ಯುವಪೀಳಿಗೆಗೆ ಜವಾಬ್ದಾರಿ ಅತೀಮುಖ್ಯ

ಹೊನ್ನಾಳಿ.ಜ.೨;   ಶ್ರೀ ಕ್ಷೇತ್ರ ಹಿರೇಕಲ್ಮಠದಲ್ಲಿ  ಹೊನ್ನಾಳಿಯ ಯುವ  ಹಾಡುಗಾರರು ಹಾಡಿ ಸಂಸ್ಕೃತಿ ಸಂಸ್ಕಾರದ ಅಡಿಯಲ್ಲಿ  ಹೊಸ ವರ್ಷದ ಸಂಭ್ರಮವನ್ನು ಯಾವುದೇ ಅವಗಡ ಇಲ್ಲದೆ  ಆಚರಿಸಿದರು. ಹೊಸ ವರ್ಷದ ಆಚರಣೆಯನ್ನು ಯುವಕರು ಮತ್ತು ಯುವತಿಯರು ಬೈಕು ಕಾರುಗಳಲ್ಲಿ ಮೋಜು ಮಸ್ತಿ ಮಾಡುತ್ತಾರೆ ಇಂಥ ಸಂದರ್ಭದಲ್ಲಿ ಅಪಘಾತಗಳು ಸಂಭವಿಸುತ್ತಿದ್ದು ಮತ್ತು ಅಸಭ್ಯ ದಿಂದ ನಡೆದುಕೊಳ್ಳುವುದು  ನಮ್ಮ ಭಾರತದ ಸಂಸ್ಕೃತಿಗೆ ಧಕ್ಕೆ ತರುವಂಥ ಕೆಲಸವಾದ್ದರಿಂದ ಇಂಥ ಕಾರ್ಯಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಾವು  ಇಂಥ ಕಾರ್ಯಕ್ರಮಗಳನ್ನು ಶ್ರೀಮಠದಲ್ಲಿ ಆಯೋಜಿಸಿದ್ದು ಇಂಥ ಕಾರ್ಯಕ್ರಮಗಳಿಗೆ ಹೆಚ್ಚು ಒಲವು ಕೊಡುವಂತೆ ಯುವ ಪೀಳಿಗೆಗೆ ರಾಜಕೀಯ ಕಾರ್ಯದರ್ಶಿಯಾದ ಎಂ ಪಿ ರೇಣುಕಾಚಾರ್ಯ   ಮಕ್ಕಳಿಂದ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ    ಮಾತನಾಡಿದರು.ಇದೆ ಸಂದರ್ಭದಲ್ಲಿ  ಪೂಜ್ಯರಾದ  ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು  9   ತಿಂಗಳ ನಂತರ ನಾವು ಇಂಥ ಕಾರ್ಯಕ್ರಮದಲ್ಲಿ ಸೇರಿಕೊಂಡು ಕೊರೋನಾ ದಂತ  ಮಹಾಮಾರಿಯನ್ನು ಹೊಡೆದೋಡಿಸುವಂತಹ ಕಾರ್ಯಕ್ರಮದ ಅಡಿಯಲ್ಲಿ ಧೈರ್ಯದಿಂದಿದ್ದು  ಸಾರ್ವಜನಿಕರಿಗೂ ಧೈರ್ಯ ತುಂಬಿ ಕರೊನ ಕಾಲದಲ್ಲಿ ಕರೋನ ಜಾಗೃತಿ ಅಭಿಯಾನ ಕಾರ್ಯಕ್ರಮಗಳು ಮತ್ತು  ನವೆಂಬರ್ 1 ರಂದು ಕನ್ನಡದ ಅರಿವಿನ ಅಭಿಯಾನ ಕಾರ್ಯಕ್ರಮವನ್ನು ಮಾಡುವ ಮೂಲಕ ಜನಪ್ರಿಯತೆಯನ್ನು ಗಳಿಸಿದ ಯುವ ಹಾಡುಗಾರರನ್ನು ಸೇರಿಸಿ ಡಿಸೆಂಬರ್ 31 ರಂದು ಹೊಸ ವರ್ಷವದ ಆಚರಣೆಯನ್ನು ತಡೆದು ಶ್ರೀಮಠದಲ್ಲಿ ಸಂಸ್ಕೃತಿ ಸಂಸ್ಕಾರ ದತ್ತ ಯುವ ಪೀಳಿಗೆಗೆ ಹಾಡುವ ಮೂಲಕ ಮತ್ತು ನೃತ್ಯ ಮಾಡುವ ಮೂಲಕ ಸಂದೇಶವನ್ನು ಕೊಟ್ಟಿರುವ ನಮ್ಮ ಈ ಯುವ ಹಾಡುಗಾರರ ತಂಡಕ್ಕೆ ಮತ್ತು ದೇಶದ ಯುವಪೀಳಿಗೆಗೆ ಸಂದೇಶ ಕೊಡುವ ಮೂಲಕ ಆಶೀರ್ವದಿಸಿದರು. ಈ ಸಂದರ್ಭದಲ್ಲಿ   ಹೊನ್ನಾಳಿಯ ಆರಕ್ಷಕ ಠಾಣೆಯ ಸಿಪಿಐ ದೇವರಾಜ್ ಪಿಎಸ್ಸೈ ಬಸವನಗೌಡ ಬಿರಾದರ್. ಮಠದ ಕಾರ್ಯದರ್ಶಿ ಚನ್ನಬಸಯ್ಯ ಎಂ ಪಿ ಎಂ. ಸುರೇಶ್ ಹೊಸಕೇರಿ ಪಟ್ಟಣ ಪಂಚಾಯಿತಿ ಸದಸ್ಯರು. ಶಾಂತ. ವಿದ್ಯಾ ಸಂತೋಷ್. ಕುಮಾರ ಸ್ವಾಮಿ.  ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಕೆ ವಿ ಶ್ರೀಧರ್. ಹರ್ಷ ಗುರುಮಠ.  ದಾನಪ್ಪ.  ರೈತ ಮುಖಂಡ ಬಸವರಾಜಪ್ಪ.  ಧ್ವನಿವರ್ಧಕ ರಮೇಶ್. ಮತ್ತು ಶ್ರೀಮಠದ ಭಕ್ತರು ಇತರರು ಇದ್ದರು