ಯುವತಿ ನಾಪತ್ತೆ

ಮಂಗಳೂರು, ನ.೩- ಕಿನ್ನಿಗೋಳಿಯ ಮನ್ನಬೆಟ್ಟು ಗ್ರಾಮದ ಮುಂಚಿಕಾಡಿನ ಪ್ರೀತಿ (೨೫) ಎಂಬ ಯುವತಿಯು ನವೆಂಬರ್ ೧ ರಂದು ಬ್ಯಾಂಕಿಗೆ ಹಣ ಕಟ್ಟಲು ಹೋದವಳು ಮನೆಗೆ ವಾಪಾಸ್ಸು ಬಾರದೆ ಕಾಣೆಯಾಗಿದ್ದಾಳೆ.
೫ ಅಡಿ ಎತ್ತರ, ಎಣ್ಣೆ ಕಪ್ಪು ಮೈ ಬಣ್ಣ, ದುಂಡು ಮುಖ, ಕುಂಕುಮ ಬಣ್ಣದ ಚೂಡಿದಾರ್ ಧರಿಸಿರುವ ಕನ್ನಡ ಮತ್ತು ತುಳು ಭಾಷೆ ಮಾತನಾಡುವ ಈ ಯುವತಿಯ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ಠಾಣಾಧಿಕಾರಿ, ಮೂಲ್ಕಿ ಪೊಲೀಸ್ ಠಾಣೆ, ದೂ. ಸಂಖ್ಯೆ: ೦೮೨೪-೨೨೯೦೫೩೩, ೯೪೮೦೮೦೫೩೩೨, ೯೪೮೦೮೦೫೩೫೯, ಮಂಗಳೂರು ನಗರ ಕಂಟ್ರೋಲ್ ರೂಮ್ ೦೮೨೪-೨೨೨೦೮೦೦ ತಿಳಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಅಲೆಮಾರಿ/ಅರೆ ಅಲೆಮಾರಿ ನಿಗಮ- ಅರ್ಜಿ ಆಹ್ವಾನ
ಮಂಗಳೂರು, ನ.೩- ಕರ್ನಾಟಕ ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸ್ತುತ ಸಾಲಿಗೆ ಸ್ವಯಂ ಉದ್ಯೋಗ ಸಾಲ ಯೋಜನೆ, ಸ್ವ ಸಹಾಯ ಗುಂಪುಗಳ ಮೂಲಕ ಸಾಲ ಮತ್ತು ಸಹಾಯಧನ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ಗಂಗಾಕಲ್ಯಾಣ ನೀರಾವರಿ ಯೋಜನೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಅರ್ಜಿ ಸಲ್ಲಿಸಲು ನವೆಂಬರ್ ೧೨ ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ಕಚೇರಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ರೇಡಿಯೋ ಪಾರ್ಕ್ ಬಳಿ, ಉರ್ವಸ್ಟೋರ್ ಬಸ್ಸು ನಿಲ್ದಾಣದ ಹತ್ತಿರ, ಮಂಗಳೂರು ದೂ.ಸಂ: ೦೮೨೪-೨೪೫೬೫೪೪ ಅಥವಾ ವೆಬ್‌ಸೈಟ್ <ತಿತಿತಿ.ಜbಛಿಜಛಿ.ಞಚಿಡಿಟಿಚಿಣಚಿಞಚಿ.gov.iಟಿ> ಸಂಪರ್ಕಿಸಬಹುದೆಂದು ಎಂದು ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.