಅಧ್ಯಕ್ಷ ಸತೀಶ ಪಾಟೀಲ್, ಹಿರಿಯರಾದ ಷಣ್ಮುಖ ಮಡಿವಾಳರ, ಕೋಶಾಧ್ಯಕ್ಷ ಹರೀಶ ಪವಾರ, ಕಾರ್ಯದರ್ಶಿ ಕೃಷ್ಣಾ ಮಾಯಾಚಾರಿ, ಕಾರ್ಯಕಾರಿಣಿ ಸದಸ್ಯರಾದ ಮಂಥನ ಗಾಯಕವಾಡ, ರಘು ಭೋಸಲೆ, ಅಕ್ಷಯ ಶಿಂದೆ, ರಾಜ ಹಿರೋಳ್ಳಿ ಇನ್ನಿತರರು ಉಪಸ್ಥಿತರಿದ್ದರು.