ಯುವತಿಯ ವಿನಯಭಂಗ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ

ವಿಜಯಪುರ, ಸೆ.24-ಕವಲಗಿ ತಾಂಡೆಯಲ್ಲಿ ಹಿರಾಸಿಂಗ ಮೋತಿಲಾಲ ಚವ್ಹಾಣ ಇವರ ಮಗಳಿಗೆ ಹೆಗಡಿಹಾಳ ತಾಂಡಾದ ಹುಡಗರು ವಿನಯ ಭಂಗ ಮಾಡಿ ಅವಮಾನ ಮಾಡಿದ್ದರ ಪಿರ್ಯಾದ ದಾಖಲಿಸಿಕೊಳ್ಳಲು ಗ್ರಾಮೀಣ ಠಾಣೆ ಪಿ.ಎಸ್.ಐ ನಿರ್ಲಕ್ಷ್ಯವಹಿಸಿದ್ದು ಖಂಡಿಸಿ ಪಿಎಸ್‍ಐ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಿಜಯಪುರ ಜಿಲ್ಲಾ ಬಂಜಾರಾ ಕ್ರಾಂತಿ ದಳ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಅರಗಜ್ಞಾನೇಂದ್ರ ಕರ್ನಾಟಕ ಸರಕಾರ ಬೆಂಗಳೂರ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಂಜಾರಾ ಕ್ರಾಂತಿದಳದ ವಿಜಯಪುರ ಜಿಲ್ಲಾಧ್ಯಕ್ಷ ಶಂಕರ ಚವ್ಹಾಣ ಮಾತನಾಡಿ, ನಮ್ಮ ಸಮಾಜದವರಿಗೆ ಆಘುವ ಅನ್ಯಾಯ ಕುಂದುಕೊರತೆ ನಿವಾರಿಸಲು ನಮ್ಮ ಸಂಘವು ಕಾರ್ಯ ಮಾಡುತ್ತದೆ. ಕವಲಗಿ ತಾಂಡಾದ ಹಿರಾಸಿಂಗ ಮೋತಿಲಾಲ ಚವ್ಹಾಣ ಇವರ ಮಗಳು ಶಾಲೆಗೆ ಹೋಗುತ್ತಿದ್ದಾಗ ಹೆಗಡಿಹಾಳ ತಾಂಡಾದ ಹುಡುಗರು ಮಿಥುನ ಕಿಸನ ರಾಠೋಡ, ಅನಿಲ ಗೋಪಾಲ ಚವ್ಹಾಣ ನಿತ್ಯ ಚುಡಾಯಿಸುವುದು ಅವಮಾನಕರವಾಗಿ ವರ್ತಿಸುವುದು ಮಾನಸಿಕ ಹಿಂಸೆಯನ್ನು ನೀಡುತ್ತಿದ್ದರು.
ಇದನ್ನು ವಿಚಾರಿಸಲು ಕವಲಗಿ ತಾಂಡಾದ ಹಿರಿಯರು ಹೆಗಡಿಹಾಳ ತಾಂಡಾದ ಹಿರಿಯರೊಂದಿಗೆ ಈ ವಿಷಯದ ಬಗ್ಗೆ ಚರ್ಚಿಸಲು ಯೋಚಿಸಿದ್ದರು ಹಾಘು ಸದರಿ ಹುಡುಗರಿಗೆ ಬುದ್ದಿವಾದ ಹೇಳಿದ್ದರು ಹೀಗೆ ಇದ್ದಾಗ ರವಿವಾರ 19-09-2021 ರಂದು ರಾತ್ರಿ 9 ಗಂಟೆಗೆ ಮೇಲ್ಕಾಣಿಸಿದ ಹುಡುಗರೊಂದಿಗೆ ಕವಲಗಿ ತಾಂಡಾ ಲಾಲು ಅರ್ಜುನ ರಾಠೋಡ ಮತ್ತು ಏಕನಾಥ ಪೋಮು ಪವಾರ ಇವರ ಜೊತೆ ಕೂಡಿ. ಹಿರಾಸಂಗ ಮೊ ಚವ್ಹಾಣ ಮನೆಗೆ ಬಂದು ಅವರ ಮಗಳೊಂದಿಗೆ ಅನುಚಿತವಾಗಿ ಬೈದಾಡಿ ಸದರಿ ಹಿರಾಸಿಂಗ ಹಾಗೂ ಪ್ನಿ ಮತ್ತು ಮನೆಯಲ್ಲಿ ಎಲ್ಲರಿಗೂ ಜೀವದ ಬೆದರಿಕೆ ಹಾಕಿದರು.
ಈ ಬಗ್ಗೆ ಫಿರ್ಯಾದಿಕೊಡಲು ಯೋಚಿಸುವಷ್ಟರಲ್ಲಿ ಗ್ರಾಮೀಣ ಪೊಲೀಸ್ ಠಾಣೆಯ (ಪಿ.ಎಸ್.ಐ)) ಹಾಗೂ ಪೊಲೀಸರು ಏಕಾಏಕಿ ಬಂದು ಹಿಂದೆ, ಮುಂದೆ ವಿಚಾರಿಸದೇ ಅಶೋಕ ವೇಣು ಚವ್ಹಾಣ ಬೀಗರು ಇವರು ಈತನಿಗೆ ಎತ್ತಿ ಹಾಕಿಕೊಂಡು ಪೊಲೀಸ್ ಠಾಣೆಗೆ ಒಯ್ದಿದ್ದಾರೆ. ನಾನು ವಿಚಾರಣೆ ಮಾಡುವಷ್ಟರಲ್ಲಿ ಬೆಂಗಳೂರುನಿಂದ ಶಾಸಕರಾದ ದೇವಾನಂದ ಚವ್ಹಾಣ ಇವರು ವಿಷಯ ಬಗ್ಗೆ ನನಗೆ ಕರೆ ಮಾಡಿ ಗಂಭೀರವಿದ್ದು ಕೂಡಲೇ ಠಾಣೆಗೆ ಹೋಗಿ ವಿಚಾರಿಸಲು ಹೇಳಿದ್ದರು.
ಕೂಡಲೆ ನಾನು ಠಾಣೆಗೆ ಹೋದೆನು ನಾನು ಈ ವಿಷಯ ಶಾಸಕರಿಗೆ ತಿಳಿಸಬೇಕೆಂದು ನನ್ನ ಪೋನನಿಂದ ಮಾತಾಡಿಸಿ ಪಿಎಸ್‍ಐಗೆ ಕೊಡಲು ಹೋದಾಗ ಸದರಿ ಪಿಎಸ್‍ಐ ರವರು ತಿರಸ್ಕರಿಸಿ ಮಾನ್ಯ ಶಾಸಕರಿಗೆ ಅವಮಾನ ಮಾಡಿರುತ್ತಾರೆ. ಮಾಮಿ ಸದರಿ ಪಿಎಸ್‍ಐ ಅವರಿಗೆ ವಿಷಯ ಗಂಭೀರವಿದ್ದು ಅಶೋಕ ವೇಣು ಚವ್ಹಾಣ ಈತ ಯಾವುದೇ ತಪ್ಪು ಮಾಡಿಲ್ಲ ಆತನ ಹೆಂಡತಿಯ ಅಕ್ಕನ ಮಗಳ ಪರವಾಗಿ ಮಾತಾಡಿದ್ದಾನೆ. ಹೊರತು ಬೇರೆ ಏನು ಮಾಡಿರುವುದಿಲ್ಲ ಅವಮಾಯಕನಿಗೆ ಸುಮ್ಮ ಸುಮ್ಮನೆ ಠಾಣೆಗೆ ಕರಿಸಿದ್ದು ಸರಿಯಿಲ್ಲ ಸದರಿ ಅವನ ವಿರುದ್ಧ ಈ ಠಾಣೆಯಲ್ಲಿ ಯಾವುದೇ ಫಿರ್ಯಾದಿ ಇರುವುದಿಲ್ಲ ಎಂದು ಹೇಳುವಷ್ಟರ್ಲಲಿ ಸದರಿ ಪಿಎಸ್‍ಐ ಅಶೋಕ ವೇಣು ಚವ್ಹಾಣ ಇವನಿಗೆ ಅಮಾನುಸವಾಗಿ ಹೊಡೆದು ಆತನಿಗೆ ಬೂಟಲೆ ಹೊಡೆದು ಚಿತ್ರಹಿಂಸೆ ನೀಡಿರುತ್ತಾರೆ. ಅದಕ್ಕೆ ಅಲ್ಲಿ ಹಾಜರಿದ್ದ ಪೊಲೀಸ್ ಸಿಬ್ಬಂಧಿಯ ಸಾಥ ಕೊಟ್ಟಿರುತ್ತಾರೆ. ನಾನು ಒಬ್ಬ ಸಮಾಜದ ಮುಖಂಡನಾಗಿ ಪಿಎಸ್ ಐ ಗೆ ನೀವು ಮಾಡುವುದು ಸರಿಯಲ್ಲ ಸದರಿ ಅಶೋಕ ವೇಣು ಇತನ ವಿರುದ್ಧ ನಿಮ್ಮ ಠಾಣೆಯಲ್ಲಿ ಇದ್ದ ಪ್ರಕರಣಗಳಲ್ಲಿ ವಿಚಾರಣೆ ಮಾಡಲು ಅಡ್ಡಿ ಇಲ್ಲ ಅಮಾನುಷವಾಗಿ ಆತನಿಗೆ ಬಯ್ಯದಾಡಿ ಹೊಡಿಬಡಿ ಮಾಡಿ ಹಿಂಸೆ ನೀಡುತ್ತಾರೆ. ಅದಕ್ಕೆ ಹಾಜರಿದ್ದ ಪೊಲೀಸ್ ಸಿಬ್ಬಂದಿಯ ಸಾಥ ಕೊಟ್ಟಿರುತ್ತಾರೆ.
ಹಿಂಸೆನಿಗೂ ತೊಂದರೆ ಮಾಡವುದು ಕಾನೂನಿನಲ್ಲಿ ಅವಕಾಶವಿಲ್ಲ. ನೀವು ಈ ರೀತಿ ವರ್ತಿಸುವುದು ಸರಿ ಇಲ್ಲವೆಂದು ವಿನಂತಿಸಿದೆ. ಇದು ನನ್ನ ಠಾಣೆ ನಾನು ಮಾಡಿದ್ದೆ ಸರಿ ಅದನ್ನು ಕೇಳಲಿಕೆ ನೀನ್ಯಾ ಸೀಮೆ ನಾಯಕ ಹೋಗಲೇ ಅಂತು ಬೋಸಡಿಕ್ಕೆ ಅಂತ ಬಯ್ಯದು ಏಕವಚನದಲ್ಲಿ ಮಾತಾಡಿದ್ದರು. ಮತ್ತು ದೇವಾನಮದ ಫೇವಾನಂದ ಶಾಸಕರು ನನ್ನ ಮುಂದೆ ನಡೆಯುವದಿಲ್ಲ ಅಂತಾ ಜಾತಿಯ ಮೇಲೆ ಕೀಳವಾಗಿ ನೀಮದಿಸಿದ್ದರು ಕಾರಣ ನನ್ನ ಮತ್ತು ನನ್ನ ಸಮಾಜದ ಶಾಸಕನಿಗೆ ಆದ ಅನ್ಯಾಯ ದಯವಿಟ್ಟು ಸರಿಪಡಿಸಲು ಅಮಾಯಕ ಅಶೋಕ ವೇಣು ಚವ್ಹಾಣ ಈತನಿಗೆ ವಿನಾಕಾರಣ ಕಾನೂನ ವಿರೋಧವಾಗಿ ದೈಹಿಕ ಹಿಂಸೆ ನೀಡಿದ ಬಗ್ಗೆ ಸದರಿ ಪಿ.ಎಸ್.ಐ ಮೇಲೆ ಕ್ರಮ ತೆಗೆದುಕೊಳ್ಳಲು ತಪ್ಪಿದ್ದಲ್ಲಿ ಈ ವಿಷಯ ನಮ್ಮ ಸಮಾಜದ ಗಂಭೀರವಾಗಿ ಪರಿಗಣಿಸಿದೆ. ಸದರಿ ಈ ವಿಷಯವು ಗಂಭೀರವಾಗಿ ಪರಿಗಣಿಸಿ ಪಿ.ಎಸ್.ಐ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಗುಲಾಬ ಪವಾರ, ಅನೀಲ ಮಾ. ನಾಯಿಕ, ಜಾನಕುಮಾರ ಟಿ. ರಾಠೋಡ, ಕಿರಣ ನಾಯಿಕ, ವಿಕ್ರಮ ನಾಯಕ, ಶ್ರೀಧರ ಜಾಧವ, ಸಂಜು ನಾಯಕ, ಕುಮಾರ ಪಿ. ರಾಠೋಡ,ರಜನಿಕಾಂತ ರಾಠೊಡ, ರವಿ ಜಾಧವ, ಸಂಜು ರಾಠೋಡ, ರಾಮು ಜಾಧವ, ಅನೀಲ ರಾಠೋಡ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.