ಯುವತಿ ನಾಪತ್ತೆ 

ಬಂಟ್ವಾಳ, ನ.೧೧- ಮಂಗಳೂರಿನಲ್ಲಿ ಕೆಲಸದ ಇಂಟರ್ ವ್ಯೂ ಇದೆ ಹೋದ ಯುವತಿಯೋರ್ವಳು ನಾಪತ್ತೆಯಾದ ಬಗ್ಗೆ ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿದೆ. 

ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಕಂಬಳಬೆಟ್ಟು ನಿವಾಸಿ ದಿ.ಆನಂದ ಅವರ ಪುತ್ರಿ ಸುಶ್ಮಿತ (21) ನಾಪತ್ತೆಯಾದ ಯುವತಿ. ನ.8 ರಂದು ಮಂಗಳವಾರ ಬೆಳಿಗ್ಗೆ ಮನೆಯಿಂದ ಮಂಗಳೂರಿನಲ್ಲಿ ಕೆಲಸವೊಂದರ ಇಂಟರ್ ವ್ಯೂ ಇದೆ ಮನೆಯಿಂದ ಹೋದವಳು ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ ವಿಟ್ಲ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.