ಯುವಜನತೆ ಹಿರಿಯ ನಾಗರಿಕರನ್ನು ಗೌರವಿಸದಿರುವುದು ಖಂಡನೀಯ:ಜೈಲರ್ ತಿಮ್ಮಣ್ಣ ಭಜಂತ್ರಿ

ಬೀದರ:ನ.12:ಇಂದಿನ ಯುವಜನತೆಯು ಪಾಲಕರು ಹಾಗೂ ಹಿರಿಯರನ್ನು ಗೌರವ ಕೊಡದೇ ನಿರ್ಲಕ್ಷಿಸುವುದು ವಿಷಾದನೀಯವಾಗಿದ್ದು ಖಂಡ ನೀಯವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಗಳಿಂದ ಪದಕ ಪಡೆದ ಬೀದರ್ ಜಿಲ್ಲಾ ಜೈಲರ್ ತಿಮ್ಮಣ್ಣ ಬಿ. ಭಜಂತ್ರಿ ಯವರು ಬೇಸರ ವ್ಯಕ್ತ ಪಡಿಸಿದರು. ಅವರು ನಗರದ ಗುರುನಾನಕ್ ಕಾಲೋನಿಯಲ್ಲಿರುವ ಜೈ ಹಿಂದ್ ಹಿರಿಯ ನಾಗರಿಕರ ಸಂಸ್ಥೆಯಲ್ಲಿ ಹಮ್ಮಿಕೊಂಡ “ಹಿರಿಯ ನಾಗರಿಕರು ಸಮಾಜದ ಆಸ್ತಿ” ವಿಷಯದ ಮೇಲೆ ಏರ್ಪಡಿಸಿರುವ ವಿಶೇಷ ಉಪನ್ಯಾಸ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ನಾಲ್ಕು ರಾಜ್ಯಗಳ ತರಬೇತಿಯಲ್ಲಿ ಕೇರಳ ಹಾಗೂ ಆಂಧ್ರ ರಾಜ್ಯಗಳ ಪ್ರಶಸ್ತಿಗೆ ಭಾಜನರಾದ ಭಜಂತ್ರಿ ಯವರು ಮಾತನಾಡುತ್ತ, ಮಹಾತ್ಮಾ ಗಾಂಧೀಜಿ, ಜವಾಹರಲಾಲ್ ನೆಹರೂ, ಲಾಲಬಹದ್ದೂರ ಶಾಸ್ತ್ರಿ, ವಲ್ಲಭಭಾಯಿ ಪಟೇಲ, ಸುಭಾಷ್ ಚಂದ್ರ ಬೋಸ್, ಬಾಬಾಸಾಹೇಬ್ ಅಂಬೇಡ್ಕರ್ ಮುಂತಾದ ಹಿರಿಯ ಮಹನೀಯರಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿರುವುದನ್ನು ಇಂದಿನ ಯುವಕರು ನೆನಪೇ ಮಾಡುವುದಿಲ್ಲ. ಹಿರಿಯರು ಬಂದಾಗ ಅವರಿಗೆ ಎದ್ದು ನಿಂತು ನಮಸ್ಕರಿಸಿ ಗೌರವ ಸೂಚಿಸುವ ಸಂಸ್ಕಾರಕ್ಕೆ ತಿಲಾಂಜಲಿ ನೀಡಿದ್ದಾರೆ. ಹಿರಿಯರು ಎದುರು ಹಾದು ಹೋಗುತ್ತಿರುವಾಗ ಕಾಲ ಮೇಲೆಕಾಲು ಹಾಕಿಕೊಂಡು ಕುಳಿತುಕೊಳ್ಶಬಾರದು ಎಂದು ಮನವಿ ಮಾಡಿದರು. ಒಚಿಟಿಜiಡಿ, mಚಿsರಿiಜ, ಛಿhuಡಿಛಿh ಎಲ್ಲ ಆರು ಅಕ್ಷರಗಳು. ಉeeಣhಚಿ, ಕಿuಡಿಚಿಟಿ, ಃibಟe ಇವೆಲ್ಲ ಐದು ಅಕ್ಷರಗಳು. ಆರರಲ್ಲಿ ಐದನ್ನು ಕಳೆದರೆ ಬರುವುದು ಒಂದು. ಹೀಗಾಗಿ ಎಲ್ಲಾ ಧರ್ಮಗಳೂ ಒಂದೇ. ನಾವೆಲ್ಲರೂ ಒಂದೇ ಎನ್ನುವ ಮನೋಭಾವವನ್ನು ಸರ್ವರೂ ಬೆಳೆಸಿಕೊಳ್ಳುಬೇಕೆಂದು ಕರೆ ನೀಡಿದರು. ಸಂಸ್ಥೆಯ ಕಾರ್ಯದರ್ಶಿ ವೀರಭದ್ರಪ್ಪ ಉಪ್ಪಿನ್ ರವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿದರು. ಗೌರವಾಧ್ಯಕ್ಷರಾದ ಪೆÇ್ರ. ದೇವೇಂದ್ರ ಕಮಲ್ ರವರು ಅಧ್ಯಕ್ಷತೆ ವಹಿಸಿದ್ದರು.

ನಾರಾಯಣ್ ರಾವ ಕಾಂಬಳೆ ಯವರು ಸ್ವಾಗತ ಗೀತೆ ಹಾಡಿದರು.ಕೊನೆಯಲ್ಲಿ ಗಂಗಪ್ಪ ಸಾವಳೆ ವಂದಿಸಿದರು.

ಅಧ್ಯಕ್ಷರಾದ ರಾಮಕೃಷ್ಣ ಮುನಿಗ್ಯಾಲ, ಕೆ. ವಿ. ಪಾಟೀಲ, ಶಿವರಾಯ, ಮಚ್ಛ್‍ಂದ್ರನಾಥ ಎಕಲಾರ್, ರಾಜೇಂದ್ರ ಸಿಂಗ್ ಪವಾರ್, ದತ್ತಾತ್ರೇಯ ಕು. ಸೊಮೇಶ, , ಬಸವರಾಜ ಘುಳೆ, ವಿಜಯಕುಮಾರ್ ಅತನೂರ್, ಡಾ. ಸುಭಾಷ್ ಪೆÇೀಲಾ, ಶಿವಪುತ್ರ ಮೆಟಗೆ, ಗುಂಡೆರಾವ್ ದೇಶಮುಖ, ರತೀನ್ ಕಮಲ್, ಸಿಮರಾನ್ ಕೌರ್, ಶ್ರೀ ಕಾಂತ ಜೈಲು ಸಿಬ್ಬಂದಿ, ಮುಂತಾದವರು ಭಾಗವಹಿಸಿದ್ದರು.