ಕೋಲಾರ,ಜು.೨೦- ಕೋಲಾರ ಜಿಲ್ಲಾ ಮಾಸ್ಟರ್ ಅಥ್ಲೆಟಿಕ್ಸ್ ಅಸೋಸಿಯೇಷನ್‌ನಿಂದ ಜಿಲ್ಲೆಗೆ ಯುವಜನ ಮತ್ತು ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕರಾಗಿ ನೇಮಕಗೊಂಡಿರುವ ಗೀತಾ ಅವರನ್ನು ಸನ್ಮಾನಿಸಿ ಸ್ವಾಗತಿಸಲಾಯಿತು.
ಇದೇ ಸಂದರ್ಭದಲ್ಲಿ ನಗರದ ಮಿನಿ ಸ್ಟೇಡಿಯಂಗೆ ಕಾಂಪೌಂಡ್, ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಕಾಂಪೌಂಡ್ ತಮ್ಮ ಅವಧಿಯಲ್ಲೇ ಪೂರ್ಣಗೊಂಡಿದ್ದು, ಇದೀಗ ತಮ್ಮ ಅವಧಿಯಲ್ಲಿ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣಕ್ಕೆ ಸಿಂಥೆಟಿಕ್ ಟ್ರ್ಯಾಕ್ ಶೀಘ್ರ ಆಗಲಿ ಎಂದು ಮನವಿ ಮಾಡಲಾಯಿತು.
ಕ್ರೀಡೆಗಳಲ್ಲಿ ಕೋಲಾರ ಜಿಲ್ಲೆಗೆ ಅತ್ಯಂತ ಗೌರವದ ಸ್ಥಾನವಿತ್ತು, ಇತ್ತೀಚೆಗೆ ಕ್ರೀಡಾ ಚಟುವಟಿಕೆಗಳು ಕುಂಠಿತಗೊಂಡಿವೆ ಎಂಬ ನೋವಿದ್ದು, ತಮ್ಮ ಅವಧಿಯಲ್ಲಿ ಕ್ರೀಡೆಗಳಿಗೆ ಮತ್ತಷ್ಟು ಪ್ರಾಮುಖ್ಯತೆ ಸಿಗಲಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಮಾರಪ್ಪ, ಜಂಟಿ ಕಾರ್ಯದರ್ಶಿ ಆಂಜನೇಯರೆಡ್ಡಿ, ಸಹಕಾರ್ಯದರ್ಶಿ ಆರ್.ರವಿ, ಅಂತರ ರಾಷ್ಟ್ರೀಯ ಕ್ರೀಡಾಪಟು ನಾರಾಯಣ ಮೂರ್ತಿ, ರಾಜ್ಯಮಟ್ಟದ ಕ್ರೀಡಾಪಟು ಶಾಂತಮ್ಮ, ಅಂತರರಾಷ್ಟ್ರೀಯ ತರಬೇತುದಾರ ಎಂ.ವೆಂಕಟೇಶ್, ಹಿರಿಯ ಕ್ರೀಡಾಪಟು ಹಾಬಿ ರಮೇಶ್ ಹಾಜರಿದ್ದರು.