ಯುವತಿ ಜೊತೆ ಅಸಭ್ಯವಾಗಿ ವರ್ತಿಸಿ ಹಣ ಲೂಟಿ: ಇಬ್ಬರ ಸೆರೆ


ಮಂಗಳೂರು, ಮಾ.೨೬- ಕೆಲಸ ಮುಗಿಸಿ ಬರುತ್ತಿದ್ದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿ, ಆಕೆಯಲ್ಲಿದ್ದ ಹಣ ದೋಚಿ ಪರಾರಿಯಾದ ಇಬ್ಬರು ಆರೋಪಿಗಳನ್ನು ಪೊಲೀಸರು ಮಾ.೨೪ರ ಬುಧವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಬಿಹಾರ ಮೂಲದ ಅರರಿಯಾ ಜಿಲ್ಲೆಯ ಅಜಯ್ ಕುಮಾರ್ ಹಾಗೂ ಸುಭೋದ್ ಕುಮಾರ್ ಎಂದು ಗುರುತಿಸಲಾಗಿದೆ.
ಜೋಕಟ್ಟೆಯ ಸಂಕದಡಿಯ ಹೊಸಮನೆಯ ನಿವಾಸಿಯಾಗಿದ್ದ ಯುವತಿ ಮಾ.೨೩ ರಂದು ರಾತ್ರಿ ೭.೩೦ಕ್ಕೆ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಮನೆಯ ಬಳಿ ಅಪರಿಚಿತರಿಬ್ಬರು ಅವರನ್ನು ಬಿಗಿಯಾಗಿ ಹಿಡಿದು ಅಸಭ್ಯವಾಗಿ ವರ್ತಿಸಿ ಅವರ ಕೈಯಲ್ಲಿದ್ದ ೧ ಸಾವಿರ ಹಣವಿದ್ದ ಪರ್ಸ್’ನ್ನು ದೋಚಿದ್ದ ಬಗ್ಗೆ ದೂರು ದಾಖಲಿಸಿದ್ದರು. ಅದರಂತೆ ಕಾರ್ಯಾಚರಣೆಗಿಳಿದ ಪೊಲೀಸರು ಬಿಹಾರ ಮೂಲದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.