ಯುವತಿ ಪ್ರಕರಣ- ಕಾನೂನು ಕ್ರಮಕ್ಕೆ ಆಗ್ರಹ


ಬಾದಾಮಿ,ಎ.7:ನರಗುಂದದಲ್ಲಿ ದಲಿತ ಯುವತಿಯನ್ನು ಅಪಹರಿಸಿ, ರಾಮದುರ್ಗದಲ್ಲಿ ಮಾನಸಿಕವಾಗಿ ಚಿತ್ರಹಿಂಸೆ ನೀಡಿ ಅತ್ಯಾಚಾರ ಮಾಡಿ ಕೊಲೆ ಮಾಡಿರುವುದು ಹೇಯ ಕೃತ್ಯವಾಗಿದ್ದು, ಇದನ್ನು ಉಗ್ರವಾಗಿ ಖಂಡಿಸುತ್ತೇವೆ. ಕೊಲೆಗೆ ಕಾರಣರಾದ ವ್ಯಕ್ತಿಯನ್ನು ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ವಿಶ್ವನಿರ್ಮಾಣ ಸೇನೆ ಕಾರ್ಯಕರ್ತರು ಸರಕಾರಕ್ಕೆ ಒತ್ತಾಯಿಸಿದರು.
ನಗರದ ಅಕ್ಕಮಹಾದೇವಿ ಅನುಭಾವ ಮಂಟಪದಿಂದ ಹೊರ ಪ್ರತಿಭಟನಾಕಾರರು ರಾಮದುರ್ಗ ಕ್ರಾಸ್ ಬಸ್ ನಿಲ್ದಾಣ, ಬಸವೇಶ್ವರ ಸರ್ಕಲ್ ಮೂಲಕ ಪಿಕಾರ್ಡ ಬ್ಯಾಂಕ್ ಆವರಣಕ್ಕೆ ಆಗಮಿಸಿದರು.
ಪಿಕಾರ್ಡ ಬ್ಯಾಂಕ್ ಆವರಣದಲ್ಲಿ ಸಭೆಯಾಗಿ ಮಾರ್ಪಟ್ಟು ವಿವಿಧ ಘೋಷಣೆ ಕೂಗಿ ಉಪತಹಸೀಲ್ದಾರ್ ಬೊಮ್ಮನ್ನವರ ಹಾಗೂ ಕಂದಾಯ ನಿರೀಕ್ಷಕ ಶಿವನಗೌಡ ದ್ಯಾಪೂರ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸೇನೆ ಅಧ್ಯಕ್ಷ ಮಂಜುನಾಥ ಕಲಾಲ, ಜಿಲ್ಲಾಧ್ಯಕ್ಷ ರವಿ ಹುಲ್ಲೂರ, ಭೀಮಸಿ ಗೊರಕೊಪ್ಪ, ಕಾರ್ತಿಕ ಪೂಜಾರ, ರವಿ ವಡ್ಡರ, ಮಂಜು ಭಜಂತ್ರಿ, ಸಂದೀಪ ಕಲಾಲ, ಮಂಜು ಯರಗೊಪ್ಪ, ಪ್ರವೀಣ, ವಿಠ್ಠಲ, ಈಶ್ವರ, ಚಂದ್ರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.