ಯುವತಿ ಕಣ್ಮರೆ

ಕಲಬುರಗಿ.ಮೇ.16:ಜೇವರ್ಗಿ ತಾಲೂಕಿನ ಗೌನಳ್ಳಿ ಗ್ರಾಮದ ಮಲ್ಕಪ್ಪ ಜೀವಣಗಿ ಇವರ 20 ವರ್ಷದ ಮಗಳಾದ ಪೂಜಾ ಇವರು 2021ರ ಮೇ 4 ರಂದು ಮಧ್ಯಾಹ್ನ 2.30 ಗಂಟೆಗೆ ಮನೆಯಿಂದ ಬಯಲು ಶೌಚಕ್ಕೆ ಹೋಗಿ ಮರಳಿ ಮನೆ ಬಾರದೇ ಕಾಣೆಯಾಗಿದ್ದಾರೆ ಎಂದು ಜೇವರ್ಗಿ ಪೊಲೀಸ್ ಠಾಣೆಯ ಅರಕ್ಷಕ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಣೆಯಾದ ಪೂಜಾ ಇವರು 4 ಅಡಿ 2 ಇಚು ಎತ್ತರ ಇದ್ದು, ಗೋಧಿ ಮೈಬಣ್ಣ, ದುಂಡು ಮುಖ, ತೆಳ್ಳನೆ ಮೈಕಟ್ಟು ಇದ್ದು, ಹಸಿರು ಬಣ್ಣದ ಟಾಪ್, ಹಳದಿ ಬಣ್ಣದ ಚೂಡಿದಾರ್ ಪ್ಯಾಂಟ್ ಮತ್ತು ಕೆಂಪು ಬಣ್ಣದ ಓಡನಿ ಧರಿಸಿದ್ದು, ಹಣೆಯ ಮೇಲೆ ಕಪ್ಪು ಹಣಚ ಬಟ್ಟು ಇರುತ್ತದೆ. ಕನ್ನಡ ಭಾಷೆ ಮಾತನಾಡುತ್ತಾರೆ.

ಕಾಣೆಯಾದ ಯುವತಿಯನ್ನು ಎಲ್ಲಾ ಕಡೆ ಹುಡಿಕಾಡಿದರೂ ಸಿಕ್ಕಿರುವುದಿಲ್ಲ. ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಈ ಬಾಲಕಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಜೇವರ್ಗಿ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 08442-236033 ಹಾಗೂ ಮೊಬೈಲ್ ಸಂಖ್ಯೆ 9480803560 ಗಳಿಗೆ ತಿಳಿಸಬೇಕೆಂದು ಅವರು ತಿಳಿಸಿದ್ದಾರೆ.