ಯುವಜನಾಂಗ ಜಾನಪದ ಆಸಕ್ತಿ ಬೆಳೆಸಿಕೊಳ್ಳಿ:ಪಣೀಂದ್ರ

ಶಹಾಪೂರ:ಸೆ.9:ಜನಪದ ಕಲೆ, ಸಾಹಿತ್ಯ, ಸಂಗೀತ ಸಂಸ್ಕøತಿ ,ಪರಂಪರೆ, ಉಳಿಸಿ ಬೆಳಸುವ ದೃಷ್ಟಿಕೋನದಿಂದ ಇಂದಿನ ಯುವ ಜನಾಂಗ ಜಾನಪದ ಆಸಕ್ತಿ ಬೆಳಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ ಎಂದು ಯುವ ಮುಖಂಡ ಫಣೀಂದ್ರ ಪ್ರಸಾದ್ ಬೆಂಗಳೂರ ಹೇಳಿದರು, ರಂಗಂಪೇಟೆಯ ಬಸವಪ್ರಭು ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಜಾನಪದ ದರ್ಶನ ಮಾಲಿಕೆ ಉದ್ಘಾಟಿಸಿ ಮಾತನಾಡಿದ ಅವರು ಆಧುನಿಕರಣ,ನಗರೀಕರಣ,ಪಾಶ್ಚ್ಯಾತಿಕರಣದ ಪ್ರಭಾವದಿಂದ ಮೂಲ ಜಾನಪದ ಸಂಸ್ಕೃತಿ ಮತ್ತು ಪರಂಪರೆ ಅನಾವರಣಗೊಳ್ಳುತ್ತಿಲ್ಲ, ವಿದೇಶಿಗರು ಮೂಲ ಸಂಸ್ಕೃತಿಗೆ ಮರಳುತ್ತಿದ್ದಾರೆ ನಮ್ಮ ಯುವಕರು ಕೂಡ ಮೂಲ ಜಾನಪದ ಹಾಡುಗಳು ಕುಟ್ಟುವ- ಬೀಸುವ,ಸಂಪ್ರದಾಯ ಪದಗಳು ಡೊಳ್ಳು ಹಲಗೆ ,ಮೊಹರಂ, ಕರಡಿಮಜಲು ,ಕಣಿವಾದನ ಪುರವಂತಿಕೆ ಸೇರಿದಂತೆ ಈ ಭಾಗದ ಪ್ರಾದೇಶಿಕ ಕಲೆಗಳು ತರಬೇತಿ ಪಡೆದುಕೊಂಡು ಉಳಿಸಿ ಬೆಳೆಸಬೇಕಾಗಿದೆ ಎಂದು ಸಲಹೆ ನೀಡಿದರು,ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತು ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ್ ಅಂಗಡಿ ಕನ್ನಳ್ಳಿ ಮಾತನಾಡಿ ಕರ್ನಾಟಕ ಜಾನಪದ ಪರಿಷತ್ತು ಕೇಂದ್ರ ಸಮಿತಿ ಈಗಾಗಲೇ ಕಳೆದ ಮೂರು ದಶಕಗಳಿಂದ, ಕಲಾವಿದರ ಧ್ವನಿ ದಾಖಲೀಕರಣ, ಕ್ಷೇತ್ರ ಕಾರ್ಯ ಕಲಾವಿದರ ಸಮೀಕ್ಷೆ ಹಾಗೂ ಕಲಾವಿದರಿಗೆ ವೇದಿಕೆ ಗೌರವ ಸತ್ಕಾರ ನೀಡುವ ಮೂಲಕ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು, ಮುಖ್ಯ ಅತಿಥಿಗಳಾಗಿ ಶ್ರೀ ಗುರು ಸೇವಾ ಸಂಸ್ಥೆಯ ಅಧ್ಯಕ್ಷ ಮಲ್ಲು ಬಾದಾಪೂರ್ ಶಿಕ್ಷಕ ವಿನೋದ ಚಾಮನಾಳ ವೇದಿಕೆಯಲ್ಲಿದ್ದರು, ಕಾರ್ಯಕ್ರಮವನ್ನು ಸಲಿಂಪಾಶ ಅಡ್ಡೂಡಗಿ ನಿರೂಪಿಸಿದರು, ಸಿದ್ದಪ್ರಸಾದ ಸ್ವಾಗತಿಸಿದರು ಪ್ರವೀಣ್ ಜಕಾತಿ ವಂದಿಸಿದರು
ವಾರದ ಅತಿಥಿಯಾಗಿ ಡೊಳ್ಳಿನ ಕಲಾವಿದ ಪರಮಣ್ಣ ಪೂಜಾರಿ ಹೆಬ್ಬಾಳ ಪಾಲ್ಗೊಂಡು ಡೊಳ್ಳಿನ ಪದಗಳ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು