ಯುವಜನೋತ್ಸವ: ಗೋಡೆಗಳ ಮೇಲೆ ಚಿತ್ತಾರ

ಧಾರವಾಡ, ಜ.8: ರಾಷ್ಟ್ರೀಯ ಯುವಜನೋತ್ಸವವನ್ನು ವಿಂಜೃಭಣೆಯಿಂದ ಆಚರಿಸುವ ಹಿನ್ನೆಲೆಂiÀiಲ್ಲಿ ಧಾರವಾಡ ನಗರದ ಪ್ರಮುಖ ಕಟ್ಟಡಗಳು, ಕಾಂಪೌಂಡುಗಳ ಮೇಲೆ ವೈವಿದ್ಯಮಯ ಚಿತ್ರಕಲೆಯನ್ನು 100 ಯುವ ಕಲಾವಿದರಿಂದ 7 ತಂಡಗಳ ಮೂಲಕ ಚಿತ್ರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
7 ತಂಡಗಳು ಕವಿವಿ ಆವರಣ, ಕೆಸಿಡಿ ಸುತ್ತಮುತ್ತ ಸಪ್ತಾಪುರ ರಸ್ತೆಯುದ್ದಕ್ಕೂ ಗೋಡೆಗಳ ಮೇಲೆ ವಿವಿಧ ರಿತಿಯ ಕಲಾತ್ಮಕ ಚಿತ್ರಗಳನ್ನು ಬಿಡಿಸುತ್ತಿಲಾಗುತ್ತಿದೆ. ಕಲೆ, ಸಂಸ್ಕøತಿ, ಇತಿಹಾಸ, ಪರಂಪರೆ, ಸೇನೆ, ಕ್ರೀಡೆ, ಕೃಷಿ, ಪರಿಸರ ಕುರಿತಾದ ಯುವಕರನ್ನು ಜನಸಾಮಾನ್ಯರನ್ನು ಪ್ರೇರೆಪಿಸಲು ಹಾಗೂ ಹಬ್ಬದ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಚಿತ್ರಿಸಲಾಗುತ್ತಿದೆ. ಹಬ್ಬದ ನಿಮಿತ್ತ ಆರಂಭಗೊಂಡಿರುವ ಪೆಂಟಿಂಗ್ ಆಂದೋಲನ ಜನವರಿ 11 ರವರೆಗೂ ನಡೆಯಲಿದೆ. ಭರತ ನಾಟ್ಯ ಯಕ್ಷಗಾನ, ಕಂಬಳ, ಆನೆಅಂಬಾರಿ, ಜನಪದ ನೃತ್ಯಗಳು, ಪುರಾತನ ಸ್ಮಾರಕಗಳು ಭಾರತೀಯ ನಾಯಕರ ಚಿತ್ರಗಳನ್ನು ಚಿತ್ರಿಸಲಾಗುತ್ತಿದೆ.