ಯುವತಿ ಮೃತದೇಹ ಪತ್ತೆ: ಸ್ಥಳಕ್ಕೆ ಪೊಲೀಸ್ ಹಿರಿಯ ಅಧಿಕಾರಿಗಳು ಭೇಟಿ

ಪಿರಿಯಾಪಟ್ಟಣ: ಅಪರಿಚಿತ ಯುವತಿ ಓರ್ವಳನ್ನು ಕೊಲೆ ಮಾಡಿ ಸುಟ್ಟು ಹಾಕಿರುವ ಘಟನೆ ತಾಲ್ಲೂಕಿನ ಕೆಲ್ಲೂರು ಗ್ರಾಮದ ಬಳಿ ಭಾನುವಾರ ಮುಂಜಾನೆ ಜರುಗಿದೆ.
18 ರಿಂದ 20 ವರ್ಷದ ಯುವತಿಯೋರ್ವಳನ್ನು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಕೆಲ್ಲೂರು ಗ್ರಾಮದ ಪಕ್ಕದಲ್ಲಿ ಹಾದು ಹೋಗಿರುವ ಹಾರಂಗಿ ನಾಲೆ ಏರಿ ಮೇಲೆ ಸುಟ್ಟು ಹಾಕಿರುವುದನ್ನು ಭಾನುವಾರ ಮುಂಜಾನೆ ವಾಕಿಂಗ್ ಗೆ ತೆರಳಿದ್ದ ಸ್ಥಳಿಯರು ಗಮನಿಸಿ ಗ್ರಾಮಸ್ಥರಿಗೆ ತಿಳಿಸಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ಘಟನೆ ಸಂಬಂಧ ಗ್ರಾಮ ಸಹಾಯಕ ರಾಧಾಕೃಷ್ಣ ಪಿರಿಯಾಪಟ್ಟಣ ಪೊಲೀಸರಿಗೆ ದೂರು ನೀಡಿದ್ದು ವಿಷಯ ತಿಳಿದ ಎಸ್ಪಿ ರಿಷ್ಯಂತ್ ಸಿಂಗ್, ಡಿವೈಎಸ್ಪಿ ಸುಂದರ್ ರಾಜ್, ಸಿಪಿಐ ಬಿ.ಆರ್ ಪ್ರದೀಪ್, ಪ್ರೊಬೇಷನರಿ ಐಪಿಎಸ್ ಜಿತೇಂದ್ರ ಕುಮಾರ್,
ಎಸ್ಐ ಪುಟ್ಟರಾಜು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ದೂರು ದಾಖಲಿಸಿ ತನಿಖೆ ಕೈಗೊಂಡು ಚಹರೆ ಪತ್ತೆಗಾಗಿ ಕೋರಿದ್ದಾರೆ.