ಯುವತಿಗೆ ಕೈ ಕೊಟ್ಟ ಪೊಲೀಸ್ ಕಾನ್ಸಸ್ಟೇಬಲ್

ವಿಜಯಪುರ,ಜ.25-ಪೊಲೀಸ್ ಕಾನ್ಸಸ್ಟೇಬಲ್‍ನೊಬ್ಬ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವ ಘಟನೆ ನಡೆದಿದೆ.
ವಿಜಯಪುರದ ಗಾಂಧಿಚೌಕ್ ಪೆÇಲೀಸ್ ಠಾಣೆಯ ವಿನಾಯಕ ಟಕ್ಕಳಕಿ ಎಂಬ ಕಾನ್ಸಸ್ಟೇಬಲ್ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಮದುವೆಯಾಗುವುದಾಗಿ ನಂಬಿಸಿ ಈಗ ಮದುವೆಗೆ ನಿರಾಕರಿಸುತ್ತಿದ್ದಾನೆಂದು ಮೋಸಕ್ಕೆ ಒಳಗಾದ ಯುವತಿಯು ದೂರಿದ್ದಾಳೆ.
ಆರೋಪಿ ವಿನಾಯಕ ಟಕ್ಕಳಕಿ ನಾಪತ್ತೆಯಾಗಿದ್ದು, ಕಳೆದ 20 ದಿನಗಳಿಂದ ಸೇವೆಗೆ ಬಂದಿಲ್ಲ ಎನ್ನಲಾಗಿದೆ.
ಕಾನ್ಸಸ್ಟೇಬಲ್ ವಿನಾಯಕ ಪ್ರಕರಣದ ಕುರಿತು ವಿಜಯಪುರ ಮಹಿಳಾ ಪೆÇಲೀಸ್ ಠಾಣೆ ಪೆÇಲೀಸರು ದೂರು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.