ಯುವತಿ ಕೊಲೆ ಪ್ರಕರಣ : ಕೊಲೆಗಾರನ ತಂದೆ ತಾಯಿ ಆರೆಸ್ಟ್.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜು. 31 :- ತಾಲೂಕಿನ ಕನ್ನಿ ಬೋರಯ್ಯನಹಟ್ಟಿ ಗ್ರಾಮದಲ್ಲಿ ನಡೆದ ಯುವತಿಯ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡ  ಪೊಲೀಸ ತಂಡಕ್ಕೆ ಸಿಕ್ಕ ಮಾಹಿತಿಯಂತೆ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಬೋಜರಾಜ್ ಗೆ ಸಹಕರಿಸಿದ ಆತನ  ತಂದೆ ಬಸಣ್ಣ ಮತ್ತು  ಭೋಜರಾಜನಿಗೆ  ಅಪ್ರಾಪ್ತೆಯನ್ನು ಮದುವೆ ಮಾಡಿಸಿದ್ದ ಬಾಲ್ಯವಿವಾಹ ಪ್ರಕರಣದಲ್ಲಿ ಬೋಸರಾಜ್ ತಾಯಿ ಕರಿಬಸಮ್ಮ ಸಹ ಭಾಗಿಯಾಗಿದ್ದ ಆರೋಪಿಗಳೆಂದು ಹೊಸಹಳ್ಳಿ ಪೊಲೀಸರು ಈ  ಇಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವಿಜಯನಗರ ಎಸ್ಪಿ ಡಾ ಅರುಣ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ತಿಂಗಳು ತಾಲೂಕಿನ ಕನ್ನಿ ಬೋರಯ್ಯನಹಟ್ಟಿಯ ನರ್ಸಿಂಗ್ ಓದುತ್ತಿದ್ದ ಯುವತಿ ನಿರ್ಮಲಾಳನ್ನು  ಅದೇ ಗ್ರಾಮದ ಸಂಬಂದಿ ಬೋಜರಾಜ್ ಎಂಬಾತನು ಲಾಂಗ್ ಮಚ್ಚಿನಿಂದ ಬರ್ಬರವಾಗಿ ಯುವತಿ ಕೊಲೆ ಮಾಡಿ ಆಕೆಯ ರುಂಡವನ್ನು ತೆಗೆದುಕೊಂಡು  ಹೊಸಹಳ್ಳಿ ಠಾಣೆಗೆ ಹೋಗಿ ಪೊಲೀಸರಿಗೆ ಶರಣಾಗಿದ್ದ ಆರೋಪಿ ಈಗಾಗಲೇ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು ಈ ಪ್ರಕರಣವನ್ನು ಬೆನ್ನತ್ತಿದ  ಪೊಲೀಸರ ತಂಡ ಮುಂದಿನ ತನಿಖೆ ಕೈಗೊಂಡಾಗ ಒಂದಿಲ್ಲೊಂದು ಟ್ವಿಸ್ಟ್ ಗೆ ತಿರುಗುತ್ತಿದೆ  ಕೊಲೆ ಆರೋಪಿಗೆ ಆತನ ತಂದೆ ಬಸಣ್ಣ ಕುಮ್ಮಕ್ಕು ನೀಡಿ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ತಿಳಿದಿದೆ ಆತನನ್ನು ಬಂಧಿಸಲು ಹೋದಾಗ ಕುಟುಂಬದ ಜೊತೆಗೆ ತಲೆಮರೆಸಿಕೊಂಡಿದ್ದ ಎಂದು ತಿಳಿದಿತ್ತು ಮತ್ತು ಕೊಲೆ ಆರೋಪಿ ಬೋಜರಾಜ್ ಕಳೆದ ಎರಡು ತಿಂಗಳ ಹಿಂದೆ ಮದುವೆಯಾಗಿದ್ದ ಇವಳ ವಯಸ್ಸು ಹದಿನೈದುವರೆ ವರ್ಷದ ಅಪ್ರಾಪ್ತೆ ಎಂದು ತನಿಖೆಯಿಂದ ತಿಳಿದ ಪೊಲೀಸ ತಂಡ ಬೋಜರಾಜನಿಗೆ ಮದುವೆ ಮಾಡಿಸುವಲ್ಲಿ ಮುಂದಾಗಿ ಪ್ರಮುಖಳಾದ ಆರೋಪಿ ತಾಯಿ ಕರಿಬಸಮ್ಮ ಎಂದು ತಿಳಿದಿದ್ದು ಈಕೆಯನ್ನು ಬಾಲ್ಯವಿವಾಹ ಹಾಗೂ ಪೋಕ್ಸೋ ಕಾಯಿದೆಯಡಿ ಬಂಧಿಸಲಾಗಿದ್ದು ಕೊಲೆ ಆರೋಪಿ ಭೋಜರಾಜನ ಕೊಲೆ ಹಾಗೂ ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ ಆತನ ತಂದೆ ತಾಯಿ ಇಬ್ಬರನ್ನೂ  ಬಂಧಿಸಿದ ಹೊಸಹಳ್ಳಿ ಪೊಲೀಸರು  ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದರೆಂದು ತಿಳಿದಿದೆ. 

Attachments area