ಯುವಜನರ ಪಾಲಿಗೆ ನಿರಾಶೆದಾಯಕ ಬಜೆಟ್

ಸಂಜೆವಾಣಿ ವಾರ್ತೆ,
ವಿಜಯಪುರ,ಫೆ.18:ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ರಾಜ್ಯ ಬಜೆಟ್ 2024-25 ಯುವಜನರ ಪಾಲಿಗೆ ಅತ್ಯಂತ ನಿರಾಶೆದಾಯಕ ಬಜೆಟ್ ಆಗಿದೆ ಎಂದು ಆಲ್ ಇಂಡಿಯಾ ಡೆಮೊಕ್ರಟಿಕ್ ಯೂಥ್ ಆರ್ಗನೈಜೇಶನ್ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಅವರು ಪ್ರತಿಕ್ರಿಯಿಸಿದ್ದಾರೆ.
ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ 2.58 ಲಕ್ಷಕ್ಕೂ ಹೆಚ್ಚಿನ ಹುದ್ದೆಗಳ ನೇಮಕಾತಿಗಾಗಿ ಯಾವುದೇ ಸ್ಪಷ್ಟ ರೂಪುರೇμÉಯಿಲ್ಲದ ಕೇವಲ ಭರವಸೆಯ ಮಾತುಗಳ ಬಜೆಟ್ ಇದಾಗಿದೆ. ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಯ ಬಗ್ಗೆ ಯಾವುದೇ ಘೋಷಣೆ ಮಾಡಲಾಗಿಲ್ಲ ಎಂದು ಹೇಳಿದ್ದಾರೆ.
ಕೇವಲ ಉದ್ಯೋಗಶೀಲತೆ, ಈಗಾಗಲೇ ತರಬೇತಿ ಹೊಂದಿದ ಉದ್ಯೋಗ ಆಕಾಂಕ್ಷಿಗಳಿಗೆ ಮತ್ತೆ ಕೌಶಲ್ಯ ಅಭಿವೃದ್ಧಿ ಒದಗಿಸುವ ಮಾತುಗಳನ್ನು ಅμÉ್ಟೀ ಬಜೆಟ್‍ನಲ್ಲಿ ಹೇಳಿರುವುದು ಬಿಟ್ಟರೆ, ಇವುಗಳ ಅಂತಿಮ ಫಲಶೃತಿ ಏನು ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಈಗಾಗಲೇ ವಿವಿಧ ಕೋರ್ಸ್‍ಗಳನ್ನು ಮುಗಿಸಿ, ಕೌಶಲ್ಯ ಹೊಂದಿರುವ, ಉದ್ಯೋಗದ ನಿರೀಕ್ಷೆಯಲ್ಲಿರುವ ಲಕ್ಷಾಂತರ ಯುವ ಜನರಿಗೆ ಉದ್ಯೋಗ ಒದಗಿಸುವ ಕುರಿತು ಬಜೆಟ್ ಮೌನವಾಗಿದೆ. ನೇಮಕಾತಿಗಳಲ್ಲಿನ ಅಕ್ರಮಗಳನ್ನು ತಡೆಗಟ್ಟುವ ಬಗ್ಗೆಯಾಗಲಿ, ನೇಮಕಾತಿಯಲ್ಲಿ ಪಾರದರ್ಶಕತೆಯನ್ನು ಸ್ಥಾಪಿಸುವ ಕುರಿತಾಗಲಿ ಯಾವುದೇ ಘೋಷಣೆಗಳಿಲ್ಲ ಎಂದು ತಿಳಿಸಿದ್ದಾರೆ.
ವಿವಿಧೆಡೆ ಬಂಡವಾಳ ಹೂಡಿಕೆ ಮಾಡಿ ಒಂದಷ್ಟು ಉದ್ಯೋಗವನ್ನು ಸೃಷ್ಟಿಸುವ ಮಾತುಗಳನ್ನು ಬಿಟ್ಟರೆ ಇಡೀ ರಾಜ್ಯದಲ್ಲಿ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಸೃಷ್ಟಿ ಮಾಡುವ ಉದ್ಯೋಗಗಳ ಸಂಖ್ಯೆಯ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಯುವನಿಧಿ ಹೆಸರಿನಲ್ಲಿ ಕೇವಲ ಈ ವರ್ಷ ಡಿಪೆÇ್ಲೀಮಾ ಹಾಗೂ ಪದವಿ ಪಾಸಾದವರಿಗೆ ಮಾತ್ರ ಭತ್ಯೆ ನೀಡುತ್ತಿದ್ದು, ಹಲವಾರು ವರ್ಷಗಳಿಂದ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವ ನಿರುದ್ಯೋಗಿ ಯುವಜನರಿಗೆ ನಿರುದ್ಯೋಗ ಭತ್ಯೆ ನೀಡುವ ಕುರಿತು ಯಾವುದೇ ಯೋಜನೆಗಳಿಲ್ಲ. ಗ್ಯಾರಂಟಿ ಯೋಜನೆಗಳ ಬಗ್ಗೆ ಹೆಮ್ಮೆ ಪಡುತ್ತಿರುವ ರಾಜ್ಯ ಸರ್ಕಾರ, ನಿಜವಾಗಲೂ ಅಭಿವೃದ್ಧಿಗೆ ಕಾರಣವಾಗುವ ಉದ್ಯೋಗ ಗ್ಯಾರಂಟಿಯ ಬಗ್ಗೆ ಮೌನ ವಹಿಸಿರುವುದು ಅತ್ಯಂತ ಖೇದಕರ. ಅಲ್ಲದೇ ತನ್ನ ಚುನಾವಣಾ ಪೂರ್ವ ಭರವಸೆಯಂತೆ ಖಾಲಿ ಹುದ್ದೆಗಳ ಭರ್ತಿಗೂ ಯಾವುದೇ ಕಾರ್ಯಕ್ರಮಗಳನ್ನು ಘೋಷಿಸಿಲ್ಲ ಎಂದು ತಿಳಿಸಿದ್ದಾರೆ.
ಒಟ್ಟಾರೆ ಈ ಬಾರಿಯ ಬಜೆಟ್ ಉದ್ಯೋಗಾಕಾಂಕ್ಷಿ ಯುವ ಜನರ ಪಾಲಿಗೆ ಅತ್ಯಂತ ನಿರಾಶಾದಾಯಕ ಬಜೆಟ್ ಆಗಿದೆ ಎಂದು ಬಾಗೇವಾಡಿ ಟೀಕಿಸಿದ್ದಾರೆ.