ಯುವಜನತೆ ದೇಶಾಭಿಮಾನ ಬೆಳೆಸಿಕೊಳ್ಳಲಿ : ಸಾಹಿತಿ ಚಿಟ್ಮೆ

ಔರಾದ : ಆ.16:ಯುವ ಜನತೆ ದೇಶಭಕ್ತಿ, ದೇಶಾಭಿಮಾನ ಬೆಳೆಸಿಕೊಂಡು ನಮ್ಮ ದೇಶದ ಸ್ವಾತಂತ್ರ??ವನ್ನು ಗೌರವದಿಂದ ಕಂಡು ನಾನು ನುಡಿ ಸಂಸ್ಕøತಿ ಪರಂಫರೆಯನ್ನು ಬೆಳೆಸಬೇಕು ಎಂದು ಸಾಹಿತಿ, ಶಿಕ್ಷಕ ನಾಗನಾಥ ಚಿಟ್ಮೆ ಹೇಳಿದರು. ಪಟ್ಟಣದ ಮಿನಿವಿಧಾನ ಸೌಧದಲ್ಲಿ ತಾಲೂಕು ಆಡಳಿತದಿಂದ ನಡೆದ 76ನೇ ಸ್ವಾತಂತ್ರೋತ್ಸವ ದಿನಾಚರಣೆಯಲ್ಲಿ ಉಪನ್ಯಾಸಕರಾಗಿ ಮಾತನಾಡಿದರು.
ಪ್ರತಿಯೊಬ್ಬರೂ ದೇಶಭಿಮಾನ, ಭಾತ್ರತ್ವ ಬೆಳೆಸಿಕೊಳ್ಳುವುದು ಅವಶ್ಯವಿದೆ. ಯುವಕರು ತಮ್ಮ ಹಕ್ಕು ಪಡೆಯಲು ಮತ್ತು ಅನ್ಯಾಯ, ಭ್ರಷ್ಟಚಾರದ ವಿರುದ್ಧ ಹೋರಾಡಬೇಕು. ಅಲ್ಲದೇ ದೇಶಕ್ಕಾಗಿ ಜೀವ ಬಲಿದಾನ ಮಾಡಿದ ಮಾಹನ್ ವ್ಯಕ್ತಿಗಳ ರಾಷ್ಟ್ರಭಕ್ತ ಮಹಾಪುರುಷರ ಜೀವನ ಚರಿತ್ರೆ ರಾಷ್ಟ್ರಾಭಿಮಾನ ಬೆಳೆಸಲು ಯುವಕರು ಮುಂದಾಗಬೇಕೆಂದು ಸಲಹೆ ನೀಡಿದರು. ನಾವೆಲ್ಲರೂ ನಮ್ಮ ಸ್ವಾರ್ಥಕ್ಕಾಗಿ ಜೀವನ ನಡೆಸುತ್ತಿದ್ದೇವೆ. ಆದರೆ ದೇಶದ ಅಭಿವೃದ್ಧಿ ಬಗ್ಗೆ ತಲೆ ಕೆಡಸಿಕೊಳ್ಳುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಶಾಸಕ ಪ್ರಭು ಚವ್ಹಾಣ ಮಾತನಾಡಿ, ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿರಿಸಿದ್ದ ಮಹಾತ್ಮಗಾಂಧಿ, ಸುಭಾಷಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್, ವೀರ ಸಾವರ್ಕರ್, ಬಾಲ ಗಂಗಾಧರ ತಿಲಕ್, ಭಗತಸಿಂಗ್, ಚಂದ್ರಶೇಖರ್ ಆಜಾದ್‍ರಂತಹ ಹೋರಾಟಗಾರರ ಜೀವನವನ್ನು ಪ್ರೇರಣೆಯಾಗಿಸಿಕೊಂಡು ನಾಡಿನ ಒಳಿತಿಗಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಶಾಸಕನಾದ ಮೇಲೆ ತಾಲೂಕಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸಿದ್ದೇನೆ. ನಾನು ಶಾಸಕನಾಗಿ ಆಯ್ಕೆಯಾಗುವ ಮೊದಲು ತಾಲೂಕಿನ ಫಲಿತಾಂಶ ಕೇವಲ ಶೇ. 30-35 ಮಾತ್ರ ಇತ್ತು ಎಂದರು.
ತಹಸೀಲ್ದಾರ ಮಲ್ಲಶೆಟ್ಟಿ ಚಿದ್ರೆ ಧ್ವಜಾರೋಹಣ ನೆರವೇರಿಸಿದರು. ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ತಾಪಂ ಇಒ ಬೀರೇಂದ್ರ ಸಿಂಗ್ ಠಾಕೂರ್, ಬಿಇಒ ಮಕ್ಸೂದ್ ಅಹ್ಮದ್, ಸಿಪಿಐ ರಘುವೀರಸಿಂಗ್ ಠಾಕೂರ್, ಪಪಂ ಮುಖ್ಯಾಧಿಕಾರಿ ಸ್ವಾಮಿದಾಸ, ಲೋಕೋಪಯೋಗಿ ಎಇಇ ವೀರಶೆಟ್ಟಿ ರಾಠೋಡ್, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡರು. ಕಸಾಪ ತಾಲೂಕು ಅಧ್ಯಕ್ಷ ಶಾಲಿವಾನ್ ಉದಗೀರೆ ನಿರೂಪಿಸಿದರು. ಈ ವೇಳೆ ನಾನಾ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆದವು.