ಯುವತಿ ಕಾಣೆ;


ವಿಜಯನಗರ (ಕೂಡ್ಲಿಗಿ)23: ತಾಲ್ಲೂಕಿನ ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 23 ವರ್ಷ ವಯಸ್ಸಿನ ಕಾವೇರಿ ಕೆ.ಎಂ. ಎಂಬ ಯುವತಿ ಕಾಣೆಯಾದ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ಸಹಾಯಕ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಯರಿಯಪ್ಪ ಅಂಗಡಿ ತಿಳಿಸಿದ್ದಾರೆ.
ಚಹರೆ: 5.1 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ, ದುಂಡುಮುಖ ಹೊಂದಿರುತ್ತಾಳೆ. ಕನ್ನಡ ಭಾಷೆ ಮಾತನಾಡುತ್ತಾಳೆ, ಕಾಣೆಯಾದ ದಿನ ಆಕಾಶ ನೀಲಿ ಬಣ್ಣದ ಚುಡಿದಾರ ಧರಿಸಿರುತ್ತಾಳೆ. ಈ ಯುವತಿಯ ಮಾಹಿತಿ ದೊರೆತಲ್ಲಿ ದೂ.9480805784 ಸಂಖ್ಯೆಗೆ ಸಂಪರ್ಕಿಸಿ ಮಾಹಿತಿ ನೀಡಬಹುದು.