ಯುವಜನೋತ್ಸವದಲ್ಲಿ ಎಲ್.ವಿ.ಡಿ ಕಾಲೇಜಿಗೆ ಪ್ರಥಮ ಸ್ಥಾನ

ರಾಯಚೂರು,ಮಾ.೦೭- ನಗರದ ಎಸ್.ಎಲ್.ಎನ್. ತಾಂತ್ರಿಕ ಮಹಾವಿದ್ಯಾಲಯವು ಹಮ್ಮಿಕೊಂಡಿದ್ದ ಅಂತರ್ ಮಹಾವಿದ್ಯಾಲಯಗಳ ಅವಿಷ್ಕಾರ್-೨೦೨೩ ಯುವಜನೋತ್ಸವದಲ್ಲಿ ಎಲ್.ವಿ.ಡಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಐಸ್ ಬ್ರೇಕಿಂಗ್ (ಸ್ಕಿಟ್), ನೇಗಿಲ ಯೋಗಿ, ಎಂಬ ಸ್ಪರ್ಧೆಯಲ್ಲಿ ಜಾಗತೀಕರಣದಿಂದ ಇಂದಿನ ರೈತರಿಗೆ ಹಾಗೂ ಅವರ ಭೂಮಿಗೆ ತಗಲುವ ಹಾನಿಯ ಬಗ್ಗೆ ಹಾಗೂ ಕಲುಷಿತ ವಾತಾವರಣದ ಬಗ್ಗೆ ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿ ನಾಗರಾಜ ಮತ್ತು ಸಂಗಡಿಗರಿಂದ ಬಹಳ ಮಾರ್ಮಿಕವಾಗಿ ಪ್ರದರ್ಶಿಸಲಾಯಿತು.
ಈ ಸ್ಪರ್ಧೆಗೆ ಪ್ರಥಮ ಸ್ಥಾನ ಒಲಿದು ಬಂತು. ಹಾಗೂ ಇನ್ನೊಂದು ಸ್ಪರ್ಧೆಯಾದ ಮಿಸ್ಟರ್ & ಮಿಸ್ಸೆಸ್ ರಾಯಚೂರು ಸ್ಪರ್ಧೆಯಲ್ಲಿ ಬಿ.ಎಸ್ಸಿ ತೃತೀಯ ವರ್ಷದ ವಿದ್ಯಾರ್ಥಿಯಾದ ಪುಷ್ಪಾಂಜಲಿ ಮತ್ತು ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿಯಾದ ಎ.ನವೀನ್ ಕುಮಾರರವರು ಭಾರತದ ಯುಗ ಪುರುಷ ಶ್ರೀರಾಮ ಮತ್ತು ಶ್ರೇಷ್ಠ ಪತಿವ್ರತೆ ಸೀತೆಯ ಪಾತ್ರದಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸುವಾಗ ವೇದಿಕೆಯ ಮುಂಭಾಗದಲ್ಲಿರುವ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿವರ್ಗ ರಾಮ ಸೀತೆಯನ್ನು ಕಂಡು ಉದ್ಘೋಷವನ್ನು ವ್ಯಕ್ತಪಡಿಸಿದರು.
ಈ ಸ್ಪರ್ಧೆಯಲ್ಲಿ ಕೂಡ ಪ್ರಥಮ ಸ್ಥಾನ ಪಡೆದು ಅವಿಷ್ಕಾರ -೨೦೨೩ ಪ್ರಶಸ್ತಿ ಪಡೆದು ಕಾಲೇಜಿನ ಕೀರ್ತಿಯನ್ನು ಉತ್ತುಂಗಕ್ಕೇರಿಸಿದಕ್ಕಾಗಿ ತಾರಾನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀ ಪಾರಸಮಲ್ ಸುಖಾಣಿ ಹಾಗೂ ಕಾಯ೯ದಶಿ೯ಗಳಾದ ಶ್ರೀ ನಂದಾಪೂರ ಶ್ರೀನಿವಾಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ವೆಂಕಟೇಶ ಬಿ. ದೇವರು ಹಾಗೂ ಉಪ-ಪ್ರಾಚಾರ್ಯರುಗಳು, ಬೋಧಕ ಬೋಧಕೇತರ ವರ್ಗದವರು ಹಷ೯ ವ್ಯಕ್ತಪಡಿಸಿದ್ದಾರೆ.
ಈ ಇವೇಂಟ್‌ಗಳನ್ನು ಕಾಲೇಜಿನ ರಾಸಾಯನ ಶಾಸ್ತ್ರ ವಿಭಾಗದ ವಿದ್ಯಾರ್ಥಿ ಸಾಗರ್ ನಿದೇ೯ಶಿಸಿದರೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿ ಕಲ್ಯಾಣ ಅಧಿಕಾರಿಗಳಾದ ಡಾ. ಕೃಷ್ಣ ನಾಯಕ್‌ರವರು ಇಡೀ ಟೀಮ್‌ಗೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.